Posts

Showing posts with the label Veerashaivism

ವಚನಾನುಕರಣೆ Vachana Anukarane

Image
  ವಚನಾನುಕರಣೆ. ಅನುಕರಣೆ ೧. ದಿನಾಂಕ: ೨೦/೧೦/೨೦೨೦ ಶಿವ ಶರಣೆ ಅಕ್ಕ ಮಹಾದೇವಿ ರಚಿತ ಕೃಪೆ: ಇಂಟರ್ನೆಟ್ ಗುರು ತನ್ನ ವಿನೋದಕ್ಕೆ ಗುರುವಾದ  ಗುರು ತನ್ನ ವಿನೋದಕ್ಕೆ ಲಿಂಗವಾದ  ಗುರು ತನ್ನ ವಿನೋದಕ್ಕೆ ಜಂಗಮವಾದ  ಗುರು ತನ್ನ ವಿನೋದಕ್ಕೆ ಪಾದೋದಕವಾದ  ಗುರು ತನ್ನ ವಿನೋದಕ್ಕೆ ಪ್ರಸಾದವಾದ  ಗುರು ತನ್ನ ವಿನೋದಕ್ಕೆ ವಿಭೂತಿಯಾದ  ಗುರು ತನ್ನ ವಿನೋದಕ್ಕೆ ರುದ್ರಾಕ್ಷಿಯಾದ  ಗುರು ತನ್ನ ವಿನೋದಕ್ಕೆ ಮಹಾಮಂತ್ರವಾದ.  ಇಂತೀ ಭೇದವನರಿಯದೆ,  ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ  ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಬಾರದು.  ಅದಲ್ಲದೆ ಒಂದರಲ್ಲಿಯೂ ವಿಶ್ವಾಸ ಬೇರಾದಡೆ  ಅಂಗೈಯಲ್ಲಿರ್ದ ಲಿಂಗವು ಜಾರಿತ್ತು.  ಮಾಡಿದ ಪೂಜೆಗೆ ಕಿಂಚಿತ್ತು ಫಲಪದವಿಯ ಕೊಟ್ಟು  ಭವಹೇತುಗಳ ಮಾಡುವನಯ್ಯಾ.  ಇಷ್ಟಲಿಂಗದಲ್ಲಿ ನೈಷ್ಠೆ ನಟ್ಟು ಬಿಟ್ಟು ತ್ರಿವಿಧವ ಮರಳಿ ಹಿಡಿಯದೆ ವಿರಕ್ತನಾದನಯ್ಯಾ ಗುರು  ಚೆನ್ನಮಲ್ಲಿಕಾರ್ಜುನಾ ವಿವರ: ಈ ವಚನದಲ್ಲಿ ಅಕ್ಕಮಹಾದೇವಿಯವರು ಗುರುವಿನ ಮಹತ್ತರವಾದ ಸ್ಥಾನವನ್ನು ನೆನಪಿಸುತ್ತಾ ಅನುಸರಿಸಬೇಕಾದದ್ದರ ಕುರಿತು ನುಡಿಯುತ್ತಾರೆ. ತನ್ನ ಅರಿವಿಗೆ ಗುರು, ಗುರು,ಲಿಂಗ, ಜಂಗಮ,ಪಾದೋದಕ,ಪ್ರಸಾದ,ವಿಭೂತಿ,ರುದ್ರಾಕ್ಷಿ, ಹಾಗೂ ಓಂ ನಮಃ ಶಿವಾಯವೆಂಬ ಮಹಾಮಂತ್ರಗಳ ಮಹತ್ವದ ಅವಶ್ಯಕತೆ ಬಗೆಗೆ ನುಡಿದಿದ...

ವೀರಶೈವ ಮತ್ತು ಇತರೆ ಶೈವ ಪಂಥಗಳಿಗೂ ಅಂತರ ಇದೆಯಾ? (ವೀರಶೈವ ಮತ್ತು ಲಿಂಗಾಯತ ಬೇರೆ ಬೇರೇನಾ?) ಶಿವಶರಣ ಆದಯ್ಯನವರ ಈ ವಚನದಲ್ಲಿದೆ ಉತ್ತರ!

ವೀರಶೈವ ಮತ್ತು ಇತರೆ ಶೈವ ಪಂಥಗಳಿಗೂ ಅಂತರ ಇದೆಯಾ? ( ವೀರಶೈವ ಮತ್ತು ಲಿಂಗಾಯತ ಬೇರೆ ಬೇರೇನಾ? ) ಶಿವಶರಣ ಆದಯ್ಯ ನವರ  ಈ ವಚನದಲ್ಲಿದೆ ಉತ್ತರ ! ದೂರದ ಗುಜರಾತ್ ನ ಶಿವಪುರ ಎಂಬ ಗ್ರಾಮವೊಂದರಲ್ಲಿ ಘೋರದತ್ತ ಮತ್ತು ಪುಣ್ಯಾವತಿ ದಂಪತಿಗಳ ಮಗನಾಗಿ 1160ರಲ್ಲಿ ಜನಿಸಿದ ಶಿವಶರಣ ಆದಯ್ಯನವರು ಸೌರಾಷ್ಟ್ರ ಸೋಮೇಶ್ವರ ಅಂಕಿತದೊಂದಿಗೆ ಸುಮಾರು 403 ವಚನಗಳನ್ನು ತಮ್ಮ ಅನುಭವದ ಪಥದಲ್ಲಿ ಗೋಚರ ಸತ್ಯವೆಂಬಂತೆ ಬಿಂಬಿಸಿದ್ದಾರೆ. ಗುಜರಾತಿನವರಾಗಿದ್ದರೂ ಕನ್ನಡದ ನೆಲದಲ್ಲಿ ಕನ್ನಡದಲ್ಲಿ ವಚನಗಳನ್ನು ರಚಿಸಿ ಅಂಗ , ಲಿಂಗಗಳ ಸಾಮರಸ್ಯವನ್ನು ತಮ್ಮ ಅನಭಾವದಿಂದ ಪಡೆದು ವಚನಗಳ ರೂಪದಲ್ಲಿ ಸಮಾಜಕ್ಕೆ ಅರ್ಪಿಸಿರುವುದು ಶ್ಲಾಘನೀಯ.ಬಸವಣ್ಣ ಮತ್ತು ಅಲ್ಲಮರ ಪ್ರಭಾವ ಇವರಲ್ಲಿ ಕಾಣ ಸಿಗುತ್ತದೆ, ಶರಣ ಚಳುವಳಿಯ ಪ್ರಮುಖರಲ್ಲಿ ಒಬ್ಬರಾದ ಶರಣ ಆದಯ್ಯನವರು ತಮ್ಮದೇ ವಿಚಾರಗಳಿಗನುಗುಣವಾಗಿ ಶೈವ ಪ್ರಭೇದಗಳ ಹೋಲಿಕೆ ವ್ಯತ್ಯಾಸಗಳನ್ನು ವಿಶ್ಲೇಷಣೆ ಮಾಡಿರುವುದು ವೀರಶೈವ ಮತ್ತು ಲಿಂಗಾಯತ ಎರಡೂ ಬೇರೆ ಬೇರೆ ಎನ್ನುವವರಿಗೆ ಒಂದೇ ಎನ್ನುವಂತೆ ತಿಳಿಸಬಯಸಿದ್ದಾರೆ ಎಂದರೆ ತಪ್ಪಾಗಲಾರದು. ಶೈವ ಪ್ರಭೇಧಗಳನ್ನು  ವೀರಶೈವ ಮತ್ತು ಶುದ್ಧ ಶೈವ( ಇತರೆ ಶೈವ ಪಂಥಗಳು)ಗಳೆಂಬ ಎರಡು ಪಕ್ಷಗಳಾಗಿ ಕಾಣುವ ಶರಣ ಆದಯ್ಯ ಅವುಗಳಂತರಗಳನ್ನು ಹೋಲಿಕೆಗಳನ್ನು ಕೊಡುವುದರ ಮೂಲಕ ಹೇಳಲಿಚ್ಚಿಸುತ್ತಾರೆ. ಶರಣರ ಹಾದಿಯೇ ಹಾಗೆ ನೇರ ನಡೆ ನುಡಿಯುಳ್ಳದ್ದು. ಆಚಾರ ವಿಚಾರಗಳ...