ಹನಿಗವನಗಳು
ನೇಸರ ನಾಳೆ ನೀನೇ ಬರಬೇಕು ನೇಸರ ಸ್ವಾಗತಕೆ, ದಿವ್ಯತೆಗೆ ಮರಳಿ ಇರಳಲಿ ಕಳೆದ ಭವ್ಯತೆಯ ತೆರೆದಿಡಲು. ಭೂಮಿ ಹೊದ್ದ ಹಸಿರ ತೋರಲು ಹಕ್ಕಿ ಕೊರೊಳಲು ಗಾನ ಉಕ್ಕಲು _ಕುಮಾರ್ ಬಿ ಬಾಗೀವಾಳ್. ಜೂಟಾಟ. ದಿನವೂ ನಡೆದಿದೆ ಸೂರ್ಯ ಚಂದ್ರರ ಜೂಟಾಟ ಹಾಗಾಗಿಯೇ ಬೆಳಗು ಕತ್ತಲೆಯ ನೆರಳಾಟ. - ಕುಮಾರ್ ಬಿ ಬಾಗೀವಾಳ್ ಹೊಡೆದವರಾರು ಚಂದಿರನ ಚೆಲ್ಲಿದೆ ಬೆಳಕು ಅಂಗಳ ತುಂಬ ಹಾಲಾಗಿ, ಕರೆದವರ್ಯಾರೋ ಹಾಲನು ಇಲ್ಲಿ ಕೇಳಿದ ಪುಟ್ಟ ಪ್ರಶ್ನೆಯ ಸಾಲಾಗಿ. ಪೂರ್ಣ ಚಂದಿರನ ಬೀಳಿಸಿ ಹೊಡೆದವರ್ಯಾರೋ ಹೋಳಾಗಿ. _ ಕುಮಾರ್ ಬಿ ಬಾಗೀವಾಳ್ ಜಾರಿದ ಸೂರ್ಯ. ಗಿರಿ ತುದಿಯಲಿ ಮೂಡಿದ ಸೂರ್ಯ ಹಾರಿದ ಬಾನಿಗೆ ಪಟವಾಗಿ ಸೂತ್ರವ ಎಳೆದ ಮರುಕ್ಷಣವೇ ಮುಳುಗಿದ ಕಡಲಲಿ ಸ್ಪುಟವಾಗಿ. _ ಕುಮಾರ್ ಬಿ ಬಾಗೀವಾಳ್. ಬಾರೋ ಚಂದಿರ ಬಾರೋ ಚಂದಿರ ಬಾರೋ ಚಂದಿರ ತೋರೋ ಸುಂದರ ಮೊಗವನು ಈಗಲೆ, ಕಾರೋ ಬಿಸಿಲಲಿ ಸೊರಗಿರೋ ಮೋರೆಗೆ ತಂಪನು ತಾರೋ ಸಲುವಾಗಿ.