Good Thougts
ಇದ್ದೇ ಇದೆ ಜಾಗ..
ಇದ್ದೇ ಇದೆ ಎಲ್ಲದಕೂ ಜಾಗ ಧರೆಯಲಿ
ಎಡವಿ ಬಿದ್ದಿದಕೂ, ಗೆದ್ದು ಬೀಗಿದಕ್ಕೂ…
ಕರಗಿ ಹರಿದದಕೂ, ಸುಟ್ಟು ಉರಿದದಕೂ..
ಸೊರಗಿದಕೂ…. ಮೆರೆದಿದಕೂ….
ಇದ್ದೇ ಇದೆ ಎಲ್ಲದಕೂ...ಜಾಗ..
ತುಳಿಯದೆ ಬಿಡುವರೆ..
ಬೆಳೆದು ನಿಂತು ಒಣಗುವುದರೊಳಗಿನವರೆಗಷ್ಟೇ ಬದುಕು.
ತುಳಿವುದೇತಕೆ ಇತರರ, ತರಗೆಲೆ ಜನುಮ ನಿನದು.
ನೀ ಬಿದ್ದಾಗ ತುಳಿಯದೇ ನಡೆವರೇ ನಿನ್ನನು?
~ ಕುಮಾರ್ ಬಿ ಬಾಗೀವಾಳ್
Comments
Post a Comment