ಸಂಖ್ಯೆಯ ಆಟವಲ್ಲ ನಿನ್ನೊಂದಿಗಿನ ದಿನಗಳು... Sankhyeya aatavalla ninnondigina dinagalu... A poem by Kumara B Bagival
ಸಂಖ್ಯೆಯ ಆಟವಲ್ಲ ನಿನ್ನೊಂದಿಗಿನ ದಿನಗಳು...
ಕರೆದು ಮೊರೆಯಿಟ್ಟರೂ ಓಗೊಡದ ಮನವೆ
ಬರೆದು ಹರಿದು ಹಾಕಿರುವೆ ಸಾಲುಗಳ ಪುಟಗಳನೆ
ಸರಿದು ದೂರದಿ ನಿಂತು ನೋಡುವೆ ಏತಕೆ ಸುಮ್ಮನೆ
ಮುರಿದು ಮೌನವನೊಮ್ಮೆ ಕೂಗಿಬಿಡು ನನ್ನನೊಮ್ಮೆ.
ಹರಿವ ದಿನಗಳ ಲೆಕ್ಕವು ಸಿಗವು ನಾಳೆಗಳ ಸಂತೆಯಲಿ
ಸುರಿವ ಬಾಷ್ಪದ ನಳವು ನಂದಿಹೋಗುವ ಚಿಂತೆಯಲಿ
ಕೊರೆವ ಮಣಭಾರದ ಮನವನೊತ್ತು ಅಲೆಯುತಲಿ
ಬರುವ ದಿನಗಳ ಏಣಿಸುತ ಕಾಯ್ವೆನಾ ನಿನದೇ ಜ್ಞಾನದಲಿ.
ಅಂಕೆಯ ಮೀರುವ ಸಮುಯದಲಿ ಮಿತಿ ಏರುವ
ಶಂಕೆಯಿಲ್ಲದ ಪ್ರೀತಿಯ ಅಭಿಮಾನದಿ ಸಾರುವ
ಸಂಖ್ಯೆಗಳ ಆಟವಷ್ಟೇ ಆಗದಿರಲಿ ನಿನಗೋಸ್ಕರ
ಕಳೆದ ದಿನಗಳು, ಸೊನ್ನೆಯಾದರೂ ಸರಿಬೆಲೆಯಿರಲಿ ದಿನಗಳಿಗೆ.
ರಚನೆ :ಕುಮಾರ್ ಬಿ ಬಾಗೀವಾಳ್.
Comments
Post a Comment