ಹಿಡಿ ಬೆರಳ ತುದಿ... ರಚನೆ : ಕುಮಾರ್ ಬಿ ಬಿ.

ಹಿಡಿ ಬೆರಳತುದಿ ತಹಬದಿಗೆ ಬರಬಹುದು...
-----------------------------------------------------------------------

ನಾ ಹಿಡಿವ ಮುನ್ನ ನೀ ಹಿಡಿದರೆ ನನ್ನ
ಬೆರಳ ತುದಿಯ ಬರಬಹುದು ತಹಬದಿಗೆ
ಹೊಯ್ದಾಟದಾಟದೆಜ್ಜೆಯ ತಂತಿ ನಡಿಗೆ
ಬರಬಹುದು ತೋಯ್ದಾಟದ ಗೇಹ ಮೋಹಾದಾಚೆಗೆ.

ಸಡಿಲಿಸದಿದ್ದರೆ ಹಿಡಿದ ಬೆರಳ ನೀನು
ಮಡಿವವರೆಗೂ ಕೂಡಿರುವೆ ಏನಾದರೇನು
ತುಡಿತ ಮಿಡಿತ ಹೃದಯ ಬಡಿತ ಮುಡಿಪೆನು
ಗುಡಿಗೋಪುರದ ಕಳಸಪ್ರಾಯವೇ ಆಗುವೆ ನಾನು.

ಮಾರು ದೂರವಲ್ಲ ಪಯಣವಿದು ಅಗಣಿತ
ಸಾರುವೆನು ಕೂಗಿ ಸೇರು ನನ್ನೊಡನೆ ನಿಯಮಿತ
ಸುಮೇರುವಿನ ಮೇರೆ ಮೀರುವ ತವಕವಿದೇ ಹಿತ
ಕುರುಹಾಗಲಿ ಇತಿಹಾಸದಲಿ ಕಾಲವಿದು ಸನ್ನಿಹಿತ.

ಹದವಿರುವ ಪದಗಳ ವಿನಿಮಯದ ವೇದಿಕೆಗೆ
ಕದ ಬೇಡ ದಾಟುವ ಆಚೆ ಅಲ್ಲಿಂದ ಭಾನಾಚೆಗೆ
ಬದುವಿರದ ಬಯಲಾಗುವ ಬಯಕೆ ಇತ್ತೀಚೆಗೆ
ಮಧುವಿರುವ ಹೂವಾಗುವಾಸೆ ಒಂದರಗಳಿಗೆ.

ನಾ ಹಿಡಿವ ಮುನ್ನ ನೀ ಹಿಡಿದರೆ ನನ್ನ
ಬೆರಳ ತುದಿಯ ಬರಬಹುದು ತಹಬದಿಗೆ
ಕುದಿ ಮನ ಸಮ್ಮತಿಸಿ ಸುಮ್ಮನಿರಬಹುದು 
ಸುದಿನ ಬರಮಾಡಿಕೊಳ್ಳಬಯಸಿ ನಿಲಬಹುದು.

ರಚನೆ : ಕುಮಾರ್ ಬಿ ಬಾಗೀವಾಳ್


Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES