Posts

Showing posts with the label #Basaveshwara #vachanagalu #lingayath #veerashaiva #basava #basavamana #bbksirteachworld

ಬಸವ ಮನ

Image
                                             ಬಸವ ಮನ                     (   ವಚನಗಳ ಸಂಗ್ರಹ)        ಹನ್ನೆರಡನೇ ಶತಮಾನದಿಂದ ಇಲ್ಲಿಯವರೆಗೂ ಬಹುಶಃ ಜಗತ್ತಿನ ಯಾವುದೇ ಭಾಗದಲ್ಲಿಯೂ ಕಾಣದ ಸಮಾಜದ ಪ್ರತೀ ಸ್ಥರದ ಜನರನ್ನೊಳಗೊಂಡ ಕ್ರಾಂತಿಗೆ ಕಾರಣವಾಗಿದ್ದು ಕಲ್ಯಾಣದಲ್ಲಿ ಮಾತ್ರ ಎಂದರೆ ತಪ್ಪಾಗದು. ಮುಕ್ತವಾಗಿ ತಮ್ಮ ತಮ್ಮ ಅನುಭವಗಳನ್ನು ವಚನಗಳ ರೂಪದಲ್ಲಿ ಹಂಚಿಕೊಂಡ, ಹಂಚಿಕೊಳ್ಳಲೆಂದೇ ಅನುಭವ ಮಂಟಪ ಕಟ್ಟಿದ ಪ್ರಪಂಚದ ಮೊದಲ ಕೇಂದ್ರ ಕರ್ನಾಟಕ. ವಚನಗಳು ಬರೀ ಬರವಣಿಗೆಗಳಾಗದೇ ಬದುಕಿನ ಪರಿಗಳಾಗಿದ್ದರಿಂದಲೇ ಇಂದೂ ಅವು ಜೀವಂತವಾಗಿವೆ ಜೊತೆಗೆ ಪ್ರಸ್ತುತಕೂಡ. ಆ ಕ್ರಾಂತಿಯ ನಾಯಕ ಬಸವಣ್ಣನವರು ಲಿಂಗ, ಜಂಗಮ, ಹಾಗೂ ಕಾಯಕ ಈ ಮೂರೇ ಮೂರು ಶಬ್ದಗಳ ಶಕ್ತಿ ಎಂತಹದ್ದೆಂದು ವಿಶ್ವಕ್ಕೆ ಸಾರಿದ ಮಹಾನ್ ಚೇತನ. ಇಂತಹಾ ಭಕ್ತಿಬಂಡಾರಿ ಬಸವಣ್ಣನವರು ತಮ್ಮ ಮನದೊಳಗಿನ ತುಮುಲಗಳ ಬಗ್ಗೆ ಅನೇಕ ವಚನಗಳಲ್ಲಿ ವ್ಯಕ್ತಪಡಿಸಿದ್ದಾರೆ, ಅಂತಹ ಕೆಲ ವಚನಗಳ ಸಂಗ್ರಹ ಮಾಡಿ ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇನೆ.  1.   ಮುಂಗೈಯ್ಯ   ಕಂಕಣಕ್ಕೆ   ಕನ್ನಡಿಯ   ತೋರುವಂ...