Posts

Showing posts from November, 2020

ಆಸೆ - ಅವಕಾಶ Aase--avakaasha poem by KumarB Bagival

  ಆಸೆ - ಅವಕಾಶ ನೀ ನಡೆವ ದಾರಿಯುದ್ದಕೂ ನೆರಳಾಗುವಾಸೆ ಸುಡುವ ಮೈ ತಣಿಸುವ ಕೊಂಚ ಅವಕಾಶ ನನಗೆ ನಾಳೆಗಳ ನಾವೆಗೆ ನಾನೇ ನಾವಿಕನಾಗುವಾಸೆ ಬಿರುಗಾಳಿಗೆ ಹೊಯ್ದಾಡಿದರೂ ಹಿಡಿದು ನಿಲ್ಲುವ ಅವಕಾಶ ನನಗೆ. ಶೃಂಗಾರ ಮಾಡಿರುವ ನಿನ್ನ ಕಣ್ಣಿನ ರೆಪ್ಪೆಯಾಗುವಾಸೆ ದಾರಿ ದೂಳೊಕ್ಕದಂತೆ ತಡೆದು ಸೊಂಪಾಗಿಡುವವಕಾಶ ನನಗೆ ಕರಣಗಳ ಮೇಲ್ಮೆರೆವ ಕಿವಿಯೋಲೆಯಾಗುವಾಸೆ ಕರಣಕ್ಕಡಚ್ಚಿಕ್ಕುವ ಕರ್ಕಶವ ತಡೆದು ಇಂಪಾಗಿಸುವವಕಾಶ ನನಗೆ. ಬೆರಳ್ತುದಿಗೊಂದಂದದ ಉಂಗುರವಾಗುವಾಸೆ ಬೆರಳಿಡಿದು ನಡೆಸಿ ದಿಶೆಯಾಗುವ ಅವಕಾಶ ನನಗೆ. ಕೊರಳೊಳಗೆ ಮೆರೆವ ಸರವಾಗುವಾಸೆ,   ಬರಿಯಕೊರಳಿಗೆ ಚಲುವ ಕೊಡುವ ಅವಕಾಶ ನನಗೆ. ಜೇನ್ಗೆನ್ನೆಯ ಮೇಲೆ ಬಳಿವ ಅರಿಶಿನವಾಗುವಾಸೆ ಹದ ಮುದದ ಕೆನ್ನೆಯ ಕೋಮಲವಾಗುವವಕಾಶ ನನಗೆ. ನೆತ್ತಿಯಲಾಡುವ ಮಲ್ಲೆಯ ಹೂಮಾಲೆಯಾಗುವಾಸೆ ಮಧುರ ಸಿಹಿಯ ಸಹಿಯಾಗುವವಕಾಶ ನನಗೆ. ಬರಿಗಾಲ ಪಾದದಂಚಿನ ರಂಗಾಗುವಾಸೆ ಸುರಿದು ದಾರಿಯುದ್ದಕೂ ಪಾದವನೆ ಕಾಪಾಡುವವಕಾಶ ನನಗೆ ಪಯಣದುದ್ದಕೂ ಪ್ರಣಯದಲಿ ಜೊತೆಯಾಗುವಾಸೆ ಕಣಕಣಕೂ ಕೂಗಿ ನಾ ನಿನ್ನವನೆಂದು ಹೇಳುವವಕಾಶ ನನಗೆ. ರಚನೆ : ಕುಮಾರ್ ಬಿ ಬಾಗೀವಾಳ್

ಬಾಡುವ ಮುನ್ನ...

 ಬಾಡುವ ಮುನ್ನ ಹೂಬಿಡು ನನ್ನ ಮುದ್ದಿನ ಮಲ್ಲಿಗೆ ಗಿಡವೇ  ನೀ... ಸುಡು ಬಿಸಿಲಿಗು ಒಮ್ಮೆ ನಾ ಬರವೆನು ಓಲೆ ತಂಪಾಗಿಡು ನಿನ್ನ ಎನ್ನುವ ಸಾಲೆ. ಮಳೆಗರೆಯುವ ಮೋಡಕು ಮೊರೆ ಇಡುವೆನು ಕೇಳು ಚುಂಬಸು ನಿನ್ನ ನೀ ಬಾಡುವ ಮುನ್ನ. ::::