ಮತ್ತೆ ಸಂಭ್ರಮ.... Matthe sambhrama a poem
ಮತ್ತೆ ಸಂಭ್ರಮ.... ಒಮ್ಮೆಲೇ ಬೆಳಕು ಹರಿದಂತ ಅನುಭವ ಸಾಲು ಸೋಲುಗಳ ಕಂಡವಗೆ ಒಮ್ಮೆ ಗೆಲುವಿನಾ ಸಂಭ್ರಮಾ, ಕರಿಮುಗಿಲ ಒಳಗಿಂದ ಕೋಲ್ಮಿಂಚು ಚಲಿಸಿದಾ ಎಚ್ಚರಾ ಇಂದು ಕಂಡಿದೇ ಒಮ್ಮೆಲೇ, ನಿನ್ನಿಂದಲೇ. ಕಡಲೊಳಗೆ ಅಲೆಗಳಾ ಸಡಗರ ಮುಡಿಲೊಳಗೆ ಹೂಗಳಾ ಪರಿಮಳ ತುಡಿತದಲಿ ಕೊಂಚ ಇಂದು ನಿರಾಳ ಇಂದು ಕಂಡಿದೇ ಒಮ್ಮೆಲೇ, ನಿನ್ನಿಂದಲೇ. ಹಿಂಡು ಹಿಂಡಾಗಿ ಕಂಡ ಕನಸೆಲ್ಲಾ ಕಣ್ಣೆದುರು ಹೊರಟಿದೇ ಸಾಲಾಗಿ ಮಣ್ಣ ಎದೆಗೆ ಮೊದಲಾ ಮಳೆ ಚುಂಬಿಸಿದ ಅನುಭವ ಇಂದು ಆಗಿದೇ ಒಮ್ಮೆಲೇ , ನಿನ್ನಿಂದಲೇ. ಬರಿಗಾಲಲೊಮ್ಮೆ ನಡೆಯಲೇ ತುಸುದೂರ ಸುರಿದ ಹಾಗೆ ಮಳೆಯ ಹೂ ಪದರ ಸವಿನುಡಿಯು ಗುನುಗುತಿದೆ ಎದೆಯೊಳಗೆ ಇಂದು ಕಂಡಿವೇ ಒಮ್ಮೆಲೇ , ನಿನ್ನಿಂದಲೇ. - ಕುಮಾರ್ ಬಿ ಬಾಗೀವಾಳ್.