ಹನಿಗವನಗಳು Short poems by Kumar B Bagival
ಹನಿಗವನಗಳು
ಮುಷ್ಕರ..
ಮಾಡಯುತಿವೆ ದನಕರುಗಳು
ಮುಷ್ಕರವನು ಇಂದು
ಯಾಕೆಂದರೆ
ಅಷ್ಟೊಂದು ಮೇವ ತಿಂದ
ಲಾಲು ಹಾಲು ಕೊಡಲಿ ಎಂದು.
ಚಂದ್ರಮುಖಿ…
ಪ್ರಿಯೇ ನೀ ಚಂದ್ರಮುಖಿಯೇ ಸರಿ
ಯಾಕೆಂದರೆ
ಚಂದ್ರನಂತೆಯೇ ನಿನ್ನ ಮುಖದಲ್ಲಿಯೂ
ಮೊಡವೆ ಕಲೆಗಳ ಭಾರೀ ಕಂದಕಗಳಿವೆ.
ಕವಿತೆ..
ಕವಿತೆಯಲ್ಲ ನನದು
ಕವಿಭಾಷೆಯ ಮೂಲ
ಕನಸನೆಲ್ಲ ಓದುವೆ
ಅದೇ ನನ್ನ ಕವಿತೆಯ ಬಲ.
ರಚನೆ : ಕುಮಾರ್. ಬಿ.ಬಾಗೀವಾಳ್.
Comments
Post a Comment