ಸರಿ ನೀ ಸ್ವಾಗತಿಸ ಬೇಕಿದೆ ನಾಳೆಗಳ…. Get lost I Want to welcome new days.... poem by KUMAR B BAGIVAL

 ಸರಿ ನೀ ಸ್ವಾಗತಿಸ ಬೇಕಿದೆ ನಾಳೆಗಳ….



ಬರಿದೇ ಸಂಖ್ಯೆಯ ನೆಪವಾಗಿ ಬಂದೆ ನೀ

ಸರಿಯುವ ಕಾಲ ಬಂದಾಯಿತು ಸರಿ ನೀ

ನವ ನಾಳೆಗಳ ಸ್ವಾಗತಿಸುವೆವು ನಾವು

ಮರೆತು ವರುಷದುದ್ದಕೂ ಆದ ನೋವು.


ದೂಷಿಸಲೂ ಆಗುತಿಲ್ಲ ನಿನ್ನ ನಾವು

ಎಲ್ಲೋ ದೂರದಲ್ಲಿದ್ದವರ ಒಗ್ಗೂಡಿಸಿದೆ

ಮೆರೆದು ಓಡಾಡಿದವರ ಬಗ್ಗು ಬಡಿದೆ

ಸಮಯವೇ ಇಲ್ಲವೆಂದವರಿಗೆ ಸಮಯವ ನೀಡಿದೆ.


ಊರ ಮರೆತು ಹೋದವರಿಗೆ ತನ್ನೂರನ್ನೆ ವರವಾಗಿಸಿದೆ

ಯಾರೂ ಯಾವುದೂ ನಿನ್ನದಲ್ಲ ನೀ ಒಂಟಿ ಎಂದು ಸಾರಿದೆ

ಜೀವನಕ್ಕಿಂತ ಜೀವ ಮುಖ್ಯವೆಂದರುಹಿ ಹೇಳಿದೆ

ಆದರೂ ಆರಕ್ಕೇರದ ಮೂರಕ್ಕಿಳಿಯದ ಬದುಕ ನೀಡಿದೆ


ಮರೆಯದೇ ನೀ ಕಲಿಸಿದ ಪಾಠವ ಹೆಜ್ಜೆ ಇಡುವೆವು

ಹೊಸತೊಂದು ವರುಷಕೆ ಹರುಷದಲಿ ಶುಭವನರಸುವೆವು

ನಿನ್ನೊಂದಿಗಾದ ತಪ್ಪುಗಳ ತಿದ್ದಿ ಸರಿಪಡಿಸಿ ನಡೆಯುವೆವು

ಉದಯವಾಗಿಸಿ ಹೊಸ ಹೊಂಗಿರಣಗಳ gಬೆಳಕ ಹರಿಸುವವು


ಹೊಸ ವರ್ಷದ ಶುಭಾಶಯಗಳೊಂದಿಗೆ 

ಅನಕುಮಾರ್, ನಿಗಮಾಂತ್ ಬಾಗೀವಾಳ್, ರುದ್ವೇದ ಬಾಗೀವಾಳ್

 

ರಚನೆ : ಕುಮಾರ್ ಬಿ ಬಾಗೀವಾಳ್.




Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES