Posts

Showing posts from February, 2022

ಹನಿಗವನಗಳು

 ನೇಸರ ನಾಳೆ ನೀನೇ ಬರಬೇಕು ನೇಸರ ಸ್ವಾಗತಕೆ, ದಿವ್ಯತೆಗೆ ಮರಳಿ  ಇರಳಲಿ ಕಳೆದ ಭವ್ಯತೆಯ ತೆರೆದಿಡಲು. ಭೂಮಿ ಹೊದ್ದ ಹಸಿರ ತೋರಲು ಹಕ್ಕಿ ಕೊರೊಳಲು ಗಾನ ಉಕ್ಕಲು _ಕುಮಾರ್ ಬಿ ಬಾಗೀವಾಳ್. ಜೂಟಾಟ. ದಿನವೂ ನಡೆದಿದೆ ಸೂರ್ಯ ಚಂದ್ರರ ಜೂಟಾಟ ಹಾಗಾಗಿಯೇ ಬೆಳಗು ಕತ್ತಲೆಯ ನೆರಳಾಟ. - ಕುಮಾರ್ ಬಿ ಬಾಗೀವಾಳ್ ಹೊಡೆದವರಾರು ಚಂದಿರನ ಚೆಲ್ಲಿದೆ ಬೆಳಕು ಅಂಗಳ ತುಂಬ ಹಾಲಾಗಿ,  ಕರೆದವರ್ಯಾರೋ ಹಾಲನು ಇಲ್ಲಿ ಕೇಳಿದ ಪುಟ್ಟ ಪ್ರಶ್ನೆಯ ಸಾಲಾಗಿ. ಪೂರ್ಣ ಚಂದಿರನ ಬೀಳಿಸಿ  ಹೊಡೆದವರ್ಯಾರೋ ಹೋಳಾಗಿ. _ ಕುಮಾರ್ ಬಿ ಬಾಗೀವಾಳ್ ಜಾರಿದ ಸೂರ್ಯ. ಗಿರಿ ತುದಿಯಲಿ ಮೂಡಿದ ಸೂರ್ಯ ಹಾರಿದ ಬಾನಿಗೆ ಪಟವಾಗಿ ಸೂತ್ರವ ಎಳೆದ ಮರುಕ್ಷಣವೇ ಮುಳುಗಿದ ಕಡಲಲಿ  ಸ್ಪುಟವಾಗಿ. _ ಕುಮಾರ್ ಬಿ ಬಾಗೀವಾಳ್. ಬಾರೋ ಚಂದಿರ ಬಾರೋ ಚಂದಿರ  ಬಾರೋ ಚಂದಿರ ತೋರೋ ಸುಂದರ ಮೊಗವನು ಈಗಲೆ, ಕಾರೋ ಬಿಸಿಲಲಿ ಸೊರಗಿರೋ ಮೋರೆಗೆ ತಂಪನು ತಾರೋ ಸಲುವಾಗಿ.

ತೋರು ನೀ ಮುಖವನ್ನ ನನ್ನ ಕಂದಾ...Thoru nee mukhavanna nanna kanda... Lori writing by Kumar B Bagival

  ತೋರು ನೀ ಮುಖವನ್ನ ನನ್ನ ಕಂದಾ... ರಚನೆ : ಕುಮಾರ್ ಬಿ ಬಾಗೀವಾಳ್ ತಾರೆಗಳ ಗೊಂಚಲು ತೇರೇರಿ ಬಂದಿವೆ ತೋರು ನೀ ಮುಖವನ್ನ ನನ್ನ ಕಂದಾ, ತಾರೆಗಳನು ನೋಡುವೆನು ನಿನ್ನ ಕಂಗಳಲಿ ನನ್ನ ಮಗುವೆ, ಚಂದಿರನ ಮುಂದಿಟ್ಟು ತೋರುವೆ ನಿನ್ನನವಕೆ. ಹಕ್ಕಿಗಳ ಹಿಂಡೊಂದು ಹಾರುತಾ ಬಂದಿವೆ ತೋರು ನೀ ಮುಖವನ್ನ ನನ್ನ ಕಂದಾ ಚಿಲಿಪಿಲಿಯ ಕೇಳುವೆನು ನಿನ್ನ ಮಾತಲಿ ನನ್ನ ಮಗುವೆ, ಚಟಪಟ ಮಾತುಗಳ ಕೇಳಿಸುವೆನು ಅವಕೆ. ಸುಯ್ಯನೆ ಸುಳಿಯುತ್ತ ತಣ್ಣನೆಯ ತಂಗಾಳಿ ಬಂದಿವೆ ತೋರು ನೀ ಮುಖವನ್ನ ನನ್ನ ಕಂದಾ ಮುಂಗುರುಳ ಮುದದಾಟ ನಿನ್ನ ಮೊಗದ ಮೇಲೇರಿ  ನನ್ನ ಮಗುವೆ, ಮುಂಗುರುಳಾಟವನು ತೋರುವೆನವಕೆ. ಎಳೆ ಜೋಳದಾ ತೆನೆಗಳು ಹರಿಯಾಗಿ ಬಂದಿವೆ ತೋರು ನೀ ಮುಖವನ್ನ ನನ್ನ ಕಂದಾ ಹಾಲು ಹಲ್ಲುಗಳ ತೆನೆಯ ನೋಡುವೆನು ನೀ ನಗುವಾಗ ನನ್ನ ಮಗುವೆ, ಸಾಲು ಹಾಲು ಹಲ್ಗಳ ಪಂಕ್ತಿಯನು ತೋರುವೆನವಕೆ. ಸುಕಾಲ ಸಾಲುಗಳು ಸಾಲಾಗಿ ನಿಂದಿವೆ ತೋರು ನೀ ಮುಖವನ್ನು ನನ್ನ ಕಂದಾ ಸಾಧನೆಯ ಹಾದಿಯ ಆದಿಯನು ಕಾಣುವೆನು ನನ್ನ ಮಗುವೆ, ಸೋಲಿರದ ಹಾದಿಯ ಗೆಲುವನ್ನು ತೋರುವೆನವಕೆ.