How carbohydrates are essential in our balanced diet.!

ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳು ಎಷ್ಟು ಮುಖ್ಯ? ಕಾರ್ಬೋಹೈಡ್ರೇಟ್ ಗಳು ನಮ್ಮ ದೇಹಕ್ಕೆ ಶಕ್ತಿ ನೀಡುವ ಪ್ರಮುಖ ಆಕರಗಳಾಗಿವೆ. ಆದ್ದರಿಂದ ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಅವಿಭಾಜ್ಯ ಪ್ರಮುಖ ಭಾಗವಾಗಿವೆ.ದೈನಂದಿನ ಕೆಲಸ ಮತ್ತು ಮೆದುಳಿನ ಕಾರ್ಯ ನಿರ್ವಹಣೆಗೆ ಅಗತ್ಯ ಪ್ರಮಾಣದ ಕಾರ್ಬೋಹೈಡ್ರೇಟ್ ಗಳ ಸೇವನೆ ಅವಶ್ಯಕ. ಕಾರ್ಬೋಹೈಡ್ರೇಟ್ಗಳುಳ್ಳ ಆಹಾರ ಪದಾರ್ಥಗಳಿಗೆ ಉದಾಹರಣೆ ನೀಡುವುದಾದರೆ , ಹಾಲು, ಹಾಲಿನ ಉತ್ಪನ್ನಗಳು, ಯೋಗರ್ಟ್, ಐಸ್ಕ್ರೀಮ್, ಹಣ್ಣುಗಳು,ಧಾನ್ಯಗಳು,ಲೆಗ್ಯೂಮ್ಗಳು ಹಾಗೂ ಸ್ಟಾರ್ಚ್ ಭರಿತ ತರಕಾರಿಗಳು. ಹಾಗು ಸಕ್ಕರೆಭರಿತ ಸಿಹಿಪದಾರ್ಥಗಳು. ಕಾರ್ಬೋಹೈಡ್ರೇಟ್ ನ ವಿಧಗಳು. ಕಾರ್ಬೋಹೈಡ್ರೇಟ್‌ಗಳಲ್ಲಿ ಮೂರು ವಿಧ. ಸಕ್ಕರೆ ಪದಾರ್ಥಗಳು ಸ್ಟಾರ್ಚ್ , ನಾರು ಪದಾರ್ಥಗಳು. ಸಕ್ಕರೆ ಪದಾರ್ಥಗಳು: ಸಕ್ಕರೆ ಅತ್ಯಂತ ಸರಳ ಕಾರ್ಬೋಹೈಡ್ರೇಟ್. ಸ್ವಾಭಾವಿಕವಾಗಿ ಹಣ್ಣುಗಳು, ತರಕಾರಿಗಳು, ಹಾಲು ಮತ್ತು ಅದರ ಉತ್ಪನ್ನಗಳಲ್ಲಿ ಇರುತ್ತದೆ. ಹಣ್ಣುಗಳಲ್ಲಿ - ಫ್ರಕ್ಟೋಸ್ ರೂಪದಲ್ಲಿ, ಹಾಲು ಮತ್ತು ಅದರ ಉತ್ಪನ್ನಗಳಲ್ಲಿ - ಲ್ಯಾಕ್ಟೋಸ್, ಹಾಗು ಟೇಬಲ್ ಸುಗರ್ ನಲ್ಲಿ - ಸುಕ್ರೋಸ್ ರೂಪದಲ್ಲಿರುತ್ತದೆ. ಸ್ಟಾರ್ಚ್ ಸ್ಟಾರ್ಚ್ , ಸಂಕೀರ್ಣ ಕಾರ್ಬೋಹೈಡ್ರೇಟ್ ಗಳಾಗಿದ್ದು, ತರಕಾರಿ, ಧಾನ್ಯಗಳು, ಮತ್ತು ಬೇಯಿಸಿದ ಆಲೂಗಡ್ಡೆ, ಬೇಯಿಸಿದ ಒಣ ಬೀನ್ಸ್, ಹಾಗು ಬಟಾಣಿ ಗಳಲ್ಲಿ ...