ಮುರಿಯಬಾರದೇಕೆ ಮೌನ.... ನನ್ನೊಲವೇ.
ಮುರಿಯಬಾರದೇಕೆ ಮೌನ.... ನನ್ನೊಲವೇ.
ಪದಗಳೊಳಡಗಿದ ಮನವೆ
ಮಾತಾಗಬಾರದೇಕೆ ನೀನು.
ಮರುಕಳಿಸಿವೆ ಕಳೆದ ನೆನಪುಗಳು
ನೋಟವಾಗಬಾರದೇಕೆ ನೀನು.
ಪ್ರತಿ ಹೆಜ್ಜೆಯ ನಿರೀಕ್ಷೆಯ ಮನವೇ
ದ್ವನಿಯಾಗಬಾರದೇಕೆ ನೀನು.
ಉಸಿರಿನ ಪ್ರತಿ ಕಣವೂ
ನಿನ್ನೆಸರಿನ ಪ್ರತಿಫಲವೇ
ಸಂಭ್ರಮಿಸಬಾರದೇಕೆ ನನ್ನೊಲವೇ.
ಕ್ಷಣ ಕ್ಷಣಗಳು ಕೂಡ
ಮಣರಾಶಿಯ ಬರಿ ನೆನಪೇ
ಮುರಿಯಬಾರದೇಕೆ ಮೌನ ನೀನು.
👉ಕುಮಾರ್ ಬಿ ಬಾಗೀವಾಳ್
Comments
Post a Comment