ಸಮಾಂತರ ಶ್ರೇಢಿಗಳು Arithmetic Progression
ಸಮಾಂತರ ಶ್ರೇಢಿಗಳು
ಒಂದು ಶ್ರೇಢಿಯ ಅನುಕ್ರಮ ಪದಗಳ ನಡುವಿನ ವ್ಯತ್ಯಾಸ ಒಂದೇ ಆಗಿದ್ದರೆ ಆ ಶ್ರೇಢಿಯನ್ನು ಸಮಾಂತರ ಶ್ರೇಢಿ ಎನ್ನುತ್ತಾರೆ.
ಉದಾ : 2,4,6,8,10....
ಇಲ್ಲಿ 2&4 ರ ವ್ಯತ್ಯಾಸ 2
6&4 ರ ವ್ಯತ್ಯಾಸ 2
8&6 ರ ವ್ಯತ್ಯಾಸ 2 ಹೀಗೆ ವ್ಯತ್ಯಾಸ ಸಮವಾಗಿರುತ್ತದೆ ಆದ್ದರಿಂದ ಈ ವ್ಯತ್ಯಾಸವನ್ನು ಸಾಮಾನ್ಯ ವ್ಯತ್ಯಾಸ ಎನ್ನುತ್ತೇವೆ.
ಸಮಾಂತರ ಶ್ರೇಢಿ 2, 4,6,8,10.... ಇಲ್ಲಿ
2 ಮೊದಲಪದವಾಗಿದ್ದು ಸಾಮಾನ್ಯ ವ್ಯತ್ಯಾಸ 2 ಆಗಿದೆ.
ಸಮಾಂತರ ಶ್ರೇಢಿಯ ಸಾಮಾನ್ಯ ಪದವನ್ನು ಕಂಡುಹಿಡಿಯುವ ಸೂತ್ರ an= a+(n-1)d
ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ d = an+1 - an
ಸಮಾಂತರ ಶ್ರೇಢಿಯ nನೇ ಪದಗಳವರೆಗಿನ ಮೊತ್ತ ಕಂಡುಹಿಡಿಯುವ ಸೂತ್ರ
Sn=n/2[2a+(n-1)d
or
Sn =n/2[a+an]
ಸಮಾಂತರ ಶ್ರೇಢಿಯ ಸಾಮಾನ್ಯ ರೂಪ
a, a+d, a+2d, a+3d,.....a+(n-1)d.
ಸರಳ ಸಮಸ್ಯೆಗಳು :
1) 2,5,8,11....ಈ ಸಮಾಂತರ ಶ್ರೇಢಿಯ 12 ನೇ ಪದ ಕಂಡುಹಿಡಿಯಿರಿ.
ಪರಿಹಾರ : ಶ್ರೇಢಿ 2,5,8,11... ಇಲ್ಲಿ
a = 2 d=3 n= 12
an = a+(n-1)d
= 2+(12-1)3
=2+(11×3)
= 2+ 33
a12 = 35
2) 3, 5, 7, 9 .... 29 ಈ ಸಮಾಂತರ ಶ್ರೇಢಿಯಲ್ಲಿನ ಪದಗಳ ಸಂಖ್ಯೆ ಕಂಡುಹಿಡಿಯಿರಿ.
ಪರಿಹಾರ : ಶ್ರೇಢಿ 3, 5, 7, 9....29. ಇಲ್ಲಿ
a= 3, d= 2, an= 29, n= ?
an= a+ (n-1)d
29 = 3+(n-1)2
29 = 3+ 2n - 2
29 = 2n+1
2n +1 = 29
2n = 29 - 1
2n = 28
n = 28÷ 2
n = 14
3) 5,9,13,17...ಈ ಸಮಾಂತರ ಶ್ರೇಢಿಯ ಮೊದಲ 20 ಪದಗಳ ಮೊತ್ತ ಕಂಡುಹಿಡಿಯಿರಿ.
ಪರಿಹಾರ : 5 , 9 ,13 , 17.... ಇಲ್ಲಿ
a= 5, d= 4, n = 20. Sn = ?
Sn = n/2 [ 2a + (n-1)d]
S21 = 20/2 [ 2×5 +( 20 - 1) 4]
= 10[ 10+ (19×4)]
= 10[ 10 + 76]
= 10 × 86
S21 = 860
Comments
Post a Comment