ಕವಿಶೈಲಕ್ಕೊಂದು ಪ್ರವಾಸ , A journey towards Kavishaila , A travel guide by Kumar B Bagival
ಕವಿಶೈಲಕ್ಕೊಂದು ಪ್ರವಾಸ ಯೋಜನೆ. ಕನ್ನಡ ನಾಡಲ್ಲಿ ಸುತ್ತಾಡಿದವನು ಹಲವು ದೇಶಗಳನ್ನು ಸುತ್ತಿದ್ದಕ್ಕೆ ಸಮ ಹಾಗಾಗೆಯೇ ಹೇಳೋದು… ಕರ್ನಾಟಕ " ಒಂದು ರಾಜ್ಯ, ಹಲವು ಪ್ರಪಂಚ " ಅನ್ನೋದು. ಸಮೃಧ್ದವಾದ ನಾಡು ಭೂಮಿಮೇಲೆ ಇದ್ದಿದ್ದೇ ಆದರೆ ಅದು ಕನ್ನಡ ನಾಡು ಮಾತ್ರ ಅನ್ನೋದು ಇಲ್ಲಿರುವವರು ಮಾತ್ರ ಹೇಳೋ ಮಾತಲ್ಲ ಪ್ರಪಂಚದ ಮೂಲೆ ಮೂಲೆಗಳಿಂದ ಬಂದು ಕನ್ನಡ ನೆಲದ ಮೇಲೆ ಸುತ್ತಾಡಿದ ಪ್ರತೀ ಪ್ರವಾಸಿಗನೂ ಹೇಳೋ ಮಾತು. ಅದರಲ್ಲೂ ಪಶ್ಚಿಮ ಘಟ್ಟದ ಮೇಲೊಂದು ಮೆಲು ಪ್ರವಾಸ ಕೈಗೊಳ್ಳದಿದ್ದರೆ ಅಲ್ಲಿನ ಪ್ರವಾಸ ತಾಣ, ಪ್ರಕೃತಿ ಸೊಬಗನ್ನ ಸವಿಯದಿದ್ದರೆ ಇಲ್ಲಿನ ಕಾವ್ಯ ,ಕವಿಯ ಬಗ್ಗೆ ಅವರ ಹಿಂದಿರುವ ನೈಸರ್ಗಿಕ ಸೊಬಗಿನ ಶಕ್ತಿಯನ್ನು ಅರಿಯಲು ಸಾದ್ಯವೇ ಇಲ್ಲ. ರಸ ಋಷಿಗಳ ತಾಣ ನಿಜವಾಗಿಯೂ ಸೆಳೆಯದಿರದು ಕಣ್ಮನ. ಅಂದ ಹಾಗೆ "ಪ್ರವಾಸಾನುಭವ" ದಲ್ಲಿ ನಿಮ್ಮನ್ನ ನೇರ ಕವಿಮನೆ ಕವಿಶೈಲಕ್ಕೆ ಕರೆದ್ಕೊಂಡು ಹೋಗ್ತೀನಿ ಬನ್ನಿ… ಚಿತ್ರ: ಕವಿಮನೆ ಕೃಪೆ: ಇಂಟರ್ನೆಟ್ ಕವಿಮನೆ ಇರೋದು ಕರ್ನಾಟಕದ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಸುಂದರ ವನಸಿರಿಯ ಮಧ್ಯೆ. ಕರ್ನಾಟಕದ ಸಾಹಿತ್ಯ ಶ್ರೀಮಂತಗೊಳಿಸಿದ , ಕವಿ ಎಂದರೆ ತಟ್ ಅಂತ ನೆನಪಾಗೋದು ಒಬ್ಬರೇ ಅದು… ಹಾ… ಹೌದು ಕುವೆಂಪು… ಅರ್ಥಾತ್ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರ ಹುಟ್ಟೂರು ಕುಪ್ಪಳಿಯಲ್ಲಿ. ಕವಿಶೈಲ ಕರ್ನಾಟಕದ ಪ್ರವ...