ನೋವೆಲ್ಲಿಯೂ ತಾ ತೋರದ ದೈವ…. A poem on mother by Kumar B Bagival
ನೋವೆಲ್ಲಿಯೂ ತಾ ತೋರದ ದೈವ… . ಕಲ್ಲೊಂದಿದೆ ಕಣ್ಣೆದುರಿಗೆ ಕಲೆಯಾಗಿ, ಕಡೆವಾಗಿನ ನೋವೆಲ್ಲಿಯೂ ತಾ ತೋರದೇ. ಮರವೊಂದಿದೆ ಮನದೆದುರಿಗೆ ಸುಗಂಧವಾಗಿ ತೇಯುವಾಗಿನ ನೋವೆಲ್ಲಿಯೂ ತಾ ತೋರದೆ. ಕಬ್ಬೊಂದಿದೆ ಕಣ್ಣೆದುರಿಗೆ ಸಿಹಿಯಾಗಿ, ಅರೆವಾಗಿನ ನೋವೆಲ್ಲಿಯೂ ತಾ ತೋರದೆ. ಬತ್ತಿಯೊಂದಿದೆ ಕಣ್ಣೆದುರಿಗೆ ಬೆಳಕಾಗಿ ಉರಿವಾಗಿನ ನೋವೆಲ್ಲಿಯೂ ತಾ ತೋರದೆ. ಮರವೊಂದಿದೆ ಕಣ್ಣೆದುರಿಗೆ ನೆಳಲಾಗಿ, ಉರಿಬಿಸಿಲಿನ ನೋವೆಲ್ಲಿಯೂ ತಾ ತೋರದೆ. ಧರೆಯೊಂದಿದೆ ಕಣ್ಣೆದುರಿಗೆ ವರವಾಗಿ, ನೀನೀಡುವ ನೋವೆಲ್ಲಿಯೂ ತಾ ತೋರದೆ. ಮನವೊಂದಿದೆ ಕಣ್ಣೆದುರಿಗೆ ದೈವವಾಗಿ ತಾ ಹೆತ್ತು ಹೊತ್ತು ಸಲುಹಿದ ನೋವೆಲ್ಲಿಯೂ ತಾ ತೋರದೆ. ಬಯಸಿದೆ ನಿನ್ನ ಸುಖವನೆ ಅನುದಿನವು ತಾ ಮರೆಯದೆ . ರಚನೆ: ಕುಮಾರ್ ಬಿ ಬಾಗೀವಾಳ್.