Posts

Showing posts with the label #goodthougthts

Good Thougts

ಇದ್ದೇ ಇದೆ ಜಾಗ.. ಇದ್ದೇ ಇದೆ ಎಲ್ಲದಕೂ ಜಾಗ ಧರೆಯಲಿ ಎಡವಿ ಬಿದ್ದಿದಕೂ, ಗೆದ್ದು ಬೀಗಿದಕ್ಕೂ… ಕರಗಿ ಹರಿದದಕೂ, ಸುಟ್ಟು ಉರಿದದಕೂ.. ಸೊರಗಿದಕೂ…. ಮೆರೆದಿದಕೂ…. ಇದ್ದೇ ಇದೆ ಎಲ್ಲದಕೂ...ಜಾಗ.. ತುಳಿಯದೆ ಬಿಡುವರೆ.. ಬೆಳೆದು ನಿಂತು ಒಣಗುವುದರೊಳಗಿನವರೆಗಷ್ಟೇ ಬದುಕು. ತುಳಿವುದೇತಕೆ ಇತರರ, ತರಗೆಲೆ ಜನುಮ ನಿನದು. ನೀ ಬಿದ್ದಾಗ ತುಳಿಯದೇ ನಡೆವರೇ ನಿನ್ನನು? ~ ಕುಮಾರ್ ಬಿ ಬಾಗೀವಾಳ್

Thoughts of mind by Kumar B B

ಕಳೆವ ಕ್ಷಣಗಳು ಮುಂದಡಿಯಾಗಬೇಕು ಭವಿತದಲಿ, ಬೆಳೆವ ಪ್ರತಿ ಸಸಿಯು ವರವಾಗಬೇಕು ಭುವಿಯಲಿ, ಒಣಗಿದರೂ ಮರಮುಟ್ಟಾಗಬೇಕು ನೂರ್ಕಾಲ ಭವನದಲಿ, ಬಣಗುಡದಿರಲಿ ಬರಿನೆಲದ ಮೇಲೆ ಕರಿನೆರಳಾಗಿ ಭುವನದಲಿ. - ಕುಮಾರ್ ಬಿ ಬಾಗೀವಾಳ್. ಮರೆತು ಬಿಡು ಮನವೆ ಮಾಗದ ಅದೆಷ್ಟೋ ಕಾಯಿಗಳು ಉದುರಿ ಕೊಳೆತಿವೆ ನೆಲದೊಳಗೆ, ಕೊರಗಿದರಾಗದು ಸರಿ ಎಚ್ಚರಗೊಳ್ಳು ಮನದೊಳಗೆ ನಾಯಿಗಳು ಎಳೆದಾಡಾವು ನೀನು ನೆಲಕುರುಳಿದರೆ ಧರೆಯೊಳಗೆ. ಕುಮಾರ್ ಬಿ ಬಾಗೀವಾಳ್ ಕೊರಗದಿರು ಹೂವೆ ಹಿಡಿಕೆ ಒರಟೆಂದು ಉದುರಿ ಹೋಗುವೆ ಅರಳುವ ಮುನ್ನ ಅದಿರದಿರೆ ಸೇರದೆ ಮುಡಿಯನೋ, ದೇವರ ಗುಡಿಯನೋ. ರಚನೆ : ಕುಮಾರ್ ಬಿ ಬಾಗೀವಾಳ್.