ಶರಣಾಗುವೆ ಗುರುವೆ ಶಿರಬಾಗಿ.
ಶರಣಾಗುವೆ ಗುರುವೆ ಶಿರಬಾಗಿ.
ಬೆಳಕಾಗಲಿ ಗುರುವೆ ನಿನ್ನ ನೆನಹು
ನಾ ನಡೆವ ಹಾದಿಯುದ್ದಕೂ ಜೊತೆಗೆ ಸಾಗಲಿ
ಶರಣಾಗುವೆ ಶಿರಬಾಗಿ , ಮುನ್ನಡೆಸಿ ನನ್ನ.
ಉಸಿರಾಗಲಿ ಗುರುವೆ ನಿನ್ನ ಕುರುಹು
ಉಸಿರು ನಿಲ್ಲುವವರೆಗೂ ಒಂದೇ ಆಗಲಿ
ಶರಣಾಗುವೆ ಶಿರಬಾಗಿ , ಮುನ್ನಡೆಸಿ ನನ್ನ.
ಬೆಳಕಾಗಲಿ ಗುರುವೆ ನಿನ್ನ ನೆನಹು
ನಾ ನಡೆವ ಹಾದಿಯುದ್ದಕೂ ಜೊತೆಗೆ ಸಾಗಲಿ
ಶರಣಾಗುವೆ ಶಿರಬಾಗಿ, ಮುನ್ನಡೆಸಿ ನನ್ನ.
ಶಿಲ್ಪವಾಗಲಿ ಗುರುವೆ ನೀ ಮಟ್ಟಿದಾ ಶಿಲೆಯು
ಕಲ್ಪವಾಗಲಿ ಅಲ್ಪವ ಮೀರಲಿ ಮೇರೆ
ಶರಣಾಗುವೆ ಶಿರಬಾಗಿ , ಮನ್ನಡೆಸಿ ನನ್ನ.
ಬೆಳಕಾಗಲಿ ಗುರುವೆ ನಿನ್ನ ನೆನಹು
ನಾ ನಡೆವ ಹಾದಿಯುದ್ದಕೂ ಜೊತೆಗೆ ಸಾಗಲಿ
ಶರಣಾಗುವೆ ಶಿರಬಾಗಿ , ಮುನ್ನಡೆಸಿ ನನ್ನ.
ನೆಲೆಯಾಗಲಿ ಗುರುವೆ ನೀ ನೀಡಿದ ಮಲೆಯು
ಅಲೆದಾಡೋ ಮನವು ನೆಲೆಸಲಿ ವರುಷ
ಶರಣಾಗುವೆ ಶಿರಬಾಗಿ , ಮುನ್ನಡೆಸಿ ನನ್ನ.
ರಚನೆ : ಕುಮಾರ್ ಬಿ ಬಾಗೀವಾಳ್.
Comments
Post a Comment