2026 ರ ಅಂಬಾರಿ ಹೊರಬಹುದಾದ ಸಂಭಾವ್ಯ ಆನೆಗಳು

 2026ರ ಮೈಸೂರು ಜಂಬೂ ಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಬಲ್ಲ ಸಂಭಾವ್ಯ ಆನೆಗಳ ಆಯ್ಕೆ ಪ್ರಕ್ರಿಯೆ ಮತ್ತು ತಾಲಿಮು ಪ್ರಸ್ತುತ ಭರದಿಂದ ಸಾಗುತ್ತಿದೆ. ಕಳೆದ ಆರು ವರ್ಷಗಳಿಂದ ಅಂಬಾರಿ ಹೊರುತ್ತಿದ್ದ ಅಭಿಮನ್ಯು ಆನೆಗೆ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಸದರಿ ನಿಯಮಗಳ ಪ್ರಕಾರ ಈ ಭಾರಿ ಅದನ್ನ ಭಾರಿ ತೂಕ ಬರುವ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿದ್ದು ಅದರ ಸೇವೆಯನ್ನು ಗೌರವಿಸಿ ಈ ಸಾರಿ ಜಂಬೂಸವಾರಿಯಲ್ಲಿ ಕೇವಲ ನಿಶಾನೆ ಆನೆಯಾಗಿ ಅಥವಾ ಗೌರವದ ಮುಂದಾಳತ್ವದ ಆನೆಯಾಗಿ ಭಾಗವಹಿಸಲು ಸರ್ಕಾರ ವಿಶೇಷವಾಗಿ ಅನುಮತಿಯನ್ನು ನೀಡಿದೆ. ಹಾಗಾಗಿ ಚಿನ್ನದ ಅಂಬಾರಿಯನ್ನ ಹೊರುವ ಮುಂದಿನ ಕ್ಯಾಪ್ಟನ್ ಪಟ್ಟಕ್ಕಾಗಿ ಪ್ರಮುಖವಾಗಿ ಮೂರು ಆನೆಗಳು ತೂಕ ಹೊರುವ ತಾಲೀಮನ್ನು ನಡೆಸಿಕೊಳ್ಳುತ್ತಿವೆ.

 ಮಹೇಂದ್ರ :

ವಯಸ್ಸು 42 ವರ್ಷ ಅಂಬಾರಿ ಹೊರ್ಲಿಕ್ಕೆ ಸೂಕ್ತವಾದಂತಹ ಪ್ರಸ್ತುತ ಅತ್ಯಂತ ಮುಂಚೂಣಿಯಲ್ಲಿರುವ ಸಂಭಾವಿ ಆನೆ ಇದು. ಈಗಾಗಲೇ ಶ್ರೀರಂಗಪಟ್ಟಣ ದಸರಾದಲ್ಲಿ ನಾಲ್ಕು ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತ ಅನುಭವ ಹೊಂದಿದೆ. ಮೈಸೂರಿನಲ್ಲಿಯೂ ಇತ್ತೀಚಿಗೆ ಮರದ ಅಂಬಾರಿ ಹಾಗೂ 500 ಕೆಜಿ ಇಂದ 1000 ಕೆಜಿ ವರೆಗಿನ ಭಾರವನ್ನು ಯಶಸ್ವಿಯಾಗಿ ಹೊತ್ತು ನಡೆಸಿಕೊಡುತ್ತದೆ. 

 ಧನಂಜಯ :

ವಯಸ್ಸು 45 ವರ್ಷ ಕಳೆದ ಕೆಲವು ವರ್ಷಗಳಿಂದ ಭಾಗವಹಿಸುತ್ತಿರುವ ಧನಂಜಯ ಅಂಬಾರಿ ಹೊರಬಲ್ಲ ಮತ್ತೊಂದು ಬಲಿಷ್ಠ ಮತ್ತು ಸಮರ್ಥ ಆನೆ. ಕಠಿಣ ತಾಲೀಮು ನಡೆಸುತ್ತಿರುವ ಈ ಆನೆ ಭವಿಷ್ಯದ ದೃಷ್ಟಿಯಿಂದ ಕೂಡ ಕ್ಯಾಪ್ಟನ್ .

 ಅನುಭವಿ ಪ್ರಶಾಂತ : 

 54 ವರ್ಷ ಗಂಭೀರ ಹಾಗೂ ಶಾಂತ ಸ್ವಭಾವದ ಈ ಆನೆ ಕೂಡ ಚಿನ್ನದ ಅಂಬಾರಿಯನ್ನು ಹೊರವ ಸಾಮರ್ಥ್ಯ ಇರುವಂತಹ ಆನೆ. ಅಂಬಾರಿಯ ತೂಕಕ್ಕೆ ಸಮನಾದ ಭಾರವನ್ನು ಹೊರಿಸಿ ತರಬೇತಿ ನೀಡಲಾಗುತ್ತದೆ.

 ಹಾಗಾಗಿ ತಾಲೀಮಿನನ ಕೊನೆಯ ದಿನಗಳಲ್ಲಿ ಈ ಮೂರು ಅನೆಗಳ ನಡುವೆ ಜನರ ಶಬ್ದ ಮತ್ತು ವಾಹನಗಳ ಶಬ್ಧಕ್ಕೆ ಅವು ಸ್ಪಂದಿಸುವಂತಹ ರೀತಿ ಹಾಗೂ ಅವುಗಳ ದೈಹಿಕ ಫಿಟ್ನೆಸ್ ನನ್ನ ಆಧರಿಸಿ ಅರಣ್ಯ ಇಲಾಖೆಯ ತಜ್ಞ ವೈದ್ಯರ ಸಮಿತಿ ಯಾರಿಗೆ ಅಂಬಾರಿ ಹೊರುವ ಜವಾಬ್ದಾರಿ ಆ ಆನೆಯನ್ನು ಅಧಿಕೃತವಾಗಿ ಘೋಷಿಸಿ ಕ್ಯಾಪ್ಟನ್ ಆಗಿ ಆರಿಸಲಾಗುತ್ತದೆ.

                               - ಕುಮಾರ್ ಬಿ ಬಾಗೀವಾಳ್

Comments

Popular posts from this blog

Poem: Yugada aadi , By : Kumar B Bagival ,

ಸಿನಿದಿನ