ದಮ್ಮವದು ನಿಲುಕದು a poem by Kumar B Bagival

 

ದಮ್ಮವದು ಬೊಮ್ನನ ಮೀರಿದುದು

 ನೆಮ್ಮದಿಗದು ಕಮ್ಮಿಯಿಲ್ಲದುದು 

ಆಸೆಗಾಸೆಯು ಬೊಗಸೆ ತುಂಬುವ ತವಕವದು

ನಿನ್ನ ದುಃಖದ ಮಡಿಲು, ಬಿಡಿಗಾಸಿನ ಸುಖವಲ್ಲ ಬದುಕು.


ನುಡಿಯೆಲ್ಲವು ನಡೆಯಾಗಿ ಮುಡುಪಿಲ್ಲದ ಬದುಕದು

ತಡಿಯಿಲ್ಲದ ದೋಣಿ ಪಯಣದ ಅಂಬಿಗನ ಬದುಕು

ಪಡಿಯಂಚು ಹೊಟ್ಟೆ ಹಸಿದವರ ಪಾಲದು ನಿನದಲ್ಲವದು

ಹಿಡಿ ಋಜುಮಾರ್ಗವನೆ ನಡೆ ಗುರಿಯಂಚಿಗೆ ನಿಜ ಪಥ ಜೀವನಕದು.


ಬಯಸಿದ್ದೆಲ್ಲಾ ಬದುಕಲ್ಲ, ಬದುಕ ಬಯಲು ನಿಲುಕದು

ಬಯಕೆಗೆ ,ಕಷ್ಟ ಸುಖದ ದುಃಖ ದುಮ್ಮಾನವೊಂದು ಭಾಗ

ಸುಖದ ಅನಾವರಣವು ವ್ಯಾಮೋಹದ ಪರದೆ ತೆರೆದಾಗ

ಪರಿಧಿಯಲ್ಲಿಯೇ ಇರಲಿ ನಿನ್ನ ಸುಖದ ಯಾತ್ರೆಯು.


ಶವದ ಮುಂದದೋ, ಹಿಂದದೋ ಎರಡೊಂದೇ ನಡೆಯು

ಮೆರವಣಿಗೆಯಲಿ ಮುನ್ನಡೆಯ ಪರಿಗಣನೆ ಮಾತ್ರವದು ಜಗಕೆ

ದೇಹ ತೇರನೇರುವ ಥರದರ್ಥದಲಿ‌ ನಿರ್ಧರಿಪು ನಿನ್ನಾ ನಿಜ

ಸಹಜದಲಷ್ಟೇ ಸಾಗಿದರೆ ರಜವ ನೀಗಿ ತೇಜ ರಾರಾಜಿಸುವುದು.


ರಚನೆ : ಕುಮಾರ್. ಬಿ. ಬಾಗೀವಾಳ್.



Comments

  1. ಉತ್ತಮವಾದ ಕವನ.ಉಪಮೆಗಳು ರೂಪಕವಾಗಿ ಉತ್ಪ್ರೇಕ್ಷೆ ಹೊಂದಿದೆ.ಅಭಿನಂದನೆಗಳು

    ReplyDelete

Post a Comment

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES