ತಡೆಯದಿರು ಮನುಜ ಕಡಲ...by / KUMAR B BAGIVAL
ತಡೆಯದಿರು ಮನುಜ ಕಡಲ...
ಮರಳಿ ಸರಿ ಹೋಗದು ಮನುಜ ಹದಗೆಟ್ಟಾ ಹಾಲು
ಹುಳಿ ಬಂದ ಹಾಲು ಅದುವೆ ಬೇರೆಯವರ ಪಾಲು.
ಹಳಿ ಬದಲಿಸಿದ ಬಂಡಿ ಮುಂದೆ ಹಿಡಿಯದು ಸಾಲು
ಕಳಿಯಿತಂದು ಅದರಷ್ಟಕೆ ಬಿಡು ನೀ ಅದನು ಚಿಂತೆ ಬೇಡ.
ಖುಷಿಗಾಗಿ ತಿರುಗೋದೊಮ್ಮೆ ತಿರುಗಿ ಬೀಳೋದು ಖಚಿತ
ತಿರುಗುವಿಕೆಯಾ ತಡೆಯದಿದ್ದರೆ ನೀನು ಅದು ನಿನಗೇ ಉಚಿತ
ಮರುಗಿ ಕೊರಗದಿರೋ ಮಂಕೆ ಅರಿತಿಲ್ಲಾ ನೀ ಜಗವ
ಜಗವೆಲ್ಲಾ ಜಗಮಗ ಮಗನೇ ತಿಳಿ ಬೆಳಕ ಕಡೆಯ ಜಗವ.
ತಡೆಯುಲಾದೀತೆ ಕಡಲ ರಕ್ಕಸದಲೆಯ ಕಡಲಲೇ ನೀನು
ತರವಲ್ಲ ನಿನಗದು ನಿನ್ನ ಹಾದಿ ನಿನಗೆ ಸರಿದು ಬಿಡು ನೀನೆ
ತಡೆಯಲಾದೀತೆ ಹರಿವ ನೀರ ಕೊಚ್ಚೆ ಸೇರದ ಹಾಗೆ
ಕೊರೆದು ಕೊಚ್ಚೆ ಸೇರುವೆನೆಂದರೆ ಸೇರಲಿಬಿಡು ಅದರ ಪಾಡಿಗೆ.
ಹಣ್ಣು ಹಣ್ಣಾಗಿರುವಾಗಲಷ್ಟೇ ಅದು ನಿನ್ನ ಪಾಲು
ಹಣ್ಣು ಕೊಳೆತು ನಾರಿ ಹೆಂಡವಾದರೆ ಅದು ಕುಡುಕರ ಪಾಲು.
ಹುಣ್ಣು ಹೊಡೆದಮೇಲಿನ ಗಾಯದ ಗುರುತು ಶಾಶ್ವತ
ಹುಣ್ಣು ಕೆರೆಯದಿದ್ದರೆ ವಾಸಿ ಮಾಸುವುದು ನಿಶ್ಚಿತ.
Comments
Post a Comment