Posts

Showing posts from March, 2021

ಬರುವೆಯಾ ಗೆಳತಿ ಬದುಕ ಪಯಣದ ಜೊತೆ

  ಬರುವೆಯಾ ಗೆಳತಿ ಬದುಕ ಪಯಣದ ಜೊತೆ ಹೊ ರುವೆ ಪಲ್ಲಕಿಯ  ನಿನ್ನ ಸಹಿತ ನಿರಂತರ ಹಂಬಲದ ತುಮುಲ ಮನಸಿಗೊಂದಿಷ್ಟು ನೆಮ್ಮದಿಯ, ತುಂಬು ಪ್ರೀತಿಯ ತುಂಬಿ ಮೆರೆಸುವೆ ಬಿಗಿದಪ್ಪಿ ಬಿಮ್ಮನೆ. ಸರಿವ ಮೋಡಕೂ ಬಿಡುವಾಗಲೀ ಬಿಡು ಜೊತೆಗೆ ನಾನಿಲ್ಲವೆ ಸುರಿವ ಮಳೆಗಷ್ಟು ತೋಯ್ದುಬಿಡು ಹೊದುಪು ಕೊಡುವ ಬಯಕೆಯು ಬರಿಗಾಲಲೊಂದಷ್ಟು ದೂರ ನಡೆದುಬಿಡು ಹೆಜ್ಜೆಗೂ ತಳವಾಗುವೆ ಗುರಿಯೆ ನಾನಾಗಿದ್ದರೆ ನನ್ನನೊಮ್ಮೆ ಹಾಗೆ ಒಪ್ಪಿಬಿಡು. ಕಣ್ಣಳತೆಗೂ ಮಿಕ್ಕಿ ವಿಸ್ತಾರವಿದೆ ಬಾನ ಚಿತ್ತಾರ ಸಣ್ಣ ಕಣಕಣವೂ ನೆನಪಿಡುವ ಹಾಗೆ ಬದುಕು ಕಟ್ಟುವ ಸರಿ-ಬೆಸಗಳನ್ನೂ ಸರಿಯಾಗಿಯೇ ನೋಡುವೆನು ಬೆಟ್ಟದಷ್ಟಿದ್ದರೂ ಕಷ್ಟಗಳು ಇಷ್ಟಪಟ್ಟೇ ಮೆಟ್ಟಿನಿಲ್ಲುವ. ಮೊಗೆದಷ್ಟು ಮುಗಿಯದ ಸುಮಧುರ ಭಾವಗಳ ಅಲೆಗಳಲಿ ಈಜುತಾ ಸಾಗುವ ಬದುಕ ಕೊನೆವರೆಗೂ ನಾಳೆಗಳ ಪರಿವೆಯೇ ಬೇಡ ಸದ್ಯವಷ್ಟೇ ನಮದು ಸಾಧ್ಯತೆಗಳ ಗೊಡವೇ ಬೇಡ ಪರಿಪಕ್ವ ಬದುಕಿಗೆ‌. ರಚನೆ : ಕುಮಾರ್ ಬಿ ಬಾಗೀವಾಳ್.

ತಡೆಯದಿರು ಮನುಜ ಕಡಲ...

  ತಡೆಯದಿರು ಮನುಜ ಕಡಲ... ಮರಳಿ ಸರಿ ಹೋಗದು ಮನುಜ ಹದಗೆಟ್ಟಾ ಹಾಲು ಹುಳಿ ಬಂದ ಹಾಲು ಅದುವೆ ಬೇರೆಯವರ ಪಾಲು. ಹಳಿ ಬದಲಿಸಿದ ಬಂಡಿ ಮುಂದೆ ಹಿಡಿಯದು ಸಾಲು ಕಳಿಯಿತಂದು ಅದರಷ್ಟಕೆ ಬಿಡು ನೀ ಅದನು ಚಿಂತೆ ಬೇಡ. ಖುಷಿಗಾಗಿ ತಿರುಗೋದೊಮ್ಮೆ ತಿರುಗಿ ಬೀಳೋದು ಖಚಿತ ತಿರುಗುವಿಕೆಯಾ ತಡೆಯದಿದ್ದರೆ ನೀನು ಅದು ನಿನಗೇ ಉಚಿತ ಮರುಗಿ ಕೊರಗದಿರೋ ಮಂಕೆ ಅರಿತಿಲ್ಲಾ ನೀ ಜಗವ ಜಗವೆಲ್ಲಾ ಜಗಮಗ ಮಗನೇ ತಿಳಿ ಬೆಳಕ ಕಡೆಯ ಜಗವ. ತಡೆಯುಲಾದೀತೆ ಕಡಲ ರಕ್ಕಸದಲೆಯ ಕಡಲಲೇ ನೀನು ತರವಲ್ಲ ನಿನಗದು ನಿನ್ನ ಹಾದಿ ನಿನಗೆ ಸರಿದು ಬಿಡು ನೀನೆ ತಡೆಯಲಾದೀತೆ ಹರಿವ ನೀರ ಕೊಚ್ಚೆ ಸೇರದ ಹಾಗೆ  ಕೊರೆದು ಕೊಚ್ಚೆ ಸೇರುವೆನೆಂದರೆ ಸೇರಲಿಬಿಡು ಅದರ ಪಾಡಿಗೆ. ಹಣ್ಣು ಹಣ್ಣಾಗಿರುವಾಗಲಷ್ಟೇ ಅದು ನಿನ್ನ ಪಾಲು ಹಣ್ಣು ಕೊಳೆತು ನಾರಿ ಹೆಂಡವಾದರೆ ಅದು ಕುಡುಕರ ಪಾಲು. ಹುಣ್ಣು ಹೊಡೆದಮೇಲಿನ ಗಾಯದ ಗುರುತು ಶಾಶ್ವತ ಹುಣ್ಣು ಕೆರೆಯದಿದ್ದರೆ ವಾಸಿ ಮಾಸುವುದು ನಿಶ್ಚಿತ. ರಚನೆ : ಕುಮಾರ್ ಬಿ ಬಾಗೀವಾಳ್

ಶರಣಾಗುವೆ ಗುರುವೆ ಶಿರಬಾಗಿ.

  ಶರಣಾಗುವೆ ಗುರುವೆ ಶಿರಬಾಗಿ. ಬೆಳಕಾಗಲಿ ಗುರುವೆ ನಿನ್ನ ನೆನಹು ನಾ ನಡೆವ ಹಾದಿಯುದ್ದಕೂ ಜೊತೆಗೆ ಸಾಗಲಿ ಶರಣಾಗುವೆ ಶಿರಬಾಗಿ , ಮುನ್ನಡೆಸಿ ನನ್ನ. ಉಸಿರಾಗಲಿ ಗುರುವೆ ನಿನ್ನ ಕುರುಹು ಉಸಿರು ನಿಲ್ಲುವವರೆಗೂ ಒಂದೇ ಆಗಲಿ ಶರಣಾಗುವೆ ಶಿರಬಾಗಿ , ಮುನ್ನಡೆಸಿ ನನ್ನ. ಬೆಳಕಾಗಲಿ ಗುರುವೆ ನಿನ್ನ ನೆನಹು ನಾ ನಡೆವ ಹಾದಿಯುದ್ದಕೂ ಜೊತೆಗೆ ಸಾಗಲಿ ಶರಣಾಗುವೆ ಶಿರಬಾಗಿ, ಮುನ್ನಡೆಸಿ ನನ್ನ. ಶಿಲ್ಪವಾಗಲಿ ಗುರುವೆ ನೀ ಮಟ್ಟಿದಾ ಶಿಲೆಯು ಕಲ್ಪವಾಗಲಿ ಅಲ್ಪವ ಮೀರಲಿ ಮೇರೆ ಶರಣಾಗುವೆ ಶಿರಬಾಗಿ , ಮನ್ನಡೆಸಿ ನನ್ನ. ಬೆಳಕಾಗಲಿ ಗುರುವೆ ನಿನ್ನ ನೆನಹು ನಾ ನಡೆವ ಹಾದಿಯುದ್ದಕೂ ಜೊತೆಗೆ ಸಾಗಲಿ ಶರಣಾಗುವೆ ಶಿರಬಾಗಿ , ಮುನ್ನಡೆಸಿ ನನ್ನ. ನೆಲೆಯಾಗಲಿ ಗುರುವೆ ನೀ ನೀಡಿದ ಮಲೆಯು ಅಲೆದಾಡೋ ಮನವು ನೆಲೆಸಲಿ ವರುಷ ಶರಣಾಗುವೆ ಶಿರಬಾಗಿ , ಮುನ್ನಡೆಸಿ ನನ್ನ. ರಚನೆ : ಕುಮಾರ್ ಬಿ ಬಾಗೀವಾಳ್.

ಕಣ್ಣ ಹನಿ ಬರೆದಿದೆ ಕವನ. Kanna hani baredide kavana.... a poem by Kumar B Bagival

  ಕಣ್ಣ ಹನಿಯೊಂದು ಕವನ ಬ ರೆದಂತಿದೆ ಕೆನ್ನೆಯ ಮೇಲೆ. ಹರಿದಿದೆ ಗಲ್ಲದುದ್ದಕೂ ವಾಚಿಸಿ. ಬಣ್ಣ ಮಾಸುತಿದೆ ಹನಿಗೆ ಕಾಣದ ಹೊದುಪಿನೊಳಗಿನ ತೊಗಲು ಕಾಣುತಿದೆ ನೆಮ್ಮದಿಯನು ಯಾಚಿಸಿ. ಮುಚ್ಚಿಟ್ಟ ಸತ್ಯದ ಹರಿವು ಬಚ್ಚಿಡಲಾಗದ ಹೊರಹರಿವು ಕೊಚ್ಚಿಹೋದಂತಿದೆ ಪದರ ಕಿಚ್ಚಾಯಿಸಿ. ರೆಪ್ಪೆಯ ಮಧ್ಯದಲೆಷ್ಟೋ ಕಪ್ಪೆ ಚಿಪ್ಪೊಳಗಿದ್ದ ಮುತ್ತುಗಳು ಹರಡಿ ನಿಂತಿವೆ ತಡೆದು ಒಡೆಯದೆ ವಿವೇಚಿಸಿ. ಮಂಜಾಗಿಸಿದ ಮುತ್ತುಗಳ ರಾಶಿಯ ಮೇಲೆ ಕವನದ ಸಾಲುಗಳೇ ಸಾಲಾಗಿ ಸಾರುತಿವೆ ಸರಧಿಗಾಗಿ ಯೋಚಿಸಿ. ಜಾರಿದ ಕಂಬನಿ ಸೇರಿದೆ ಮರಳೊಳಗೆ                                      ಸುರಿದ ಹನಿಯದು ಬೆರೆತಿದೆ ಮಳೆಯೊಳಗೆ ಕುರುಹು ಇಲ್ಲದ ಹಾಗಾಗಿದೆ ಸಮಯದ ಹಂಗನು ಯಾಚಿಸಿ. ರಚನೆ : ಕುಮಾರ್ ಬಿ ಬಾಗೀವಾಳ್.

ರಾಷ್ಟ್ರೀಯ ವಿಜ್ಞಾನ ದಿನ.(ಫೆಬ್ರವರಿ28) National science day... An article by Kumar B Bagival

Image
  ರಾಷ್ಟ್ರೀಯ ವಿಜ್ಞಾನ ದಿನ.(ಫೆಬ್ರವರಿ <script data-ad-client="ca-pub-1254641642343099" async src="https://pagead2.googlesyndication.com/pagead/js/adsbygoogle.js"></script> ವಿಜ್ಞಾನವಿಲ್ಲದ ಧರ್ಮ,ಧರ್ಮರಹಿತ ವಿಜ್ಞಾನ ಎರಡೂ ನಿರರ್ಥಕ. ವಿಶ್ವದ ಕಣಕಣದ ಮೇಲೆಯೂ ಬೆಳಕ ಚೆಲ್ಲಬಹುದಾದ ಶಿಸ್ತುಬದ್ಧ ಅದ್ಯಯನ ವಿಜ್ಞಾನ. ಭೂಮ್ಯೋದಯದಿಂದ, ಭೂಮ್ಯತೀತ ಕಲ್ಪಿತಗಳನ್ನು ಸಾಧಿತಗಳಿಸುವಲ್ಲಿ ನಿಲ್ಲದ ಅವಿರತ ಪ್ರಯತ್ನಗಳ ಸರಮಾಲೆ ಈ ವಿಜ್ಞಾನ. ನೆಲದ ಮೇಲಿನ ಯಾವುದೇ ದೇಶ ತನ್ನ ಅಸ್ತಿತ್ವದ ಇರುವಿಕೆಯನ್ನು,ತನ್ನ ಪ್ರಬಲತೆಯನ್ನು ದೃಢೀಕೃತವಾಗಿ ಸಾರಲು ಇಂದಿನ ದಿನಮಾನಗಳಲ್ಲಿ ಆ ದೇಶ ವೈಜ್ಞಾನಿಕವಾಗಿ ಪ್ರಬಲವಾಗಿರಬೇಕಾದ ಅನಿವಾರ್ಯತೆ ಇದೆ. ಪ್ರಖರ ವೈಜ್ಞಾನಿಕ ನೆಲೆಗಟ್ಟನ್ನ ಹೊಂದಿರುವ ದೇಶ ವಿಶ್ವದ ಪ್ರಮುಖ ದೇಶ ಎನಿಸಿಕೊಳ್ಳುತ್ತದೆ ಎಂದಾದರೆ ಆ ದೇಶದ ವಿಸ್ತೀರ್ಣವಾಗಲಿ ಭೌಗೋಳಿಕ ಅಂಶಗಳಿಂದಾಗಲಿ ಅಲ್ಲ ಅದು ಕೇವಲ ವೈಜ್ಞಾನಿಕ ಬೆಳವಣಿಗೆಯಿಂದಾಗಿ ಮಾತ್ರ ಸಾಧ್ಯ ಎಂಬುದನ್ನು ಒಪ್ಪಲೇಬೇಕು. ಹಾಗಾಗಿ ವಿಜ್ಞಾನದ ಕಲಿಕೆ ಬೆಳವಣಿಗೆ ಒಂದು ದೇಶಕ್ಕೆ ಅನಿವಾರ್ಯ. ದೇಶದ ಮಾನವ ಸಂಪನ್ಮೂಲವನ್ನು ವೈಜ್ಞಾನಿಕವಾಗಿ ಸದೃಢವಾಗಿಸುವುದು ಬಹುಮುಖ್ಯ ಕಾರ್ಯಗಳಲ್ಲಿ ಅತೀ ಪ್ರಮುಖವಾದದ್ದು. ದೇಶದ ಪ್ರಗತಿ ಪರ ಯೋಚನೆಗಳು ಯೋಜನೆಗಳಾಗಿ ಬದಲಾಗಬೇಕಾದ ಸಂದರ್ಭದಲ್ಲಿ ವೈಜ್ಞಾನಿಕ ಶೋದನೆ, ವೈಜ್ಞಾನಿಕ ಮನೋ...