ಗುರುತಿಸ ಬಲ್ಲೆನಾ…. ನನ್ನೆಜ್ಜೆ ಗುರುತುಗಳ..Can I identify my footprints? poem by Kumar B Bagival
ಗುರುತಿಸ ಬಲ್ಲೆನಾ…. ನನ್ನೆಜ್ಜೆ ಗುರುತುಗಳ...
ಹೆಜ್ಜೆಗುರುತುಗಳು ಕಾಣದಾಗಿವೆ ಬಂದ ದಾರಿಯುದ್ದಕೂ
ಅಷ್ಟು ದೂರ ಪಯಣಿಸಿದೆನಾ ಅಥವಾ
ಪಯಣದ ದಾರಿಯನ್ನೇ ಮರೆತೆನಾ.
ಅಥವಾ ಯಾರಾದರೂ ….?
ಇಲ್ಲ ನನ್ನ ಹೆಜ್ಜೆಯನ್ನೇ ಮರೆವಷ್ಟು ಬೆಳೆದುಬಿಟ್ಟನಾ?
ಹುಟ್ಟಿದಾಗ ಅಮ್ಮನ ಆಲಿಂಗನ ತೊಡೆಯನೇರಿದೆ
ಹುಟ್ಟಿದೊಂದಷ್ಟು ದಿನ ಅಮ್ಮನೆಜ್ಜೆ ಗುರುತುಗಳೇ ನನ್ನವು
ಹೆಜ್ಜೆ ಬರುವರೆಗೂ ಮೂಡಿಸಲಾಗಲಿಲ್ಲ
ಸಾಯುವಾಗಲೂ ಯಾರೋ ನಾಲ್ಕು ಜನರ
ಹೆಜ್ಜೆ ಗುರುತುಗಳೇ ನನ್ನವಾಗವುವು ಅಲ್ಲೂ ನನ್ನವೇನಿಲ್ಲ
ಈ ನಡುವಿನವಷ್ಟೇ ನನ್ನವು ಅವೂ ಕೆಲವು ಅಸ್ಪಷ್ಟ
ಸ್ಪಷ್ಟವಾಗಿ ಇಟ್ಟ ಹೆಜ್ಜೆಗಳೂ ಮಾಸಿ ಹೋದಂತಿವೆ
ಅವಿದ್ದರೆ ಬೆರಳೆಣಿಕೆಯಷ್ಟು ಮಾತ್ರ
ಅವುಗಳೂ ಬೇರೆಯವರ ಹಿಂಬಾಲಿಸಿ ಅವರದೇ ಗುರುತಂತಿವೆ.
ಸ್ವಂತಿಕೆಯೇ ಇಲ್ಲದ ಮೇಲೆ ಗುರುತಿಸುವುದಾದರೂ ಹೇಗೆ ನಾನವನ?
ಹೋ , ತಡಿ ತುಡಿತವೇ ಹೃದ್ಬಡಿತ ನಿಲ್ಲುವುದರೊಳಗಾಗಿ
ಅಡಿಯನಿಡು ನನ್ನದೇ ಮನ ಗುರುತಿಸುವ ಹಾಗೆ
ಲೋಕ ಗುರುತಿಸುವ ಮುನ್ನ ನನ್ನ ನಾ ಗುರುತಿಸ ಬೇಕಿದೆ
ಹೆಜ್ಜೆಗೆ ಗೆಜ್ಜೆ ಕಟ್ಟುವೆ ಎಚ್ಚರದಿ ನಡೆಯಲೆಂದು
ಮರೆತರೂ ಮೊರೆತು ಹೇಳಲಿ ಅದು ನನ್ನ ಇರುವಿಕೆಯನು.
ರಚನೆ ,: ಕುಮಾರ್ ಬಿ ಬಾಗೀವಾಳ್
👍
ReplyDeleteThank you
ReplyDelete