ಅವಿಚ್ಛಿನ್ನ ನಡೆ ನನದೇ...
ಅವಿಚ್ಛಿನ್ನ ನಡೆ ನನದೇ... ಗೆಲುವು ನಡೆಯಲೆದ್ದಾಗ ತಡೆಗಾಲುಗಳೇ ಹೆಚ್ಚು ತನ್ನಷ್ಟಕ್ಕೆ ತಾನೇ ಗೆಲುವಿನೊಲವ ತಡೆವ ಹುಚ್ಚು ಬಿಡದೆ ಗೆಲುವೆ ತಡೆದ ಕಾಲನೇ ಗಾಲಿಯಾಗಿಸಿ ಬಿನ್ನವಾಗಿದ್ದರೆ ಎದುರು ಅವಿಚ್ಛಿನ್ನ ನಡೆ ನನದೇ. ಮನಸು ಖುಷಿಯನೊತ್ತು ಸುತ್ತುವಾಗಲೆಲ್ಲಾ ಹುಸಿ ಕನಸುಗಳ ಸಂತೆಯ ಜನಜಂಗುಳಿಗಳು ಬಿರುಸಾಗಿ ಒದರಿ ನಿಂತು ಸೊಗಸಾಗಿ ನಲಿಯುವೆ ಹಸಿರಾಗಿದ್ದರೆ ಉದುರು ಮಳೆಗೆ ಅವಿಚ್ಛಿನ್ನ ಬೆಳೆ ನನದೇ. ಹುಲುಸಾಗಿ ತೆನೆಯೊತ್ತು ಮೈದುಬಿದೆದೆ ಮೆರೆವಾಗಲೆಲ್ಲಾ ಹೊಲಸು ಮಳೆಗೆ ಸುರಿದು ಗರ್ಭದೊಳಿಳಿದು ಪಾತಿಸುವ ಮನಸು ಗರಿಯ ಮುಚ್ಚಿ, ಧೃಡತೆ ಹೆಚ್ಚಿ ಹಡೆದೇ ಹಡೆವೆ ಹಸಿದೊಡಲ ತುಂಬಿಸುವೆ ಅವಿಚ್ಛಿನ್ನ ತೃಪ್ತಿ ನನದೆ. ಸಾರಿ ಹೇಳುವ ಸಾಧನೆಯ ಎಂದೆನ್ನುವಾಗಲೇ ಭಾರೀ ಕರಿನೆರಳ ಛಾಯೆಯಾವರಿಸುವ ಹುಚ್ಚು ತವಕ ಭಾವುಕನಾಗದೇ, ಭಾಷ್ಪವಾಗದೇ ನಿಶ್ಚಿತ ಸಾಗುವೆ ಸಾಧನೆಯ ಶಿಖರವನೇರೇ ಏರುವೆ ಅವಿಚ್ಛಿನ್ನ ಜಯ ನನದೆ . ರಚನೆ : ಕುಮಾರ್ ಬಿ ಬಾಗೀವಾಳ್