Hodike yeke maathige... Poem by Kumar B Bagival
ಹೊದಿದಕೆ ಏಕೆ ಮಾತಿಗೆ... ಮಾತಿಗಿಳಿವ ಮುನ್ನ ಮೌನದೊದಿಕೆಯೊಳಗಿನ ಮನ ತೆರೆದು ಹೊರಗಿಣುಕಿದೆ ಕಾತುರವದಕೆ ಮಳೆಗರೆಯುವ ಮುನ್ನ ಮೋಡ ಕವಿದಂತೆ ಮೋಡ ಬಿರಿದು ಇಳೆಗೆ ಮಳೆಯೇ ಸುರಿದಂತೆ. ಬೆಳೆಯ ಮೊಳಕೆ ಹೊಳೆವ ಮುನ್ನ ಸಿಪ್ಪೆ ಸೀಳಿ ಕಳೆಯೊಳಗೊಂದೇ ಹೊನ್ನ ತೆನೆ ಹಡೆದಂತೆ ಸುಳಿಗಾಳಿಯೊಂದು ಮುಂಗುರುಳ ಸೆಳೆದಂತೆ ಹರಡಿ ಹಾರುವ ಹಕ್ಕಿಯೊಂದರ ಗರಿಯಂತೆ. ಇರುಳು ಮುದುಡಿದ್ದ ಹೂವೊಂದು ಹಗಲಿಗೆ ಕಾತರಿಸಿ ಅ ರಳಿ ಮೈದಳೆದ ಚಲುವಿನ ಹಾಗೆ ಉರುಳೋ ಭೂಮಿ ಬೆಳಗೆದ್ದು ಬಿಸಿಲ ಮಜ್ಜನಕೆ ಕೊರಳೊಡ್ಡಿ ಇಬ್ಬನಿಯ ಮಣಿಹಾರವನೆ ಮುಡಿದ ಹಾಗೆ ಮಾತಿಗಿಳಿಯುವೆ ಮನಕೆ ಮೋಸವೆಸಗದೆ ಮಾಸುವ ಮಾತುಗಳ ಆಡಿ ತೀರುವೆನು ಹೆಚ್ಚಿನದೇನೆಂಬುದರರಿವಿಲ್ಲ ಪ್ರತಿಯೂ ಗೊತ್ತಿಲ್ಲ ಹುಚ್ಚುಮನಸಿಗಿಲ್ಲಿ ವೇದಿಕೆಯ ಸೃಷ್ಟಿಸುವೆನು. ರಚನೆ : ಕುಮಾರ್ ಬಿ ಬಾಗೀವಾಳ್