Posts

Showing posts with the label Light path

Can I follow light path. ..BELAKA DAARI SARIYE ? An article by Kumar B Bagival

ಬೆಳಕ ದಾರಿ ಸರಿದಾರಿಯೇ….? ಸಂದರ್ಭಗಳು ನಮ್ಮನ್ನ ಕೆಲವೊಮ್ಮೆ ಕಠಿಣ ಮಾಡಿಬಿಡುತ್ತವೆ , ನೇರ ನಿಷ್ಠುರದಿಂದ ನಡೆಯಬೇಕಾದದ್ದನ್ನು ಹೇಳಿಕೊಡುತ್ತವೆ. ಹಾಗೆಯೇ ನಡೆಯಬೇಕ ಅಥವಾ ಸ್ವಲ್ಪ ಫ್ಲೆಕ್ಸಿಬಲ್ ಆಗಿ ಇರಬೇಕಾ ಎಂಬ ಗೊಂದಲ ಮೂಡುವುದು ಸಹಜ. ನೇರವಾಗಿ ನಮ್ಮ ನಡವಳಿಕೆ‌ ಇದ್ದರೆ ಇತರಿಗೆ ಅದರಿಂದ ತೊಂದರೆನಾ? ಕೆಲವೊಬ್ಬರಿಗಾಗಿ ನೇರವಾಗಿ ನಿಷ್ಠುರವಾಗಿ ನಡೆಯಬಾರದ? ಯಾರು ಏನು ತಿಳಿಯುವರೋ? ಖಡಕ್ ಆಗಿರುವುದು ಎಷ್ಟರಮಟ್ಟಿಗೆ ಸರಿ? ಈ ಎಲ್ಲಾ ಗೊಂದಲಗಳಿಗೆ ಪರಿಹಾರ ಏನು? ಇತ್ಯಾದಿಗಳಿಗೆ ಪ್ರಕೃತಿ ಸಾಕಷ್ಟು ಸಲಹೆಗಳನ್ನು ತೋರಿಸುತ್ತದೆ. ವಿಜ್ಞಾನದ ಕೆಲವು ವಿದ್ಯಮಾನಗಳು ಬದುಕಿಗೆ ದಾರಿ ತೋರುತ್ತವೆ ಎಂಬುದರಲ್ಲು ಅನುಮಾನವೇ ಇಲ್ಲ.ಹಾಗಾಗಿ ಮೇಲಿನ ಗೊಂದಲಗಳಿಗೆ ಬೆಳಕು ಸರಿಯಾದ ಉತ್ತರವನ್ನ ಕೊಡುತ್ತದೆ. ಬೆಳಕು ಒಂದೇ ದಿಕ್ಕಿನಲ್ಲಿ ಚಲಿಸುತ್ತದೆ, ಅಂದರೆ ಸರಳ ರೇಖೆಯಲ್ಲೇ ಚಲಿಸುತ್ತದೆ. ಎಂದೂ ವಕ್ರ ರೇಖೆಯಲ್ಲಿ ಚಲಿಸುವುದಿಲ್ಲ. ಹೇ ಹೌದಲ್ಲವೇ ಅದು ವಕ್ರವಾಗಿದ್ದರೆ ಚೆನ್ನಾಗಿರುತ್ತಿತ್ತಲ್ಲವೇ! ಎಂದು ಯೋಚಿಸುವುದು ತರವೇ? ಹೌದು ಹೀಗೂ ಯೋಚಿಸಬಹುದು. ಯಾಕೆ ಸರಳರೇಖೆಯಲ್ಲೇ ಚಲಿಸಬೇಕು? ಅದು ವಕ್ರ ರೇಖೆಯಲ್ಲೂ ಚಲಿಸಬಹುದಲ್ಲ. ಅದು ವೈಜ್ಞಾನಿಕವಾಗಿ ಹೇಗಾದರೂ ವಿವರಿಸಲಿ ಆದರೆ ನಮಗೊಂದು ಬದುಕಿನ ಮಹತ್ವವನ್ನು ಹೇಳಿಕೊಡುತ್ತದೆ. ವಿಚಿತ್ರವೆನಿಸಿದರೂ ಅದನ್ನೊಮ್ಮೆ ನೋಡೋಣ… ಬೆಳಕು ಸರಳರೇಖೆಯಲ್ಲಿ ಚಲಿಸದಿದ್ದಿದ್ದರೆ ಹೇಗಿರುತ್ತಿತ್ತು? ಹೌದು ಅದ...