ನಭೋ ವಿಸ್ಮಯ… ಗುರು- ಶನಿಯರ ಸಂಯೋಗ
ನಭೋ ವಿಸ್ಮಯ…
ಗುರು- ಶನಿಯರ ಸಂಯೋಗ
ನಭೋ ವೈಚಿತ್ರ್ಯಗಳು ಅನೇಕ. ಅಷ್ಟಕ್ಕೂ ಅದು ಕುತೂಹಲದ ಕುಡಿಕೆ, ನಾವು ಚಿಕ್ಕವರಿದ್ದಾಗಿನ ಒಗಟಂತೆ ಅವ್ವನ ಸೀರೆ,ಅಪ್ಪನ ದುಡ್ಡು. ನೋಡಿದಷ್ಟೂ ನೋಡಿಸಿಕೊಳ್ಳುವ, ಕಣ್ಣಾಡಿಸಿದಷ್ಟೂ ಖುಷಿಕೊಡುವ ಮಾಯಾಲೋಕ. ಮೇಲ್ನೋಟಕ್ಕೆ ಬರೀ ಕತ್ತಲೆಯ ಹಾಸಿನ ಮೇಲಿನ ಚಿತ್ತಾರದ ಚುಕ್ಕಿಗಳಂತೆ ಕಂಡರೂ…. ಹಾಗೇ…. ಕಣ್ತೆರೆದು ಶುಭ್ರಾಗಸಕ್ಕೆ ಎದೆಯೊಡ್ಡಿ ನೋಡುತ್ತಾ ಮಲಗಿದರೆ ಮೊಗೆದಷ್ಟೂ ಕುತೂಹಲ ತಣಿಸುವ ಅನೇಕ ಕಥಾಹಂದರವೇ ತೆರೆದುಕೊಳ್ಳುತ್ತದೆ. ಕಲ್ಪಿಸಿಕೊಂಡಷ್ಟೂ ಕಲ್ಪನಾ ಲಹರಿ ಬಿಚ್ಚಿಡುತ್ತದೆ. ನೋಡಬೇಕಷ್ಟೆ, ನೋಡುತ್ತಾ ಅನುಭವಿಸಬೇಕಷ್ಟೇ. ಟಅಂತಹಾ ಅನೇಕ ಅಧ್ಬುತಗಳಲ್ಲಿ ವಿಸ್ಮಯಗಳಲ್ಲಿ , ಖಗೋಳ ಘಟನೆಗಳಲ್ಲಿ ಒಂದು ಬಲಾಢ್ಯ ಅನಿಲ ಧೈತ್ಯಗ್ರಹಗಳಾದ ಗುರು,ಶನಿಗಳ ಸಂಗಮ. ನಭದಲ್ಲಿ ನಡೆವ ಪ್ರತೀ ವಿದ್ಯಮಾನಗಳೂ ಸೌರಮಂಡಲದ ಸದಸ್ಯರಾದ ನಮಗೂ ಸಂಬದಿಸಿದ್ದೇ ಆಗಿರುವುದರಲ್ಲಿ ಸಂಶಯವಿಲ್ಲ. ಹಾಗಾಗಿಯೇ ಖಗೋಳ ವಿಜ್ಞಾನಿಗಳು ಹಾಗೂ ಅಘೋಷಿತ ವಿಜ್ಞಾನಿಗಳಾದ ಜ್ಯೋತಿಷಿಗಳ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಖಗೋಳ ವಿದ್ಯಮಾನಗಳಲ್ಲಿ ಒಂದಾದ ಗುರು,ಶನಿಯರ ಸಂಗಮ ನಾಳೆ ಅಂದರೆ 21/12/2020 ರ ಸಂಜೆಯ ವೇಳೆಗೆ ನೋಡಬಹುದಾಗಿದೆ. ಅವೆರಡರ ಕೋನೀಯ ಅಂತರ ಅತ್ಯಂತ ಕಡಿಮೆ ಅಂದರೆ 0.1ಡಿಗ್ರಿಗಳಷ್ಟಾಗಲಿದೆ ಅ ಅವೆರಡೂ ಅತ್ಯಂತ ಸಮೀಪದ ಸಂಗಮಕೊಳಪಡಲಿವೆ. ಬಹುತೇಕ ಇಷ್ಟೇ ಸಮೀಪದ ಸಂಗಮವನ್ನು ನೋಡಬೇಕಿದ್ದರೆ 2080ನೇ ಇಸವಿ ಮಾರ್ಚ್ 15 ರ ವರೆಗೆ ಕಾಯಬೇಕಿದೆ. ಹಾಗಾಗಿ ನಾಳೆ ನಭೋಮಂಡಲದ ಈ ವಿದ್ಯಮಾನವನ್ನ ಕಂಣ್ತುಂಬಿಕೊಳ್ಳೋಣ. ಇದರ ಪ್ರಾಸಂಗಿಕ ಚಿತ್ರ ಹೀಗಿದೆ.
ಕೃಪೆ : ಇಂಟರ್ನೆಟ್.
ಖಗೋಳಶಾಸ್ತ್ರದಲ್ಲಿ ಖಗೋಳದ ಎರಡು ಗ್ರಹಗಳು ಅಥವಾ ಎರಡು ಆಕಾಶ ಕಾಯಗಳು ಸಂಧಿಸುವ ಪ್ರಕ್ರಿಯೆಗೆ ಸಂಯೋಗ ಎನ್ನುತ್ತಾರೆ. ಅದೇ ಖಗೋಳದಲ್ಲಿ ಸೌರಮಂಡಲದ ಎರಡು ಬೃಹತ್ ಗ್ರಹಗಳು ಸಂಧಿಸುವ ಪ್ರಕ್ರಿಯೆಗೆ ಮಹಾಸಂಯೋಗ ಎನ್ನುತ್ತಾರೆ. ಈ ಮಹಾಸಂಯೋಗ ಡಿಸೆಂಬರ್21 , 2020 ರ ಸಂಜೆ ಸಂಭವಿಸಿಲಿದೆ. ಈ ಎರಡು ಗ್ರಹಗಳ ಸಂಯೋಗದಿಂದ ನಭದಲ್ಲಿ ಅವೆರಡು ಜೋಡಿಗ್ರಹಗಳಂತೆ ಕಾಣಸಿಗುತ್ತವೆ. ಇನ್ನೂ ಮುಂದೆ ಹೇಳುವುದಾದರೆ ಯುಗ್ಮತಾರೆಗಳಂತೆ ಕಾಣುತ್ತವೆ. ಹಾಗಾಗಿ ಅದನ್ನು ಕಣ್ತುಂಬಿಸಿ ಕೊಳ್ಳುವುದನ್ನ ವಂಚಿಸಿಕೊಳ್ಳಬೇಡಿ.
ಪ್ರತೀ ಇಪ್ಪತ್ತು ವರ್ಷಗಳಿಗೊಮ್ಮೆ ಸಂಭವಿಸುವ ಈ ವಿದ್ಯಮಾನ ಈ ಹಿಂದೆ 2000 ನೇ ಇಸವಿಯಲ್ಲಿ ಸಂಭವಿಸಿತ್ತು. ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಗುರು ಮತ್ತು ಶನಿಯರ ಇಷ್ಟು ಹತ್ತಿರದ ಸಂಯೋಗವು 1623 ರಲ್ಲಿ ಸಂಭವಿಸಿತ್ತೆಂಬುದು. ಇದಕ್ಕೂ ಹತ್ತಿರದ ಸಂಯೋಗ 1226ರಲ್ಲಿ ಸಂಭವಿಸಿತ್ತು ಎಂಬುದು.
ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನ ವ್ಯಾಸದಷ್ಟು ಅಂತರ ಪಡೆದುಕೊಳ್ಳುವ ಈ ಎರಡೂ ಗ್ರಹಗಳು ಚಂದ್ರನೊಂದಿಗೆ ಕಾಲ್ಪನಿಕ ತ್ರಿಕೋನವನ್ನುಂಟು ಮಾಡುವುದೂ ಡಿಸೆಂಬರ್21, 2020 ರ ವಿಶೇಷ.
ಸೂರ್ಯಾಸ್ತದ ನಂತರ ಪಶ್ಚಿಮ ದಿಗಂತದ ಕಡೆಗೆ ನೋಡಿದರೆ ಹೊಳೆವ ನಕ್ಷತ್ರಗಂತೆ ಕಂಗೊಳಿಸುವ ಈ ಗ್ರಹಗಳನ್ನು ಗಮನಿಸಬಹುದು.
ಈ ಸಂಯೋಗ ಇಪ್ಪತ್ತು ವರ್ಷಗಳ ಅಂತರದಲ್ಲೇ ಯಾಕೆ ಸಂಭವಿಸುತ್ತದೆ?
ಪ್ರತೀ ವರ್ಷದ ಅವಧಿಯಲ್ಲಿ ಶನಿ ಗ್ರಹವು ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ 12 ಡಿಗ್ರಿಗಳಷ್ಟು ಸ್ಥಾನ ಬದಲಿಸುತ್ತದೆ, ಹಾಗು ಗುರು ಗ್ರಹ 30 ಡಿಗ್ರಿಗಳಷ್ಟು ಸ್ಥಾನವನ್ನು ಬದಲಿಸುತ್ತದೆ. ಹಾಗಾಗಿ ಅವುಗಳ ಸ್ಥಾನಗಳ ವಾರ್ಷಿಕ ವ್ಯತ್ಯಾಸ 30-12=18 ಡಿಗ್ರಿಗಳಷ್ಟು. ಆದ್ದರಿಂದ ವೃತ್ತೀಯ ಕೋನ 360 ಡಿಗ್ರಿ ಕ್ರಮಣೆಗೆ ತೆಗೆದುಕೊಳ್ಳುವ ಸಮಯ 360÷18=20
ವರ್ಷಗಳು. ಹಾಗಾಗಿ ಗುರು-ಶನಿ ಸಂಯೋಗ 20 ವರ್ಷಗಳಿಗೊಮ್ಮೆ ಸಂಭವಿಸುತ್ತದೆ.
2000 ದಿಂದ 2100 ರ ನಡುವೆ ಸಂಭವಿಸುವ ಗುರು ಮತ್ತು ಶನಿಯರ ಸಂಯೋಗದ ಸಂಭವನೀಯ ದಿನಗಳು ಹೀಗಿವೆ
ಮೇ 28, 2000
ಡಿಸೆಂಬರ್ 21,2020
ಅಕ್ಟೋಬರ್ 31,2040
ಏಪ್ರಿಲ್ 7, 2060
ಮಾರ್ಚ್ 15, 2080
ಸೆಪ್ಟೆಂಬರ್ 17, 2100
ಎಷ್ಟು ಸಾಧ್ಯವೋ ಅಷ್ಟು ಖಗೋಳ ವಿದ್ಯಮಾನಗಳನ್ನು ನೋಡೋಣ.
ನೋಡುತ್ತಾ ಕಲಿಯೋಣ, ಕಲಿತು ಕುತೂಹಲ ತಣಿಸಿಕೊಳ್ಳೋಣ.
ಲೇಖಕರು: ಕುಮಾರ್. ಬಿ.ಬಾಗೀವಾಳ್.
ಶಿಕ್ಷಕರು,
ಸರ್ಕಾರಿ ಪ್ರೌಢಶಾಲೆ ಮೇಟಗಳ್ಳಿ
ಮೈಸೂರು
Astronomy related Science topic explained in kannada language in a simple way..... Very good effort.
ReplyDeletethank you sir
DeleteExplained in a simple way which makes everyone who doesn't have sci knowledge in astrophysics can understand the phenomenon happening in our galaxy...well done sir
ReplyDeletethank you madam
Deleteಬಾಹ್ಯಾಕಾಶ ಉತ್ಸಾಹಿಗಳಿಗೆ ತುಂಬ ಉಪಯುಕ್ತ ಮಾಹಿತಿ ! ಧನ್ಯವಾದಗಳು🙏
ReplyDelete