Posts

Showing posts from September, 2021

ನಿನ್ನೊಂದಿಗೆ ನಾ ಕವಿಯೇ ಗೆಳತಿ? Am I poet with you my dear?

ನಿನ್ನೊಂದಿಗೆ ನಾ ಕವಿಯೇ ಗೆಳತಿ?    ನಿನ್ನೊಂದಿಗಿನ ಮಾತ ಸರಣಿ ಯುಗದ ಮೌನ ಮುರಿದ ಅನುಭವ.  ಕವಿಯೋ ನಾ ನಿಘಂಟೋ ನಿನ್ನ ಸನಿಹದಲಿ  ಮಾತುಗಳ ಮಂಟಪವೇ ಕಟ್ಟಿಯಾಗಿದೆ ನಿನ್ನೆದುರಿಗೆ.  ಭುವಿಯೊಂದು ಹಸಿರುಟ್ಟಂತೆ ನೀನೊಟ್ಟಿಗಿದ್ದರೆ  ಬಿಲ್ಲೊಂದು ಬಣ್ಣ ಬಳಿದಂತೆ ನೀನೊಟ್ಟಿಗಿದ್ದರೆ.  ತಡೆಯಿಲ್ಲದ ಕಡಲಬ್ಬರ ಹೃದಯದಲಿ  ಬಿಡುವಿಲ್ಲದ ಆ ನೇಸರ ನಿನ್ನೊಂದಿಗಿನ ಸಮಯದಲಿ  ಹುಣ್ಣಿಮೆಯು ಹಾಲ ಚೆಲ್ಲಿದಂತೆ ನೀನೊಟ್ಟಿಗಿದ್ದರೆ ಮಾತು ಬೆಳೆದ ಬರದಲಲ್ಲಲ್ಲಿ ನೆನಪ ತುಂತುರು ನೀನಿದ್ದರೆ  ಅಂದದ ಪ್ರಶ್ನೆಯಲ್ಲ ಅದು ಹೃದಯದಾಳದ ಪ್ರಶ್ನೆ.  ನಗುವಿನ ಪ್ರಶ್ನೆಯಲ್ಲ ಅದು ಭಾವನೆಯ ಹರಿವ ಪ್ರಶ್ನೆ.  ದೇಹದ ಪ್ರಶ್ನೆಯಲ್ಲ ಅದು ಮನಸಿನ ಪ್ರಶ್ನೆ.  ಮಾತಿಲ್ಲದ ಜಾಗದಲಿ ನಯನದಲಿ ತುಂಬಿದ ಮಾತು  ನೋಟವಿಲ್ಲದ ಜಾಗದಲಿ ಉಸಿರಿನಲಿ ತುಂಬಿದ ಮಾತು  ಇಷ್ಟಾದರು ನನಗೇ ಅರಿವಿಲ್ಲ ಮಾತದು ಹೇಗೆ   ಕಾಯ್ದುಕೊಂಡಿದೆ ನಿರಂತರತೆ ನಿನ್ನೊಂದಿಗೆ?  ಉತ್ತರ ನೀನೆ ಇರಬಹುದು ನೀ ಕೇಳು  ನಿನ್ನ ನಯನಕೆ ಅಣತಿ ದೂರದಲಿನ ಹೃದಯವನು  ಸನ್ನೆ ಮಾಡುತಿದೆ ನಾ ಹೇಳುವೆ ನೀ ಕೇಳೇ ಎಂದು.  ರಚನೆ : ಕುಮಾರ್ ಬಿ ಬಾಗೀವಾಳ್.

ಅಕ್ಟೋಬರ್‌ 2021 ರ ಪ್ರಮುಖ ದಿನಗಳು , IMPORTANT DAYS OF OCTOBER 2021

ಅಕ್ಟೋಬರ್‌ 2021 ರ ಪ್ರಮುಖ ದಿನಗಳು    ಅಕ್ಟೋಬರ್ 1 . ಹಿರಿಯರಿಗೆ ಗೌರವಾರ್ಥ ಅಂತರರಾಷ್ಟ್ರೀಯ ಹಿರಿಯರ ದಿನ   ಅಕ್ಟೋಬರ್ 2- ಮಹಾತ್ಮ ಗಾಂಧಿ ಜನ್ಮದಿನ, ಅಂತರ ರಾಷ್ಟ್ರೀಯ ಅಹಿಂಸಾ ದಿನ.    ಅಕ್ಟೋಬರ್ 4- ಅಂತರರಾಷ್ಟ್ರೀಯ ಪ್ರಾಣಿ ಕ್ಷೇಮಾಭಿವೃದ್ಧಿ ದಿನ .   ಅಕ್ಟೋಬರ್ 5- ವಿಶ್ವ ಶಿಕ್ಷಕರ ದಿನ world teacher's day.   ಅಕ್ಟೋಬರ್ 7- World Cotton Day ,ವಿಶ್ವ ಹತ್ತಿ ದಿನ    ಅಕ್ಟೋಬರ್ 8 - ವಾಯು ಸೇನಾ ದಿನ, Air Force Day, ವಿಶ್ವ ಮೊಟ್ಟೆ ದಿನ(ಅಕ್ಟೋಬರ್ ಎರಡನೇ ಶುಕ್ರವಾರ)    ಅಕ್ಟೋಬರ್ 9 - ವಿಶ್ವ ಅಂಚೆ ದಿನ,World Post Day, ವಿಶ್ವ ವಲಸೆ ಹಕ್ಕಿಗಳ ದಿನ, World Migratory Bird Day    ಅಕ್ಟೋಬರ್ 10 - ವಿಶ್ವ ಮಾನಸಿಕ ಆರೋಗ್ಯ ದಿನ, world mental health day.    ಅಕ್ಟೋಬರ್ 11 - ಉಳಿತಾಯ ಖಾತೆ ದಿನ, Saving bank day.   ಅಕ್ಟೋಬರ್ 12 - ಅಂಚೆ ಜೀವ ವಿಮಾ ದಿನ, Postal Life Insurance Day   ಅಕ್ಟೋಬರ್ - 13 - ಅಂಚೆ ಚೀಟಿ ಸಂಗ್ರಹ ದಿನ , Philately Day  ಅಕ್ಟೋಬರ್ 14 - ವ್ಯವಹಾರ ಅಭಿವೃದ್ಧಿ ದಿನ, Business Development Day. ಒಟ್ಟಾರೆಯಾಗಿ  ಅಕ್ಟೋಬರ್ 9-15 ನ್ನು ರಾಷ್ಟ್ರೀಯ ಅಂಚೆ ಸಪ್ತಾಹ ಎನ್ನಲಾಗುತ್ತದೆ...

FOOD WHERE DOES IT COME FROM?

Food Where Does It Come From? Q. 1. Do you find that all living beings need the same kind of food?  Ans. No, all living beings do not need same kind of food.  Q.2. Name five plants and their parts that we eat.  Ans. The names of five plants and their parts that we eat are: (i) Paddy: seeds (ii) Wheat: seeds (iii) Mustard plant: seeds and leaves (iv) Brinjal plant: fruits (v) Potato plant: stems   Q. 3. Give two examples where two or more parts of a single plant are used as food.  Ans. Mustard — seeds and leaves, Pumpkin — fruit and flowers.  Q.4. Suggest any three ways you can think of to avoid wastage of food.  Ans. (i) Avoid leaving food uneaten in meals. (ii) “Eat to live” and not “live to eat” — excess eating should be avoided. (iii) Raw food like pulses, grains should be stored properly.  Q.5. Name two sugar producing plants.  Ans. (a) Sugarcane (b) Sugar beet.  Q.6. What items are...

Teachers day message by Kumar B Bagival

ಶಿಕ್ಷಕರ ದಿನಾಚರಣೆಯ ಶುಭಾಶಯಗಳೊಂದಿಗೆ... ಅಲ್ಲಮ ಪ್ರಭುಗಳ ಪ್ರಕಾರ ಹದಿನೆಂಟು ಗುರುಸ್ಥಲಗಳು ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರುಗಳೆಂಬ  ತ್ರಿವಿಧ ಗುರುಗಳು, ಸಕಾಯ, ಆಕಾಯ, ಪರಕಾಯವೆಂಬ  ತ್ರಿವಿಧ ಗುರುಗಳು, ಕಾಯಾನುಗ್ರಹ, ಇಂದ್ರಿಯಾನುಗ್ರಹ, ಪ್ರಾಣಾನುಗ್ರಹವೆಂಬ  ತ್ರಿವಿಧ ಗುರುಗಳು, ನಿರ್ದೆಹಾಗಮ, ನಿರ್ಭಾವಾಗಮ, ನಷ್ಟಾಗಮವೆಂಬ  ತ್ರಿವಿಧ ಗುರುಗಳು, ಕ್ರಿಯಾನಿಷ್ಟ, ಭಾವನಿಷ್ಟ, ಜ್ಞಾನನಿಷ್ಟಯೆಂಬ  ತ್ರಿವಿಧ ಗುರುಗಳು, ಚರ , ಅಚರ, ನಾಸ್ತಿಯೆಂಬ  ತ್ರಿವಿಧ ಗುರುಗಳು. ಸಂಗ್ರಹ:  ಕುಮಾರ್ ಬಿ ಬಾಗೀವಾಳ್.