Posts

Showing posts with the label #dasaraelephants

2026 ರ ಅಂಬಾರಿ ಹೊರಬಹುದಾದ ಸಂಭಾವ್ಯ ಆನೆಗಳು

 2026ರ ಮೈಸೂರು ಜಂಬೂ ಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಬಲ್ಲ ಸಂಭಾವ್ಯ ಆನೆಗಳ ಆಯ್ಕೆ ಪ್ರಕ್ರಿಯೆ ಮತ್ತು ತಾಲಿಮು ಪ್ರಸ್ತುತ ಭರದಿಂದ ಸಾಗುತ್ತಿದೆ. ಕಳೆದ ಆರು ವರ್ಷಗಳಿಂದ ಅಂಬಾರಿ ಹೊರುತ್ತಿದ್ದ ಅಭಿಮನ್ಯು ಆನೆಗೆ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಸದರಿ ನಿಯಮಗಳ ಪ್ರಕಾರ ಈ ಭಾರಿ ಅದನ್ನ ಭಾರಿ ತೂಕ ಬರುವ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿದ್ದು ಅದರ ಸೇವೆಯನ್ನು ಗೌರವಿಸಿ ಈ ಸಾರಿ ಜಂಬೂಸವಾರಿಯಲ್ಲಿ ಕೇವಲ ನಿಶಾನೆ ಆನೆಯಾಗಿ ಅಥವಾ ಗೌರವದ ಮುಂದಾಳತ್ವದ ಆನೆಯಾಗಿ ಭಾಗವಹಿಸಲು ಸರ್ಕಾರ ವಿಶೇಷವಾಗಿ ಅನುಮತಿಯನ್ನು ನೀಡಿದೆ. ಹಾಗಾಗಿ ಚಿನ್ನದ ಅಂಬಾರಿಯನ್ನ ಹೊರುವ ಮುಂದಿನ ಕ್ಯಾಪ್ಟನ್ ಪಟ್ಟಕ್ಕಾಗಿ ಪ್ರಮುಖವಾಗಿ ಮೂರು ಆನೆಗಳು ತೂಕ ಹೊರುವ ತಾಲೀಮನ್ನು ನಡೆಸಿಕೊಳ್ಳುತ್ತಿವೆ.   ಮಹೇಂದ್ರ  : ವಯಸ್ಸು 42 ವರ್ಷ ಅಂಬಾರಿ ಹೊರ್ಲಿಕ್ಕೆ ಸೂಕ್ತವಾದಂತಹ ಪ್ರಸ್ತುತ ಅತ್ಯಂತ ಮುಂಚೂಣಿಯಲ್ಲಿರುವ ಸಂಭಾವಿ ಆನೆ ಇದು. ಈಗಾಗಲೇ ಶ್ರೀರಂಗಪಟ್ಟಣ ದಸರಾದಲ್ಲಿ ನಾಲ್ಕು ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತ ಅನುಭವ ಹೊಂದಿದೆ. ಮೈಸೂರಿನಲ್ಲಿಯೂ ಇತ್ತೀಚಿಗೆ ಮರದ ಅಂಬಾರಿ ಹಾಗೂ 500 ಕೆಜಿ ಇಂದ 1000 ಕೆಜಿ ವರೆಗಿನ ಭಾರವನ್ನು ಯಶಸ್ವಿಯಾಗಿ ಹೊತ್ತು ನಡೆಸಿಕೊಡುತ್ತದೆ.    ಧನಂಜಯ  : ವಯಸ್ಸು 45 ವರ್ಷ ಕಳೆದ ಕೆಲವು ವರ್ಷಗಳಿಂದ ಭಾಗವಹಿಸುತ್ತಿರುವ ಧನಂಜಯ ಅಂಬಾರಿ ಹೊರಬಲ್ಲ ಮತ್ತೊಂದು ಬಲಿಷ್ಠ ಮತ್ತ...