APPA..... An article about father and his daughter

 ಅಪ್ಪ...

ಅಪರಿಮಿತ ಪಾತ್ರಧಾರಿ


‌ಪ್ರತೀ ನಡಿಗೆಯೂ  ಅಪ್ಪನ ಹಾಗೆ , ನಗು, ಅಳು ಅಪ್ಪನ ಹಾಗೆ. ಅಪ್ಪನ ಹೆಗಲ ಮೇಲೆ ಅಂಬಾರಿಯಷ್ಟೇ ಖುಷಿ, ಅಪ್ಪನ ಕೈಹಿಡಿಕೆ ಜಗತ್ತಿನ ಯಾವುದೇ ಭದ್ರತೆಗಿಂತ ಮಿಗಿಲು. ಹೀಗೆ ಅಪ್ಪ ಅಪರಿಮಿತ ಪಾತ್ರಧಾರಿ. ನೆಲದ ಮೇಲಿನ ಯಾವುದೇ ಪ್ರೀತಿ ಅಪ್ಪ ಮಗಳ ಪ್ರೀತಿಗೆ ಹೋಲಿಕೆ ಅಸಾಧ್ಯ.. ಅದೆಷ್ಟೇ ಎತ್ತರದ ಸಾಧಕರ ಸಾಲುಗಳ ಮುಂದೆ ಅಪ್ಪನ ಸಾಧನೆಯೇ ಎತ್ತರ.ಅದೆಷ್ಟೇ ಸುರಕ್ಷತೆಯ ನಡುವೆ ಅಪ್ಪನ ಸುರಕ್ಷತೆಯೇ ಶ್ರೇಷ್ಠ. ಅಪ್ಪನ ಮೇಲಿನ ನಂಬಿಕೆ ಜವಾಬ್ದಾರಿಕೆಗೆ ನಾನು ಎಲ್ಲೋ ಓದಿದ ನೆನಪೊಂದನ್ನು ಹಂಚಿಕೊಳ್ಳಬಯಸುತ್ತೇನೆ ಕೇಳಿ. ಒಂದು ಕಡಲ ಕಿನಾರೆ ಅಲ್ಲಿ ಅಪ್ಪ ತನ್ನ ಪುಟ್ಟ ಮಗಳನ್ನು ಕರೆದುಕೊಂಡು ಮಗಳಿಗೆ ಕಡಲನ್ನು ತೋರಿಸುತ್ತ ಕಾಲಿಗೆ ಒದ್ದೆಯಾಗುವಷ್ಟು ನೀರಿನಲ್ಲಿ ನಡೆಸಾಡುತ್ತಿರುತ್ತಾನೆ. ಸ್ವಲ್ಪ ಸಮಯದಲ್ಲಿ ಅಲೆಗಳ ರಭಸ ಹೆಚ್ಚಾಗುತ್ತೆ, ಅಪ್ಪ ಮಗಳಿಗೆ ಹೇಳುತ್ತಾನೆ "ಮಗು ಅಲೆಗಳ ರಭಸ ಹೆಚ್ಚಾಗ್ತಿದೆ ನನ್ನ ಕೈಯನ್ನು ಬಿಗಿಯಾಗಿ ಹಿಡಿದುಕೊ" . ಮಗು ಅಪ್ಪನ ಕೈ ಹಿಡಿಯದೆ "ಅಪ್ಪಾ ನೀನೇ ನನ್ನ ಕೈ ಹಿಡಿದುಕೊಳ್ಳಪ್ಪಾ" ಎಂದು ಮುಂದೆ ನಡೆಯುತ್ತದೆ. ಅಪ್ಪ ಕೇಳುತ್ತಾನೆ " ಮಗು ನನ್ನ ಕೈ ಹಿಡಿದು ಎಂದರೆ ನೀನು ನನ್ನನ್ನೇ ನಿನ್ನ ಕೈ ಹಿಡಿದುಕೊ ಅನ್ತೀಯಲ್ಲ?" . ಅದಕ್ಕೆ ಮಗು ಕೊಟ್ಟ ಉತ್ತರ "ಅಪ್ಪ ಅಲೆ ಬಂದಾಗ ನಾನು ನಿನ್ನ ಕೈ ಹಿಡಿದಿದ್ದರೆ ನನ್ನ ಕೈ ಕಳಚ ಬಹುದು, ಕಳಚಿ ಅಲೆಯಲ್ಲಿ ನಾನು ಕೊಚ್ಚಿ ಹೋಗಬಹುದು, ಆದರೆ ನೀನು ನನ್ನ ಕೈ ಹಿಡಿದರೆ ಎಂತಹಾ ರಭಸದ ಅಲೆ ಬಂದರೂ ನೀನು ನನ್ನ ಬಿಡುವುದಿಲ್ಲ ಹಾಗಾಗಿ ನಿನ್ನ ಹಿಡಿಕೆಯೇ ಸರಿ ಕಣಪ್ಪ". ಆಗ ಅಪ್ಪ ಹೌದು ಮಗು ಎಂದು ಮಗಳ ಕೈ ಹಿಡಿದು ನಡೆಸುತ್ತಾ ಸಾಗುತ್ತಾನೆ.  ಈ ಸಾಲುಗಳು ಅಪ್ಪನ ಜವಾಬ್ದಾರಿ ಎಂತದ್ದು ಎಂಬದನ್ನ ,ಅಪ್ಪನಿಗೆ ಪರ್ಯಾಯ ಮತ್ಯಾರಿಲ್ಲ ಎಂಬದನ್ನ ಹೇಳುತ್ತದೆ. ಅಪ್ಪ ಎಂದರೆ ಅಮ್ಮನನ್ನ ಹೋಲಿಸಿರುವ ಧರೆ. ಅಮ್ಮ ನವಮಾಸ ಧರೆಯಾದರೆ ಅಪ್ಪ ಜೀವನಪರ್ಯಂತ ಧರೆ. 


ರಚನೆ: ಕುಮಾರ್ ಬಿ ಬಾಗೀವಾಳ್.

Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES