ಮಾತಿಗೆ ಬರವಿರುವ ಜಾಗದಲಿ ಮೌನಕೇನು ಕೆಲಸ ?
ಮಾತಿಗೆ ಬರವಿರುವ ಜಾಗದಲಿ ಮೌನಕೇನು ಕೆಲಸ ? ಮಾತಿಗೆ ಬರವಿರದ ಜಾಗದಲ್ಲಿ ಮೌನಕೇನು ಕೆಲಸ ? ನೀ ದೂರವಿರು ಸಾಕಾಗಿದೆ ಮುಚ್ಚಿಟ್ಟು ಸುಟ್ಟ ಭಾವನೆಗಳ! ಕಟ್ಟೆ ಹೊಡೆದಾವು ಬೆಟ್ಟದಷ್ಟಿರೋ ಕಾಡೋ ಕನಸುಗಳು ಬಿಟ್ಟುಬಿಡು ನನ್ನನೊಮ್ಮೆ ಬಯಲಿಗೆ ತಿರುಗುವೆ ಮನಸೋಯಿಚ್ಛೆ. ಬಿಡದಿರೆ ಸಿಟ್ಟಿಗೆದ್ದಾವು ಧಿಕ್ಕರಿಸಿ ನಿನ್ನ ಈ ಕ್ಷಣ ಹೊತ್ತಿನಲೆ. ಮಾತಿಗೆ ಬರವಿರದ ಜಾಗದಲಿ ಮೌನಕೇನು ಕೆಲಸ ? ಭೋರ್ಗರೆಯುವ ಅಬ್ಧಿ ಸ್ಥಭ್ದವಾದರೆ ತರವೆ! ಮಾರ್ದನಿಸುವ ಪಿಸುಗೋಪುರ ತುಸು ನಿಂತರೆ ಸರಿಯೇ? ಮಳೆನಿಂತರೂ ಮೌನಮುರಿವ ಮರದನಿಗಳು ದನಿಸದಿದ್ದರೆ ಹೇಗೆ? ಎಂತಾದರೂ ಸರಿಯೇ ಮುಂದಾಡುವ ಮನಧನಿಯೇ ನುಡಿವೆ. ಮಾತಿಗೆ ಬರವಿರದ ಜಾಗದಲಿ ಮೌನಕೇನು ಕೆಲಸ ? ಕರಿನೆರಳಿನಾಚೆಗೋಂಗಿರಣ ಬಯಸುವುದು ತಪ್ಪೇ! ಬರಿದಾದ ಮನದಂಗಳದಿ ರಂಗೋಲಿಯಾಕುವಾಸೆ ಉರಿವ ನೇಸರನೊಮ್ಮೆ ಹೊರಸರಿಸಿ ಬೆಳದಿಂಗಳಾಗುವೆ ತಂಪನೆರೆವೆ ಉಸಿರಬಿಗಿಹಿಡಿದೆದೆಗೆ ಒಮ್ಮೆಲೆ ಎಲ್ಲವನು ಹೇಳಿ. ಮಾತಿಗೆ ಬರವಿರದ ಜಾಗದಲಿ ಮೌನಕೇನು ಕೆಲಸ ? ದಾರಿಯುದ್ದಕೂ ಬರಿ ಕುರುಚಲು,ಮುರುಕಲು ಸವೆದ ಹಾದಿ ಭಾರಿ ಭಾರವನೊತ್ತ ಮನದ ಮೆರವಣಿಗೆ ಬರಹೊರಟರೆ ಹೇಗೆ ಗುರಿ ಮುಟ್ಟಲು ಒಮ್ಮೆ ಹಾರೇಬಿಡುವೆ ಗಾಳಿ ಬೀಸುವ ದಿಕ್ಕಿಗೊಮ್ಮೆ. ಬರಿಯ ಬಡಬಡಿಸುವ ಎದೆಯೊತ್ತು ನಡೆದ ದೇಹಕೀಗ ಭಾರವನಿಳಿಸುವೆ. ರಚನೆ : ಕುಮಾರ್ ಬಿ ಬಾಗೀವಾಳ್.