ವಿಶ್ವಗುರು ಬಸವಣ್ಣ. VISHWAGURU BASAVANNA. An article by Kumar B Bagival.
ವಿಶ್ವಗುರು ಬಸವಣ್ಣ. --ಕುಮಾರ್ ಬಿ ಬಾಗೀವಾಳ್ ಜಗತ್ತಿನ ಬಹುತೇಕ ರಾಷ್ಟ್ರಗಳು ಸಂಸತ್ ರಚಿಸಿದ್ದವೋ ಇಲ್ಲವೋ , ಸಂವಿಧಾನದ ಅರಿವು ಇತ್ತೋ ಇಲ್ಲವೋ, ಪ್ರಜಾಪ್ರಭುತ್ವದ ಅರಿವು ಇದ್ದಿತೋ ಇಲ್ವೋ, ಅದಾಗಲೇ ಕರ್ನಾಟಕದ ಕಲ್ಯಾಣದಲ್ಲಿ ಅದರ ಚಿಗುರು ಬಿಟ್ಟಿದ್ದಂತು ಸತ್ಯ, ಬೀಜ ಬಿತ್ತಿ , ನೀರೆರೆದು, ಪೋಷಿಸುವ ಮೂಲಕ ಕ್ರಾಂತಿಯನ್ನೇ ಹುಟ್ಟು ಹಾಕಿದ್ದು ಶರಣರು. ಒಂದು ಹಂತಕ್ಕೆ ರಾಜರ ಒಳ್ಳೆ ಆಳ್ವಿಕೆ ಇದ್ದಾಗ್ಯೂ ಕೆಲವರ ಕುತಂತ್ರಗಳಿಂದಾಗಿ ಒಳ್ಳೆಯ ಬೆಳವಣಿಗೆಗಳು ಸಮಾಜದಲ್ಲಿ ಚಿಗುರುವ ಮೊದಲೇ ಚಿವುಟಿ ಹಾಕುವ ಬಹಳಷ್ಟು ಮಂದಿ ಇತಿಹಾಸದಲ್ಲಿ ಅಪಾರ. ಯಾವುದೇ ಸಂಪರ್ಕ ಸಾಧನಗಳು ಇಲ್ಲದ ಅಂದಿನ ದಿನಗಳಲ್ಲಿ , ಈಗಿನ ಹಾಗೆ ಬೆಳಗಾಗುವಷ್ಟರಲ್ಲಿ ಎಲ್ಲರನ್ನೂ ತಲುಪುವುದಕ್ಕಾಗಲಿ ಪ್ತತಿಕ್ರಿಯೆ ನೀಡುವುದಕ್ಕಾಗಲಿ ಸಾಧ್ಯ ಇಲ್ಲವೇ ಇರಲಿಲ್ಲ. ತಮ್ಮ ಕಾರ್ಯಸಾಧನೆಯಿಂದ ಮಾತ್ರ ಸಾಧ್ಯವಾಗುವುದಿತ್ತು. ಅಂತಹಾ ದಿನಮಾನಗಳಲ್ಲಿ ಅದೆಂತಹಾ ಶಕ್ತಿ ಇರಬೇಕು ಆ ಕ್ರಾಂತಿಕಾರಿಗೆ? ಚಿಕ್ಕದರಿಂದಲೇ ಸೌಮ್ಯವಾಗಿ ಪ್ರಶ್ನಿಸುವ ಗುಣವುಳ್ಳವರಾಗಿ, ಮೇಲು ಕೀಳುಗಳಿಲ್ಲ ಎಲ್ಲವೂ ಮೇಲೇ, ಜಾತಿ ಜಂಜಡಗಳಿಲ್ಲ ಎಲ್ಲವೂ ಒಂದೇ, ಪುರುಷ ಸ್ತ್ರೀ ಗೆ ಬೇಧವಿಲ್ಲ ಇಬ್ಬರೂ ಸಮಾನರು, ಎಲ್ಲರಿಗೂ ಸಮಾನ ಅವಕಾಶಗಳಿವೆ ಎಂದು ಕಟ್ಟುಪಾಡುಗಳನ್ನು ದಿಕ್ಕರಿಸಿದ , ಸಮಾಜಕ್ಕೆ ವ...