ಎಐ ಕಳ್ಳತನ ಕಲಿಸೀತೇ ಬುದ್ಧಿ!

 ಸ್ನೇಹಿತರೇ ಬಿತ್ತೇಬಿಡ್ತು ನೋಡಿ AI ನ ಮಹಾ ಗುನ್ನ, "ಬೆಳೆಯುವುದನ್ನ ಎಳೆಯದರಲ್ಲೇ ನೋಡು" ಎಂಬ ಮಾತು ಅಪ್ಪಟ ಸತ್ಯ. ಎಐ ನ ಬಗೆಗಿನ ಕುತೂಹಲ ಜಗತ್ತಿನಾದ್ಯಂತ ಹರಡಿದೆ, ಎಲ್ಲೆ ಮೀರಿ ಮೆರೆಯುತ್ತಿರುವ ಎಐ ಪ್ರಭಾವ, ಅದರ ಸಂಭಾವ್ಯ ಒಳಿತು ಕೆಡಕುಗಳ ಬಗೆಗಿನ ಚರ್ಚೆ ನಡೆಯುತ್ತಿದೆ, ಹೀಗಿರುವಾಗಲೇ ಎಐ ಬಳಕೆ ಅದರ ಗಂಧಗಾಳಿ ಗೊತ್ತಿರದ ಜನರ ಕೈ ತಲುಪಿದ್ದು ಕಾಲ ಕಳೆವ ಜೊತೆಗೆ ಕಾಲೆಳೆವ ಸರಕಾಗಿ ಬೆಳೆಯುತ್ತಿದೆ. ಹೀಗಿರುವಾಗ ಒಳಿತರ ಮರೆಯಲ್ಲೆ ಕೆಡಕು ಮೇಲುಗೈ ಮೆರೆವ ದಿನಗಳು ದೂರವಿಲ್ಲ ಎಂಬ ಸತ್ಯವನ್ನೂ ಸರ್ವಾನು ಮತದಿಂದ ಒಪ್ಪಿಕೊಳ್ಳ ಬೇಕಾದ ದಿನಗಳು ದೂರವಿಲ್ಲ ಎಂಬುದು ಬಹುಜನರ ಅಂಬೋಣ.

ಅಂತೆಯೇ ಅವಘಡ ಆದಾಗಲೇ ಅದರ ಅಸಲಿಯತ್ತು ಗೊತ್ತಾಗೋದು, ಅಂದ ಹಾಗೆ ಇತ್ತೀಚೆಗೆ ಒಂದು ಪ್ರಕರಣ ಜಗದ ಗಮನ ಸೆಳೆಯುತ್ತಿದೆ, ಎಐ ವಂಚನೆಯಿಂದ ಇಟಲಿಯ ಪ್ರಮುಖ ಬ್ಯಾಂಕ್ ಒಂದು ಬಲಿಯಾಗಿದೆ. ಬರೋಬ್ವರಿ ₹ 1036 ಕೋಟಿ ಹಣವನ್ನು ವಂಚಕರು ದೋಚಿದ್ದಾರೆ. ಎಐ ಬಳಸಿ ನಕಲಿ ಸಂದೇಶ,ಹಾಗೂ ಕರೆಗಳನ್ಬು ಸೃಷ್ಟಿ ಮಾಡಿ ಬ್ಯಾಂಕ್ ಸಿಬ್ಬಂದಿಯನ್ನು ನಂಬಿಸಿ ಈ ಬೃಹತ್‌ ಮೊತ್ತವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಅಂದಹಾಗೆ ಹೀಗೆ ವಂಚನೆಗೊಳಪಟ್ಟ ಬ್ಯಾಂಕ್ ಇಟಲಿಯ ಪ್ರಮುಖ ಬ್ಯಾಂಕ್ ಇಂಟೆನಾ ಸಾನ್ಪಾವೊಲೋ ಗ್ರೂಪ್ ಬ್ಯಾಂಕ್. ಇದರ ಖಾಸಗಿ ವಿಭಾಗವಾದ ಫಿಡ್ಯುರಾಮ್ ಸಂಸ್ಥೆ ಯಿಂದ ವಂಚಕರು ದೋಚಿರುವ ಪ್ರಕರಣ ಎಐ ಬಗೆಗಿನ ಅನಾಹುತಗಳ ಕುರಿತು ಜಗತ್ತಿನಾದ್ಯಂತ ಅತ್ಯಂತ ತೀವ್ರ ಚರ್ಚೆಯಾಗುತ್ತಿದೆ.

ಏನೇ ಅಗಲಿ ಸ್ನೇಹಿತರೆ ಎಲ್ಕದಕ್ಕೂ ಒಂದು ಮಿತಿ ಇರುತ್ತದೆ ಹಾಗೆಯೇ ಎಐ ಎಂಬ ಹುಚ್ಚುಕುದುರೆಗೆ ಲಗಾಮು ಹಾಕದಿದ್ದರೆ ಮುಂದಿನ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗಬೇಕಾಗುತ್ತದೆ. ಅದಿರಲಿ ಸಾಮಾನ್ಯರ ಕೈ ಸೇರಿರುವ ಎಐ ಇಂದಿಗೆ ಅವರಿಗೆ ಖುಷಿಯನ್ನೇನೋ ನೀಡುತ್ತಿರಬಹುದು ಆದರೆ ಮುಂದೇನು... ? ಎಂಬ ಕಾಳಜಿ ಇರಲಿ ಎಚ್ಚರವಿರಲಿ ಎಂಬ ಆಶಯ ನನ್ನದು.

             - ಕುಮಾರ್ ಬಿ ಬಾಗೀವಾಳ್

Comments

Post a Comment

Popular posts from this blog

ಸಿನಿದಿನ

Poem: Yugada aadi , By : Kumar B Bagival ,