Posts

Showing posts with the label #Deepavalifestival

ಹಚ್ಚಿಬಿಡು ಹಣತೆಯನೊಮ್ಮೆ ಬಯಲಲಿ... Lighten a lamp a poem with deepavali wishes by Kumar B Bagival

Image
ಹಚ್ಚಿಬಿಡು ಹಣತೆಯನೊಮ್ಮೆ ಬಯಲಲಿ... ಎಲ್ಲವೂ ಒಂದೇ ಎಲ್ಲೂ ಇಲ್ಲ ಭಿನ್ನತೆ ಕತ್ತಲೊಳಗೆ, ಹಾಲಿರಲಿ, ಹಾಲಾಹಲವಿರಲಿ. ಕಲ್ಲಿರಲಿ, ಕಡಲಿರಲಿ. ಮುಳ್ಳಿರಲಿ, ಹೂವಿರಲಿ. ಶ್ವೇತ ಶ್ಯಾಮವಿರಲಿ, ವರ್ಣ ರಹಿತ ಗುರುತಿಗೆ ಸ್ವರ್ಣ ರಹಿತ ದೇಹಕೆ ಅಳುವಿರಲಿ, ನಗುವಿರಲಿ. ವಸ್ತ್ರವಿರಲಿ, ವಿವಸ್ತ್ರವಿರಲಿ. ಗೊತ್ತು ಗುರಿಯಿಲ್ಲ ಯಲ್ಲೆಗೆ.. ಏಕತಾನತೆ ನೀರಸ… ಬದುಕೆಂದರೆ ಇದೇನಾ…. ವರ್ಣ ಬೇಡವೇ ಗುರುತಿಗೆ? ಬೇಧ ಬೇಡವೇ ಹಾಲುಹಾಲಾಹಲಕೆ? ದಾರಿಯ ಸರಿಬೆಸ ಬೇಡವೇ ಸಾಗಲು? ಭಾವ ಬೇಡವೇ ಆನನದಲಿ ಅನುಭವಕೆ? ವಸ್ತ್ರ ವಿವಸ್ತ್ರಗಳ ಅರ್ಥ ಬೇಡವೇ ಮತಿಗೆ? ಯಲ್ಲೆ ಬೇಡವೇ ನಿಗದಿಗೆ? ಎಲ್ಲವೂ ಬಲ್ಲವುಗಳಾಗಬೇಡವೇ ? ಕಳೆಯಬೇಡವೇ ಕೊಳೆಯ ಬದುಕ ಬಯಲಲಿ? ಹಾಗಿದ್ದರೊಮ್ಮೆ ಹಚ್ಚಿಬಿಡು ಹಣತೆಯನು ಬದುಕ ಬಯಲಲ್ಲೊಮ್ಮೆ,ಜಗದ ಜಗುಲಿಯಲೊಮ್ಮೆ ಅಂಧಕಾರ ನೀಗಲಿ ಬೆಳಕಲ್ಲಿ ಬೀಗಲಿ.‌. ರಚನೆ : ಕುಮಾರ್ ಬಿ ಬಾಗೀವಾಳ್ .