ಹನಿಗವನಗಳು

 ನೇಸರ

ನಾಳೆ ನೀನೇ ಬರಬೇಕು ನೇಸರ

ಸ್ವಾಗತಕೆ, ದಿವ್ಯತೆಗೆ ಮರಳಿ 

ಇರಳಲಿ ಕಳೆದ ಭವ್ಯತೆಯ ತೆರೆದಿಡಲು.

ಭೂಮಿ ಹೊದ್ದ ಹಸಿರ ತೋರಲು

ಹಕ್ಕಿ ಕೊರೊಳಲು ಗಾನ ಉಕ್ಕಲು

_ಕುಮಾರ್ ಬಿ ಬಾಗೀವಾಳ್.


ಜೂಟಾಟ.

ದಿನವೂ ನಡೆದಿದೆ ಸೂರ್ಯ ಚಂದ್ರರ

ಜೂಟಾಟ

ಹಾಗಾಗಿಯೇ ಬೆಳಗು ಕತ್ತಲೆಯ

ನೆರಳಾಟ.

- ಕುಮಾರ್ ಬಿ ಬಾಗೀವಾಳ್


ಹೊಡೆದವರಾರು ಚಂದಿರನ

ಚೆಲ್ಲಿದೆ ಬೆಳಕು ಅಂಗಳ ತುಂಬ

ಹಾಲಾಗಿ, 

ಕರೆದವರ್ಯಾರೋ ಹಾಲನು ಇಲ್ಲಿ

ಕೇಳಿದ ಪುಟ್ಟ ಪ್ರಶ್ನೆಯ ಸಾಲಾಗಿ.

ಪೂರ್ಣ ಚಂದಿರನ ಬೀಳಿಸಿ 

ಹೊಡೆದವರ್ಯಾರೋ ಹೋಳಾಗಿ.

_ ಕುಮಾರ್ ಬಿ ಬಾಗೀವಾಳ್


ಜಾರಿದ ಸೂರ್ಯ.

ಗಿರಿ ತುದಿಯಲಿ ಮೂಡಿದ ಸೂರ್ಯ

ಹಾರಿದ ಬಾನಿಗೆ ಪಟವಾಗಿ

ಸೂತ್ರವ ಎಳೆದ ಮರುಕ್ಷಣವೇ

ಮುಳುಗಿದ ಕಡಲಲಿ  ಸ್ಪುಟವಾಗಿ.

_ ಕುಮಾರ್ ಬಿ ಬಾಗೀವಾಳ್.


ಬಾರೋ ಚಂದಿರ

ಬಾರೋ ಚಂದಿರ 

ಬಾರೋ ಚಂದಿರ

ತೋರೋ ಸುಂದರ ಮೊಗವನು ಈಗಲೆ,

ಕಾರೋ ಬಿಸಿಲಲಿ ಸೊರಗಿರೋ

ಮೋರೆಗೆ ತಂಪನು ತಾರೋ ಸಲುವಾಗಿ.

Comments

Popular posts from this blog

Poem: Yugada aadi , By : Kumar B Bagival ,

ಸಿನಿದಿನ