ಅಮ್ಮಾ ... ನೀನೆ ಶ್ರೇಷ್ಠ. Amma neene shreshta a poem by Kumar B Bagival
google.com, pub-1254641642343099, DIRECT, f08c47fec0942fa0 ಅಮ್ಮಾ... ನೀನೇ ಶ್ರೇಷ್ಠ. (ವಿಶ್ವ ಅಮ್ಮಂದಿರ ದಿನದ ಶುಭಾಶಯಗಳೊಂದಿಗೆ) ಅಮ್ಮಾ ನೀನೆ ಶ್ರೇಷ್ಠ ಜಗದಗಲಕೂ , ನಿನ್ನೊಡಲೇ ಶ್ರೇಷ್ಠ ಜಗದ ಅಗಲದಲ್ಲೂ ಕಡಲಿಗೂ ಮಿಗಿಲು ಭೋರ್ಗರೆತವಿಲ್ಲ ಆಗಸಕೂ ಮಿಗಿಲು ಗುಡುಗಾರ್ಭಟಗಳಿಲ್ಲ ಭುವಿಗೂ ಮಿಗಿಲು ನಡುಗು ಕುಸಿತಗಳಿಲ್ಲ. ಅಮ್ಮಾ ನೀನೇ ಶ್ರೇಷ್ಠ ಜಗದಗಲಕೂ , ನಿನ್ನ ಮಡಿಲೇ ಶ್ರೇಷ್ಠ ಜಗದ ಅಗಲದಲ್ಲೂ ಸುಡುವ ಕೆಂಡವೂ ಅಲ್ಲ, ಕೊರೆವ ಚಳಿಯೂ ಇಲ್ಲ ಬಾಡುವ ಹೂವೂ ಅಲ್ಲ ತೊರೆವ ಕಾಲವೂ ಅಲ್ಲ ಎಲ್ಲಕೂ ಮಿಗಿಲು ಅದುವೆ ಪೊರೆವ ದೈವ ನೆಲೆಯು. ಅಮ್ಮಾ ನೀನೇ ತಾನೆ ಜಗದಗಲಕೂ ಶ್ರೇಷ್ಠ, ನಿನ್ನ ಕೈತುತ್ತೇ ಶ್ರೇಷ್ಠ ಜಗದ ಅಗಲದಲ್ಲೂ ಅಮೃತಕೂ ಮಿಗಿಲು ತಾರತಮ್ಯಗಳಿಲ್ಲ ಬಿತ್ತೋ ಬೀಜಕು ಮಿಗಿಲು ಹುಸಿಯುವ ಮಾತೇ ಇಲ್ಲ ಉತ್ತ ನೆಲಕೂ ಮಿಗಿಲು ತನುವು ಹಾರುವುದೇ ಇಲ್ಲ. ಅಮ್ಮಾ ನೀನೇ ಶ್ರೇಷ್ಠ ಜಗದ ಅಗಲದಲ್ಲೂ ಗುರುವಿಗೂ ಮಿಗಿಲು ಮೊದಲ ಗುರು ನೀನೆ ಹರನಿಗೂ ಮಿಗಿಲು ಪೊರೆವವಳು ನೀನೇ ತಾನೆ ವರಕ್ಕೂ ಮಿಗಿಲು ಹುಸಿಯದ ವರವನೀಡುವವಳು ನೀನೆ ಕರ ಮುಗಿವ ಪ್ರತಿ ಗಳಿಗೆ ಸಲ್ಲುವುದು ಜಗದಿ ನಿನಗೆ ತಾನೆ. ರಚನೆ : ಕುಮಾರ್ ಬಿ ಬಾಗೀವಾಳ್. google.com, pub-1254641642343099, DIRECT, f08c47fec0942fa0