Posts

Showing posts with the label Poem

ಸರಿ ನೀ ಸ್ವಾಗತಿಸ ಬೇಕಿದೆ ನಾಳೆಗಳ…. Get lost I Want to welcome new days.... poem by KUMAR B BAGIVAL

Image
  ಸರಿ ನೀ ಸ್ವಾಗತಿಸ ಬೇಕಿದೆ ನಾಳೆಗಳ…. ಬರಿದೇ ಸಂಖ್ಯೆಯ ನೆಪವಾಗಿ ಬಂದೆ ನೀ ಸರಿಯುವ ಕಾಲ ಬಂದಾಯಿತು ಸರಿ ನೀ ನವ ನಾಳೆಗಳ ಸ್ವಾಗತಿಸುವೆವು ನಾವು ಮರೆತು ವರುಷದುದ್ದಕೂ ಆದ ನೋವು. ದೂಷಿಸಲೂ ಆಗುತಿಲ್ಲ ನಿನ್ನ ನಾವು ಎಲ್ಲೋ ದೂರದಲ್ಲಿದ್ದವರ ಒಗ್ಗೂಡಿಸಿದೆ ಮೆರೆದು ಓಡಾಡಿದವರ ಬಗ್ಗು ಬಡಿದೆ ಸಮಯವೇ ಇಲ್ಲವೆಂದವರಿಗೆ ಸಮಯವ ನೀಡಿದೆ. ಊರ ಮರೆತು ಹೋದವರಿಗೆ ತನ್ನೂರನ್ನೆ ವರವಾಗಿಸಿದೆ ಯಾರೂ ಯಾವುದೂ ನಿನ್ನದಲ್ಲ ನೀ ಒಂಟಿ ಎಂದು ಸಾರಿದೆ ಜೀವನಕ್ಕಿಂತ ಜೀವ ಮುಖ್ಯವೆಂದರುಹಿ ಹೇಳಿದೆ ಆದರೂ ಆರಕ್ಕೇರದ ಮೂರಕ್ಕಿಳಿಯದ ಬದುಕ ನೀಡಿದೆ ಮರೆಯದೇ ನೀ ಕಲಿಸಿದ ಪಾಠವ ಹೆಜ್ಜೆ ಇಡುವೆವು ಹೊಸತೊಂದು ವರುಷಕೆ ಹರುಷದಲಿ ಶುಭವನರಸುವೆವು ನಿನ್ನೊಂದಿಗಾದ ತಪ್ಪುಗಳ ತಿದ್ದಿ ಸರಿಪಡಿಸಿ ನಡೆಯುವೆವು ಉದಯವಾಗಿಸಿ ಹೊಸ ಹೊಂಗಿರಣಗಳ gಬೆಳಕ ಹರಿಸುವವು ಹೊಸ ವರ್ಷದ ಶುಭಾಶಯಗಳೊಂದಿಗೆ   ಅನಕುಮಾರ್, ನಿಗಮಾಂತ್ ಬಾಗೀವಾಳ್, ರುದ್ವೇದ ಬಾಗೀವಾಳ್   ರಚನೆ : ಕುಮಾರ್ ಬಿ ಬಾಗೀವಾಳ್.

Poem Vayassayithu aravatthu by KUMAR B Bagival

ವಯಸ್ಸಾಯಿತು ಅರವತ್ತು ಹೌದು ವಯಸ್ಸೀಗ ಅರವತ್ತು ಕೆಲಸಕ್ಕೀಗ ನಮಗೆ ಪುರುಸೊತ್ತು ಮನೆಗೆ ಕಳಿಸಿದರು ನೀಡಿ ನಿವೃತ್ತಿ ಬಾಯಿಚಪಲ ಮಾತನಾಡುವ ಪ್ರವೃತ್ತಿ ಸಂಜೆಯ ವೇಳೆಗೆ ಪಾರ್ಕಿಗೆ ವಾಕ್ ಕೈಗವಸುಗಳು ಹಿಡಿದಿವೆ ಸ್ಟಿಕ್                  ಪಕ್ಕದೋಟಲಿನ ಸುಗರ್ಲೆಸ್ ಕಾಫಿ ಸೆಟ್ದೋಸೆ, ಸವಿಯುವ ಹಲ್ಲು ಸೆಟ್ಗಳು ಗರಿಗರಿ ಇಸ್ತ್ರಿ ಮಾಡಿದ ಪ್ಯಾಂಟ್ ಮೇಲಿನ ಷರ್ಟ್ ಕುತ್ತಿಗೆಯ ಸುತ್ತ ಮಫ್ಲರ್,ಮೈ ತುಂಬಿದ ಸ್ವೆಟರ್ ಕಾಲಿಗೆ ಬೂಟ್, ಕಣ್ಣಿಗೆ ಚಾಳೀಸು ಧರಿಸಿ ಹೊರಟ ಸಮಾನರ ಸೇನೆ ಸ್ವಚ್ಛ ಪಾರ್ಕ್ನಲ್ಲಿ ಬಿಚ್ಚು ನಗು ಥೇಟ್ ಹಲ್ಲು ಬಂದಿರದ ಮಗುವಿನ ಹಾಗೆ ನಗೆಕ್ಲಬ್ನ ಪ್ರಾಮಾಣಿಕ ಸದಸ್ಯ, ಅದು ನಮಗೆ ಸ್ವರ್ಗ ಸಾದೃಶ್ಯ. ಪಾರ್ಕ್ ಬೆಂಚಿನ ಮೇಲೊಂದು ಸುತ್ತು ದುಂಡು ಮೇಜಿನ ಸಮ್ಮೇಳನ ಕಷ್ಟ ಸುಖ ರಾಜಕೀಯ,ಕೊನೆಗೆ ಖಾಯಿಲೆಗೆ ಮದ್ದು, ಮನೆಗೆ ಹಿರಿಯ ಮಗನಿಗೆ ಅರಿಗೋಲು ಮಡದಿಗೆ ಊರುಗೋಲು ಜೋಲಿ ಚೇರೇರಿ ಗಹನ ಚಿಂತನೆಗಿಳಿದರೆ ಅಪ್ಪಟ ದಿವ್ಯಮೌನಿ, ಜ್ಞಾನಿ ಕೆಲವೊಮ್ಮೆ ಮಾತುಗಳು ಮಿತಿಮೀರಿ ಅವುಗಳದ್ದೇ ಮನೆಮಂದಿಗೆ ಕಿರಿಕಿರಿ  ಸುಮ್ಮನಿರದ ಕೆಲಸ ಮಾಡುವ ಛಾಳಿ ನಾವ್ ದುಡಿದು ಬದುಕಿದವರು ಬಾಳಿ ತಣ್ಣಗಿನ ದೇಹದಲ್ಲೂ ಹೆಚ್ಚಿನ ಬಿ ಪಿ ಖಾನಿ ತುಂಬಿವೆ ಮಾತ್ರೆ ಟಾನೀಕು ಸೂಜಿ ...