Posts

Showing posts with the label threptin

Do you know about protein supplements?

Image
ಪ್ರೋಟೀನ್ ಬಗ್ಗೆ ಒಂದಿಷ್ಟು ನಮ್ಮ ಉತ್ತಮ ದೈಹಿಕ ಆರೋಗ್ಯ ಮತ್ತು ಅರಿವಿನ ಸಾಮರ್ಥ್ಯಗಳು ನಾವು ಸೇವಿಸುವ ಪೌಷ್ಟಿಕಾಂಶದ ಮೇಲೆ ಅವಲಂಬಿಸಿರುತ್ತದೆ . ನಮ್ಮ ದೇಹದ ಆರೋಗ್ಯ ನಮ್ಮ ಆಹಾರ ಪದ್ಧತಿಯೇ ಆಗಿರುವುದು ಸ್ಪಷ್ಟ. ನಮ್ಮಲ್ಲಿ ಅನೇಕರ ಆಹಾರ ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧ . ಇದು ಅವರ ಆಹಾರದ ಸರಿಸುಮಾರು ಶೇಕಡಾ 70-80ರಷ್ಟಿದೆ. ಪ್ರೋಟೀನ್ ಮೂಲಗಳಾದ ಡೈರಿ ಉತ್ಪನ್ನಗಳು, ಪ್ರಾಣಿ ಆಹಾರಗಳು ಮತ್ತು ದ್ವಿದಳ ಧಾನ್ಯಗಳನ್ನು ನಾವು  ಸೀಮಿತ ಪ್ರಮಾಣದಲ್ಲಿ ಸೇವಿಸುತ್ತವೆ. ಭಾರತೀಯ ಮಾರುಕಟ್ಟೆ ಸಂಶೋಧನಾ ಬ್ಯೂರೋದ 2017 ರ ವರದಿಯ ಪ್ರಕಾರ  ಭಾರತೀಯರಲ್ಲಿ ಪ್ರೋಟೀನ್ ಕೊರತೆಯು ಶೇಕಡಾ 80 ಕ್ಕಿಂತ ಹೆಚ್ಚು ಇದೆ, ಪ್ರೋಟೀನ್ನನನ್ನು ಪ್ರತಿ ದಿನಕ್ಕೆ  60 ಗ್ರಾಂ ಬೇಕಂಬುದು ಅದರ ಶಿಫಾರಸು. ನಿಯಮಿತ ಆಹಾರದಲ್ಲಿ ಪ್ರೋಟೀನ್‌ಗಳ ಸಾಮಾನ್ಯ ಮೂಲಗಳು-ಒಂದು ಕಪ್ ಹಸಿರು ಕಾಳುಗಳು,  1 ಗ್ಲಾಸ್ ಹಾಲು, ಅಥವಾ 1 ಕಪ್ (200 ಗ್ರಾಂ) ಮೊಸರು-7-8 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಮೊದಲ ಸಾವಿರ ದಿನಗಳಲ್ಲಿ ಪ್ರೋಟೀನ್ ಸೇವನೆ ಬಹು ಮುಖ್ಯವಾದ ಅಂಶ ಎಂಬುದನ್ನು ನಾವು ತಿಳಿಯಬೇಕಿದೆ. ಇದರಿಂದಾಗಿ ತಾಯಿಯ ಗರ್ಭದಲ್ಲಿ ಮತ್ತು ಜನನದ ನಂತರ ಮಕ್ಕಳಿಗೆ ಉತ್ತಮ ಗುಣಮಟ್ಟದ ಮತ್ತು ಪ್ರಮಾಣದ ಪ್ರೋಟೀನ್‌ಗಳು ಬೆಳೆಯುತ್ತವೆ. ಗರ್ಭಧಾರಣೆಯ ಮೂರನೇ ತ್ರೈಮಾಸಿಕದಲ್ಲಿ ಪ್ರೋಟೀನ್‌ನ ಅಗತ್ಯವು ಹಿಂದಿನ ಹಂತಗಳಿಗಿಂ...