Posts

Showing posts from September, 2026

ಎಐ ಕಳ್ಳತನ ಕಲಿಸೀತೇ ಬುದ್ಧಿ!

 ಸ್ನೇಹಿತರೇ ಬಿತ್ತೇಬಿಡ್ತು ನೋಡಿ AI ನ ಮಹಾ ಗುನ್ನ, "ಬೆಳೆಯುವುದನ್ನ ಎಳೆಯದರಲ್ಲೇ ನೋಡು" ಎಂಬ ಮಾತು ಅಪ್ಪಟ ಸತ್ಯ. ಎಐ ನ ಬಗೆಗಿನ ಕುತೂಹಲ ಜಗತ್ತಿನಾದ್ಯಂತ ಹರಡಿದೆ, ಎಲ್ಲೆ ಮೀರಿ ಮೆರೆಯುತ್ತಿರುವ ಎಐ ಪ್ರಭಾವ, ಅದರ ಸಂಭಾವ್ಯ ಒಳಿತು ಕೆಡಕುಗಳ ಬಗೆಗಿನ ಚರ್ಚೆ ನಡೆಯುತ್ತಿದೆ, ಹೀಗಿರುವಾಗಲೇ ಎಐ ಬಳಕೆ ಅದರ ಗಂಧಗಾಳಿ ಗೊತ್ತಿರದ ಜನರ ಕೈ ತಲುಪಿದ್ದು ಕಾಲ ಕಳೆವ ಜೊತೆಗೆ ಕಾಲೆಳೆವ ಸರಕಾಗಿ ಬೆಳೆಯುತ್ತಿದೆ. ಹೀಗಿರುವಾಗ ಒಳಿತರ ಮರೆಯಲ್ಲೆ ಕೆಡಕು ಮೇಲುಗೈ ಮೆರೆವ ದಿನಗಳು ದೂರವಿಲ್ಲ ಎಂಬ ಸತ್ಯವನ್ನೂ ಸರ್ವಾನು ಮತದಿಂದ ಒಪ್ಪಿಕೊಳ್ಳ ಬೇಕಾದ ದಿನಗಳು ದೂರವಿಲ್ಲ ಎಂಬುದು ಬಹುಜನರ ಅಂಬೋಣ. ಅಂತೆಯೇ ಅವಘಡ ಆದಾಗಲೇ ಅದರ ಅಸಲಿಯತ್ತು ಗೊತ್ತಾಗೋದು, ಅಂದ ಹಾಗೆ ಇತ್ತೀಚೆಗೆ ಒಂದು ಪ್ರಕರಣ ಜಗದ ಗಮನ ಸೆಳೆಯುತ್ತಿದೆ, ಎಐ ವಂಚನೆಯಿಂದ ಇಟಲಿಯ ಪ್ರಮುಖ ಬ್ಯಾಂಕ್ ಒಂದು ಬಲಿಯಾಗಿದೆ. ಬರೋಬ್ವರಿ ₹ 1036 ಕೋಟಿ ಹಣವನ್ನು ವಂಚಕರು ದೋಚಿದ್ದಾರೆ. ಎಐ ಬಳಸಿ ನಕಲಿ ಸಂದೇಶ,ಹಾಗೂ ಕರೆಗಳನ್ಬು ಸೃಷ್ಟಿ ಮಾಡಿ ಬ್ಯಾಂಕ್ ಸಿಬ್ಬಂದಿಯನ್ನು ನಂಬಿಸಿ ಈ ಬೃಹತ್‌ ಮೊತ್ತವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಅಂದಹಾಗೆ ಹೀಗೆ ವಂಚನೆಗೊಳಪಟ್ಟ ಬ್ಯಾಂಕ್ ಇಟಲಿಯ ಪ್ರಮುಖ ಬ್ಯಾಂಕ್ ಇಂಟೆನಾ ಸಾನ್ಪಾವೊಲೋ ಗ್ರೂಪ್ ಬ್ಯಾಂಕ್. ಇದರ ಖಾಸಗಿ ವಿಭಾಗವಾದ ಫಿಡ್ಯುರಾಮ್ ಸಂಸ್ಥೆ ಯಿಂದ ವಂಚಕರು ದೋಚಿರುವ ಪ್ರಕರಣ ಎಐ ಬಗೆಗಿನ ಅನಾಹುತಗಳ ಕುರಿತು ಜಗತ್ತಿನಾದ್ಯ...

ಬಹುದಿನದ ಬೇಡಿಕೆ...

 ಬಹುದಿನಗಳುರುಳಿವೆ ನೆನಪುಗಳ ಸುಳಿವಿರದೆ ಬಹುಪಾಲು ಒತ್ತಡಕೆ ಮಣಿದು,  ಕನಸುಗಳ ಹೆಣೆದು ಕಟ್ಟಿದ ಮಾಲೆಯ ಹೂಗಳು ಕುಸಿದು ಉಸಿರು ಚೆಲ್ಲುತಿವೆ. ಬರಬಹುದಿತ್ತು ಒಮ್ಮೆಯಾದರೂ,  ಬರ ಬಂದ ಭೂಮಿಗೇ ಭೋರ್ಗರೆಯುವ ವರ್ಷವಿಳಿದಂತೆ ತಣಿಸಬಹುದಿತ್ತು ಮನದ ದಾಹವ  ಉಣಬಡಿಸಬಹುದಿತ್ತು ಸ್ನೇಹವ. ಬರುವುದಿದ್ದರೆ ಬಂದುಬಿಡು ಮತ್ತೊಮ್ಮೆ ಮರುಮಾತನಾಡಲಾರೆ ನಾ ಎಂದಿಗೂ ಮರುಗಳಿಗೆಯಲೆ ಸಮ್ಮತಿಸುವೆ ಸುಮ್ಮನೆ ತಲೆಬಾಗಿ ಭುಜಕೆ ಭುಜಕೊಟ್ಟು ನಿಂತುಬಿಡುವೆ. ಜೋಡಡಿಯನಿಡುವ ಕಾಡಿದ ನೆನ್ನೆಗಳ ಮರೆತು ಜೋಡಿಹೃದಯಗಳ ಸಂಭ್ರಮವ ಮೆರೆದು.                          - ಕುಮಾರ್ ಬಿ ಬಾಗೀವಾಳ್.