ಬರುವೆಯಾ ಗೆಳತಿ ಬದುಕ ಪಯಣದ ಜೊತೆ

 ಬರುವೆಯಾ ಗೆಳತಿ ಬದುಕ ಪಯಣದ ಜೊತೆ

ಹೊರುವೆ ಪಲ್ಲಕಿಯ  ನಿನ್ನ ಸಹಿತ ನಿರಂತರ

ಹಂಬಲದ ತುಮುಲ ಮನಸಿಗೊಂದಿಷ್ಟು ನೆಮ್ಮದಿಯ,


ತುಂಬು ಪ್ರೀತಿಯ ತುಂಬಿ ಮೆರೆಸುವೆ ಬಿಗಿದಪ್ಪಿ ಬಿಮ್ಮನೆ.




ಸರಿವ ಮೋಡಕೂ ಬಿಡುವಾಗಲೀ ಬಿಡು ಜೊತೆಗೆ ನಾನಿಲ್ಲವೆ


ಸುರಿವ ಮಳೆಗಷ್ಟು ತೋಯ್ದುಬಿಡು ಹೊದುಪು ಕೊಡುವ ಬಯಕೆಯು


ಬರಿಗಾಲಲೊಂದಷ್ಟು ದೂರ ನಡೆದುಬಿಡು ಹೆಜ್ಜೆಗೂ ತಳವಾಗುವೆ


ಗುರಿಯೆ ನಾನಾಗಿದ್ದರೆ ನನ್ನನೊಮ್ಮೆ ಹಾಗೆ ಒಪ್ಪಿಬಿಡು.




ಕಣ್ಣಳತೆಗೂ ಮಿಕ್ಕಿ ವಿಸ್ತಾರವಿದೆ ಬಾನ ಚಿತ್ತಾರ


ಸಣ್ಣ ಕಣಕಣವೂ ನೆನಪಿಡುವ ಹಾಗೆ ಬದುಕು ಕಟ್ಟುವ


ಸರಿ-ಬೆಸಗಳನ್ನೂ ಸರಿಯಾಗಿಯೇ ನೋಡುವೆನು


ಬೆಟ್ಟದಷ್ಟಿದ್ದರೂ ಕಷ್ಟಗಳು ಇಷ್ಟಪಟ್ಟೇ ಮೆಟ್ಟಿನಿಲ್ಲುವ.




ಮೊಗೆದಷ್ಟು ಮುಗಿಯದ ಸುಮಧುರ ಭಾವಗಳ


ಅಲೆಗಳಲಿ ಈಜುತಾ ಸಾಗುವ ಬದುಕ ಕೊನೆವರೆಗೂ


ನಾಳೆಗಳ ಪರಿವೆಯೇ ಬೇಡ ಸದ್ಯವಷ್ಟೇ ನಮದು


ಸಾಧ್ಯತೆಗಳ ಗೊಡವೇ ಬೇಡ ಪರಿಪಕ್ವ ಬದುಕಿಗೆ‌.


ರಚನೆ : ಕುಮಾರ್ ಬಿ ಬಾಗೀವಾಳ್.




Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES