Thoughts of mind by Kumar B B
ಕಳೆವ ಕ್ಷಣಗಳು ಮುಂದಡಿಯಾಗಬೇಕು ಭವಿತದಲಿ,
ಬೆಳೆವ ಪ್ರತಿ ಸಸಿಯು ವರವಾಗಬೇಕು ಭುವಿಯಲಿ,
ಒಣಗಿದರೂ ಮರಮುಟ್ಟಾಗಬೇಕು ನೂರ್ಕಾಲ ಭವನದಲಿ,
ಬಣಗುಡದಿರಲಿ ಬರಿನೆಲದ ಮೇಲೆ ಕರಿನೆರಳಾಗಿ ಭುವನದಲಿ.
- ಕುಮಾರ್ ಬಿ ಬಾಗೀವಾಳ್.
ಮರೆತು ಬಿಡು ಮನವೆ ಮಾಗದ ಅದೆಷ್ಟೋ
ಕಾಯಿಗಳು ಉದುರಿ ಕೊಳೆತಿವೆ ನೆಲದೊಳಗೆ,
ಕೊರಗಿದರಾಗದು ಸರಿ ಎಚ್ಚರಗೊಳ್ಳು ಮನದೊಳಗೆ
ನಾಯಿಗಳು ಎಳೆದಾಡಾವು ನೀನು ನೆಲಕುರುಳಿದರೆ ಧರೆಯೊಳಗೆ.
ಕುಮಾರ್ ಬಿ ಬಾಗೀವಾಳ್
Comments
Post a Comment