Posts

Showing posts with the label #environment # bbksir #forgiveme

ಸ್ವಗತ... Swagatha a poem on environment by Kumar B Bagival

  ಸ್ವಗತ... ನನ್ನೊಡಲ ಸೇರಿವೆ ಅದೆಷ್ಟೋ  ಆಗದ , ಮಾಗದ,ಅಗಾಧ ವಸ್ತುಗಳು ಗರ್ಭಗುಡಿಯಲಡಗಿಸಿದ್ದು ಯಾರು?  ಸ್ವಗತಿಸುತಿದೆ ತನ್ನಲ್ಲೇ ಇಳೆ ಕೇಳದೇ ಯಾರನು. ಬಸಿರು ತುಂಬ ಉಸಿರಾಗದ ಕಸದ ರಾಶಿ ಹಸಿರು ಮುಖದ ತುಂಬ ಕೊರೆದ ಕೊಳವೆಯ ಗಾಯ ತಿಳಿರಕ್ತವನೇ ಬತ್ತಿದರೂ ಬಿಡದೆ ಹೀರಿ ಕುಡಿದವರು ಯಾರು?  ಸ್ವಗತಿಸುತಿದೆ ತನ್ನಲ್ಲೇ  ಧರೆ ಕೇಳದೇ ಯಾರನು. ನಾ ಕೊಟ್ಟಿದ್ದನ್ನೇ ಕುಡಿದು, ನನ್ನಸಿರನ್ನೇ ಕಡಿದು ನಾ ಕೊಟ್ಟಿದ್ದನ್ನೇ ಉಟ್ಟು, ನನ್ನ ದೇಹಕೇ ಕೊಡಲಿ ಇಟ್ಟು ನಾ ಕೊಟ್ಟಿದ್ದನೇ ತಿಂದು, ನನಗೇ ಕುತ್ತು ತಂದವರು ಯಾರು?  ಸ್ವಗತಿಸುತಿದೆ ತನ್ನಲ್ಲೇ ಭುವಿ ಕೇಳದೇ ಯಾರನು. ನೆಟ್ಟವುಗಳಿಗಿಂತ ಹೆಚ್ಚು ಸುಟ್ಟವುಗಳೇ  ನೀರೆರೆದದ್ದಕ್ಕಿಂತ ಹೆಚ್ಚು ವಿಷವನೆರೆದುದೇ  ಉಳಿಸಿದ್ದಕ್ಕಿಂತ ಹೆಚ್ಚು ಅಳಿಸಿದ್ದೇ ಯಾರು? ಸ್ವಗತಿಸುತಿದೆ ತನ್ನಲ್ಲೇ ಪೃಥ್ವಿ ಕೇಳದೇ ಯಾರನು. ನನಗುಣಿಸಿದ ವಿಷವದು ತನಗೇ ಎಂದು ನನಗೆಣಿಸಿದ ಅಳಿವದು ತನಗೇ ಎಂದು ನನ್ನುಸಿರಡಗಿಸಿದ ಉಸಿರದು ತನ್ನದೇ ಎಂದು ಒಂದನೂ ಅರಿಯದ ಮೂರ್ಖನದು ಯಾರು? ಸ್ವಗತಿಸುತಿದೆ ತನ್ನಲ್ಲೇ ಭೂಮಿ ಕೇಳದೇ ಯಾರನು. ರಚನೆ : ಕುಮಾರ್ ಬಿ ಬಾಗೀವಾಳ್ .

Kshamisi bidu omme.... Adu Naane. A beautiful article about Environmental Day. By : Kumar B Bagival

Image
ಕ್ಷಮಿಸಿ ಬಿಡು ಒಮ್ಮೆ… ಅದು ನಾನೆ. ನೀ ಕೊಟ್ಟ ವರವೇ ಅಂತಹದ್ದು ಮಾತು ಮಾತಿಗೂ ನಾ ಉಳಿಸುವೆ ನಿನ್ನ ಎನ್ನೋ ಎಷ್ಟೋ ಮಾತುಗಳು ನಿನ್ನಲ್ಲೇ ಮುಚ್ಚಿ ಹೋಗಿರಬೇಕು. ನಿನ್ನಷ್ಟೂ ಶಕ್ತಿಯನ್ನೂ ಇಂಚಿಂಚೂ ಬಳಸಿರುವ ನಾ ಉಳಿಸಿರುವುದೇನೂ ಇಲ್ಲ. ಇದ್ದಷ್ಟೂ ದಿನ ಬಳಸಿ ದಿನದೂದಡುವ ಜಯಮಾನದವನೇ ಆಗಿಬಿಟ್ಟಿದ್ದು ನನ್ನ ದುರುಳ ನಡೆ. ನಿನ್ನಿಂದಲೇ ಪಡೆದ ಎಲ್ಲವುಗಳ ಪ್ರಭಾರಿ ನಾನಾದರೂ , ನನ್ನವೇ ಇದೆಲ್ಲಾ ಎಂದು ಬಿಂಬಿಸಿಕೊಂಡು ಇಲ್ಲದ ಅಧಿಕಾರ ಚಲಾಯಿಸಿರುವೆ. ಅಷ್ಟು ತಾಳ್ಮೆಯಿಂದಿದ್ದ ನಿನ್ನನ್ನು ಉದ್ರೇಕಿಸಿದ್ದು ನಾನೇ. ನಿನ್ನಂತರಾಳದೆದೆಯ ಜೀವ ಹಿಂಡಿದವನೂ ನಾನೆ. ನೀನೇನೇ ನನ್ನ ಮಗನಲ್ಲವೇ ಕುಡಿಯಲಿಬಿಡು ಅವನಿಲ್ಲದೆ ಮತ್ಯಾರಿಗೆಂದು ನೀಡಿದ ಎದೆಯಾಲನ್ನಷ್ಟೇ ಹೀರಲಿಲ್ಲ ನಾನು ರಕ್ತ ಸಮೇತನಾಗಿ ಹೀರಿ ನಿನ್ನಡಲ ಬರಿದಾಗಿಸಿದ್ದೂ ನಾನೇ. ನೀ ನೀಡಿದ ಹಾಸಿಗೆಯಿದ್ದಷ್ಟಕೇ ಕಾಲುಚಾಚಾದೆ ಕಾಲನೀಜಿ ಬದುಕ ಸಾಗಿಸೊ ಬರದಿ ಬಿದ್ದಿದೆ ಹಾಸಿಗೆಯಾಚೆ ಕಾಲು… ನೆತ್ತಿಯನೆಲ್ಲಾ ಬರಿದುಮಾಡಿದವ ನಾನೇ. ಕೋಟಿ ಕನಸುಗಳನ್ನೊತ್ತು ನನ್ನ ಮಿತಿಯನರಿಯದೇ ನಿನ್ನೊಡಲ ಹಸಿರ ಬಸಿರ ಕಡಿದು, ಉಸಿರಿಗೂ ಕಾಸಿಟ್ಟು ಪಡೆವ ಸ್ಥಿತಿಯನ್ನು ತಂದುಕೊಂಡಿದ್ದೂ ನಾನೇ. ನಗರೀಕರಣದ ಹೆಸರಿನಲ್ಲಿ ಅನಾಗರೀಕನಾಗಿ ವರ್ತಿಸುತ್ತಿರುವವ ಮೆರೆದೆತಾಪ್ನನು ನಿನ್ನ ಹಾಗೆ ಬಿಡದೆ ನಿನ್ನನೇ ಆಳುವೆನೆಂದೊರಟು ಮಣ್ಣು ಮುಕ್ಕಿದ್ದೂ,ಮಣ್ಣ ಕೆಳಗೆ ಸಿಕ್ಕಿದ್ದೂ,ಕೊಚ್ಚಿ ಹೋಗಿದ್ದೂಹೋಗಿದ್ದೂ, ಕೊಳ...