Posts

Showing posts with the label Story

STORY TIME . BY www.bbksir.org

ಕಥೆ. ೨ ಜೀವನದ ಉತ್ತಮತೆಗೆ ಯಾರ ಸಲಹೆ ಉತ್ತಮ?   ಸಂಭಾವಿತ , ಸರಳ, ಸಜ್ಜನಿಕೆಯ ನೇರ ನಡೆನುಡಿಯ ಕುಟುಂಬವದು. ತಂದೆಯೇ ಮಗನಿಗೆ ಆದರ್ಶ, ಮಗನಾದರೋ ಮರದಂತೆ ನೊಗ ಎಂಬಂತೆ. ಸರಳ ನಡೆ ,ನೇರ ನಡೆ,ನುಡಿ. ಉತ್ತಮ ಯೋಚನೆ,ಯೋಜನೆ ಮಾಡುವ ಸಾಮರ್ಥ್ಯ ಹೊಂದಿರುವವ. ಆದರೆ ಮಾಡುವ ಕೆಲಸಗಳು ,ನಿರ್ಧಾರಗಳಲ್ಲಿ  ಸ್ವಲ್ಪ ಗೊಂದಲ ಅವನಿಗೆ. ಕೆಲವೊಮ್ಮೆ ಅವನ ಸಾಮರ್ಥ್ಯ ಕೆಲ ಸ್ನೇಹಿತರು, ಸುತ್ತಮುತ್ತಲಿನ ಜನರಿಗೆ ಸಹಿಸಲಾಗದ ವಿಷಯವಾಗಿತ್ತು. ಏನಾದರೂ ಒಳ್ಳೆಯ ಕೆಲಸ ಮಾಡುವ ಎಂದು ಯೋಚಿಸಿದರೆ ಅದಕ್ಕೆ ಕಲ್ಲು ಹಾಕುವವರೇ ಹೆಚ್ಚು, ದಾರಿ ತಪ್ಪಿಸುವವರನೇಕ. ಕೆಲವರು ಅವನ ಕೆಲಸವನ್ನು ಒಪ್ಪಿ ಬೆನ್ನು ತಟ್ಟಿದರೆ, ಕಾಲೆಳೆದವರೇ ಹೆಚ್ಚು, " ನೀನು ಮಾಡುತ್ತಿರುವ ಕೆಲಸ ಕೆಟ್ಟದ್ದು ನೀನು ಕೆಟ್ಟವ " ಎಂದು ಹೀಯಾಳಿಸಿ ಮನ ನೋಯುವಂತೆ ನಡೆದುಕೊಳ್ಳುತ್ತಿದ್ದರು, ಇದು ಅವನಿಗೆ ಇರಿಸುಮುರಿಸಾಗುತ್ತಿತ್ತು . ಒಂದು ಎರಡು ಬಾರಿಯಲ್ಲ ಸಾಕಷ್ಟು ಬಾರಿ ಹೀಗೆಯೇ ಮಾಡಿ ಅವನನ್ನು ತುಳಿದೇಬಿಟ್ಟರು ಅವನೇ ನಂಬಿದ್ದ ಜನರೆಲ್ಲಾ. ಈ ಘಟನೆಗಳು ಅವನನ್ನ ಹಿಂಸಿಸತೊಡಗಿದವು, ಜೀವನದಲ್ಲಿ ಕುಗ್ಗಿಹೋದ, ಖಿನ್ನತೆಗೆ ಒಳಗಾದವನಂತೆ ಇರತೊಡಗಿದ, ಯಾವುದರಲ್ಲೂ ಆಸಕ್ತಿ ಇಲ್ಲದಂತಾದ ಮನೆ ಬಿಟ್ಟು ಹೊರಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟ. ಹೀಗೆ ಸ್ವಲ್ಪ ದಿನಗಳವರೆಗೆ ದಿನಗಳುರುಳಿದವು.  ಈ ಎಲ್ಲಾ ಬೆಳವಣಿಗೆಗಳನ್ನ ಗಮನಿಸುತ್ತಲೇ ಬಂದಿದ್ದ ಅಪ್ಪ ಅದೊಂದು ದಿನ ಮಗನ...