ರಾಷ್ಟ್ರೀಯ ಗಣಿತ ದಿನ
ರಾಷ್ಟ್ರೀಯ ಗಣಿತ ದಿನ
ಡಿಸೆಂಬರ್22, 1887, ಭಾರತದ ಮಟ್ಟಿಗೆ ಅವಿಸ್ಮರಣೀಯ ದಿನ
ಅಂದು ವಿಶ್ವ ಕಂಡ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮ ದಿನ. ರಾಮಾನುಜನ್ ಅವರು ಹುಟ್ಟಿದ 125 ನೇ ಜನ್ಮದಿನದ ನೆನಪಿಗಾಗಿ ಡಿಸೆಂಬರ್ 22,ನ್ನು ರಾಷ್ಟ್ರೀಯ ಗಣಿತ ದಿನವೆಂದು 2012 ರಲ್ಲಿ ಅಂದಿನ ಭಾರತದ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ಅವರು ಘೋಷಿಸಿದರು. ಮತ್ತು ಅದೇ ವರ್ಷ 2012 ನ್ನು ರಾಷ್ಟ್ರೀಯ ಗಣಿತ ವರ್ಷ ಎಂದು ಘೋಷಿಸಿದರು.
ಅದೇ ವರ್ಷ ರಾಮಾನುಜನ್ ಅವರ ನೆನಪಿಗೆ ಅಂಚೆ ಚೀಟಿಯನ್ನೂ ಹೊರತರಲಾಯಿತು.ಅಂತೆಯೇ 2017ರಲ್ಲಿ ಆಂದ್ರಪ್ರದೇಶದ, ಚಿತ್ತೂರು ಜಿಲ್ಲೆಯ ಕುಪ್ಪಂ ನಲ್ಲಿ ರಾಮಾನುಜನ್ ಗಣಿತ ಪಾರ್ಕ್ ನಿರ್ಮಾಣ ಮಾಡಲಾಗಿದೆ.
Comments
Post a Comment