ದಣಿವರಿಯದ ದೈವ.... Danivariyada Daiva...poem about Sri Shivakumara swamiji by Kuar B Bagival.

 ದಣಿವರಿಯದ ದೈವ…



ನಡೆದ ನಡಿಗೆಯೆಲ್ಲವು ನುಡಿದ ಪದಗಳಿಗರ್ಥವು

ಮುಡಿದ ಸಂಕಲ್ಪವದು ದುಡಿವ ಕೈಗಳಿಗರ್ಥವು

ನೀಡಿದ ದಾನವದು ಮಾಡಿದ ದಾಸೋಹದರ್ಥವು

ನುಡಿದ ನುಡಿಗಳವು ವಿಶ್ವ ಬೆಳಗುವುದರ ಅರ್ಥವು.


ಹಿಡಿದ  ಜೋಳಿಗೆಯೊಂದದು ನಿತ್ಯ ಅಕ್ಷಯವಾಗಿದೆ

ಕಾಡಿದ ಹಸಿವ ನೀಗಿದ ತುತ್ತದು ಅಮೃತವೆ ತಾನಾಗಿದೆ

ಬಿಡದ ಛಲವದು ಗುರಿಯ ಮುಟ್ಟಿದೆ ಎತ್ತಲೂ ತಾ ಅಲುಗದೆ

ಮಿಡಿದ ಹೃದಯವದು ಬಿಡದೆ ಲೋಕವನೆ ತಾ ಸಲುಹಿದೆ.


ನೆಲದ ಒಲವಿಗೆ ಬಲವ ತುಂಬಿದ ನಿತ್ಯ ಕಾಯಕ

ಸೆಳೆತ ಮಕ್ಕಳ ಜ್ಞಾನ ದೀವಿಗೆ ಹೊತ್ತಿಸುವ ಪ್ರಕಾಶಕ

ಮೊಳೆವ ನಾಳಿನ ಬೀಜಕೆ ನೀರನೆರೆಯುವ ಕಾಯಕ

ಬಾಳ ದಾರಿಯುದ್ದಕೂ ನುಡಿನಡೆಯದೋ ದ್ಯೋತಕ


ಬೆಳೆದವೆಷ್ಟೋ ಕುಡಿಗಳು ಫಸಲ ನೀಡಿವೆ ದೇಶಕೆ

ಕಳೆದವೆಷ್ಟೋ ಕೊಳೆಗಳು ಶುಭವ ನುಡಿದ ವಾಕ್ಯಕೆ

ನಾಳೆ ಸೂಚನೆ ದೀವಿಗೆ ಬೆಳಗುತಿಹುದು ಜಗದಗಲಕೆ

ವೇಳೆಯ ಪರಿವೆಯಿಲ್ಲದ ಶ್ರಮವು ಜಗದ ಹಿತಕೆ.


ರಚನೆ: ಕುಮಾರ್ ಬಿ ಬಾಗೀವಾಳ್







Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES