I will bring you, current affairs , stories, poems, some literature, stores,places, culture, teaching videos, technology, introduce new gadget, unboxing, video tutorials, writing articles , current affairs ,introducing some apps, protein, supplements, threptin
ಸಿನಿದಿನ. ಡಿಸೆಂಬರ್ 15,2025 ರಾಜಕೀಯ ಮತ್ತು ಆಡಳಿತ 1. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಬದಲಿಗೆ ಹೊಸ ಗ್ರಾಮೀಣ ಉದ್ಯೋಗ ಕಾನೂನು "VB- G Ram G" (Vikasith Bharath - Guarantee for Rojgar and Ajeevika Misson(Gramin) ಮಸೂದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಿದೆ. 2. ಬಿಹಾರ ಸಚಿವ ನಿತಿನ್ ನಬಿನ್ ಅವರನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ಹೊಸ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪರಿಸರ ಮತ್ತು ಆರೋಗ್ಯ 3. ದೆಹಲಿ -ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ ದೆಹಲಿಯ ಗಾಳಿಯ ಗುಣಮಟ್ಟ "ತೀವ್ರ" ವರ್ಗಕ್ಕೆ (ಎಕ್ಯೂಐ 498 ರ ಬಳಿ) ಹದಗೆಟ್ಟಿದ್ದು, ದೆಹಲಿ ಸರ್ಕಾರವು ಶಾಲೆಗಳನ್ನು 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಆನ್ಲೈನ್-ಮಾತ್ರ ತರಗತಿಗಳಿಗೆ ಬದಲಾಯಿಸಲು ನಿರ್ದೇಶಿಸಿದೆ. ಕ್...
ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು? ಮಕರ ಸಂಕ್ರಾಂತಿ ಕುರಿತ ವೈಜ್ಞಾನಿಕ ಲೇಖನ: ಕುಮಾರ್.ಬಿ.ಬಾಗೀವಾಳ್ ಸಂಕ್ರಾಂತಿ ಅಸಲಿಗೆ ಸಂಕ್ರಮಣ. ಅರ್ಥಾತ್ ಹೇಮಂತ ಋತು,ಶಿಶಿರ ಋತುಗಳ ಸಂಧಿಕಾಲ. ಭಾರತದ ಬಹುತೇಕ ರಾಜ್ಯಗಳು ಈ ದಿನವನ್ನು ಮಕರಸಂಕ್ರಾಂತಿ ಎಂದು ಆಚರಿಸುವ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿವೆ. ಪುಣ್ಯಸ್ನಾನ,ಎಣ್ಣೆಮಜ್ಜನ,ಎಳ್ಳುಬೆಲ್ಲ ಪರಸ್ಪರವಾಗಿ ಹಂಚುವಿಕೆ, ಅವರೆಕಾಯಿ, ಕಡಲೆಕಾಯಿ, ಸಿಹಿಗೆಣಸು ಬೇಯಿಸಿ ತಿನ್ನುವ, ರಾಸು ಪೂಜೆ,ಕಿಚ್ಚು ಹಾಯಿಸುವುದು ಗಾಳಿಪಟ ಹಾರಿಸುವುದು ಹೀಗೆ ಆಚರಿಸುವ ಪದ್ದತಿಗಳು ಬೆಳೆಯುತ್ತಾ ಹೋಗುತ್ತವೆ. ಅದಿರಲಿ ಇದರ ಹಿಂದಿನ ಅಸಲಿ ವಿಜ್ಞಾನದ ಅಂಶಗಳನ್ನು, ಹಾಗು ಜ್ಯೋತಿಷ್ಯದ ಅಂಶಗಳನ್ನೂ, ಸಂಪ್ರದಾಯವನ್ನು ಒಗ್ಗೂಡಿಸಿದ ದೃಷ್ಟಿಯಿಂದ ಈ ಲೇಖನ ಬರೆಯುತ್ತಿದ್ದೇನೆ. ಅಂದಹಾಗೆ ಮಕರ ಸಂಕ್ರಾಂತಿಯ ವೈಜ್ಞಾನಿಕ ಸ್ವರೂಪದ ಅಂಶವನ್ನು ಗಮನಿಸುವುದಾದರೆ ಉತ್ತರಾಯಣ ಕಾಲದಲ್ಲಿನ ಪ್ರಥಮ ಸಂಕ್ರಮಣ ಮಕರ ರಾಶಿಯಲ್ಲಿ ಎಂಬುದು. ಸ್ವಲ್ಪಮಟ್ಟಿಗೆ ವಿವರವಾಗಿ ನೋಡೋದಾದರೆ ಖಗೋಳ ದಲ್ಲಿನ ನಕ್ಷತ್ರಗಳ ಗುಂಪುಗಳನ್ನು ಬೇರೆ ಬೇರೆ ಕಲ್ಪಿತ ಆಕೃತಗಳಾಗಿ ನೋಡುತ್ತಾ ಅವುಗಳನ್ನು ನಕ್ಷತ್ರ ಪುಂಜ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಹನ್ನೆರಡು ನಕ್ಷತ್ರ ಪುಂಜಗಳು ವೃತ್ತಾಕಾರದ ರೀತಿಯಲ್ಲಿ ಜೋಡಿಸಲ್ಪಟ್ಟಿರುತ್ತವೆ ಈ ಹನ್ನೆರಡು ನಕ್ಷತ್ರ ಪುಂಜಗಳನ್ನು ನಕ್ಷತ್ರ ರಾಶಿಗಳು ಎನ್ನುತ್ತೇವೆ. ಮೇಷ,ವೃಷಭ....ಹೀಗೆ ಇದರ...
ಯುಗದ ಆದಿ... ಯುಗಾದಿ ಇದು ಯುಗಾದಿ ಇದು ಜಗದ ಯುಗದ ಆದಿ. ಜಗ ಜಗಕೆಲ್ಲ ಹಸಿರು ಹಸಿರ ಚಿಗುರ ಹಾದಿ. ಬೇವಿಗೂ,ಬೆಲ್ಲಕೂ ಸರಿ ಸರಿದೂಗಿಸೋ ಯಾದಿ ಯುಗಾದಿ ಇದು ಯುಗಾದಿ. ತೊಟ್ಟು ಕಳಚುವ ಮುನ್ನ ಉದುರುವೆಲೆ ಜೀವವನಲ್ಲೇ ಬಿಟ್ಟು ಚಿಗುರೆಲೆಗೆ ತುಂಬೋ ಇಂಬಿದು ಯುಗಾದಿ ಇದು ಯುಗಾದಿ ಇದು ಜಗದ ಯುಗದ ಆದಿ. ಮಾವಿನ ಚಿಗುರ ಹೊಗರ ತಿಂದರೂ ಸವಿನುಲಿವ, ನಲಿವನೊತ್ತು ಧರೆಗೆ ತರುವ ಯುಗಾದಿ ಇದು ಯುಗಾದಿ ಇದು ಜಗದ ಯುಗದ ಆದಿ. ಹಳೆದಾದ ನೆಲದ ಮನದಲೊಂದಿನಿತು ಹೊಸ ಬೆಳೆ ಬೆಳೆವ ನಿಲುವುಗಳನು ಬಿತ್ತಿ ಹೊತ್ತಿ ಉರಿಯುವ ಬೆಳಕು ಯುಗಾದಿ ಇದು ಯುಗಾದಿ ಇದು ಜಗದ ಯುಗದ ಆದಿ. ಭಾವ ಬಾನಲಿ ಮಿನುಗೋ ಚುಕ್ಕಿ ಚಂದ್ರಮರ ಮುಂದಾಳುತನ ಮಿಕ್ಕಿದಷ್ಟು ಎಕ್ಕಿ ತೆಗೆದ ಸಂತಸ ಯುಗಾದಿ ಇದು ಯುಗಾದಿ ಇದು ಜಗದ ಯುಗದ ಆದಿ. ಕಳೆದಿದ್ದೆಷ್ಟೋ ಕಳಂಕಗಳ ಕೊಳವೇ ಭಾಗ್ಯೋದಯ ಇಲ್ಲಿ ಕೊಳಗದಷ್ಟು. ವೃತ್ತವಿದು ಆವೃತ್ತಿಯು, ಬಿತ್ತಿದ್ದು ಬೆಳೆದು ಬೀಜವೊಡೆದು ಮತ್ತೆ ಸಿಧ್ಧ ಮೊಳೆಕೆಗೆ. ಯುಗಾದಿ ಇದು ಯುಗಾದಿ ಇದು ಜಗದ ಯುಗದ ಆದಿ. ನೆಲಕುರುಳಿದ ಮಳೆಯುದುರ ಆವಿ ತೆರನೆ ಮೆರೆದು ಮೇಲೇರಿ ತಂಪಿನಿತು ಸುರಿದ ತೆರದೀ ಯುಗಾದಿ ಇದು ಯುಗಾದಿ ಇದು ಜಗದ ಯುಗದ ಆದಿ. ಯುಗ ಜಗಕೂ ತಿಳಿಯ ಕೆಳಗಿಳಿದ ತಿರುಗೋ ಚಕ್ರವೊಂದು ಮೇಲೆ ಬರುವ ಸೂಚಿ ಕಾಲವಿದು ಪಕ್ವವಿದೆ ಮುನ್ನ...
Comments
Post a Comment