ರಾಷ್ಟ್ರೀಯ ವಿಜ್ಞಾನ ದಿನ.(ಫೆಬ್ರವರಿ28) National science day... An article by Kumar B Bagival
ರಾಷ್ಟ್ರೀಯ ವಿಜ್ಞಾನ ದಿನ.(ಫೆಬ್ರವರಿ
<script data-ad-client="ca-pub-1254641642343099" async src="https://pagead2.googlesyndication.com/pagead/js/adsbygoogle.js"></script>
ವಿಜ್ಞಾನವಿಲ್ಲದ ಧರ್ಮ,ಧರ್ಮರಹಿತ ವಿಜ್ಞಾನ ಎರಡೂ ನಿರರ್ಥಕ. ವಿಶ್ವದ ಕಣಕಣದ ಮೇಲೆಯೂ ಬೆಳಕ ಚೆಲ್ಲಬಹುದಾದ ಶಿಸ್ತುಬದ್ಧ ಅದ್ಯಯನ ವಿಜ್ಞಾನ. ಭೂಮ್ಯೋದಯದಿಂದ, ಭೂಮ್ಯತೀತ ಕಲ್ಪಿತಗಳನ್ನು ಸಾಧಿತಗಳಿಸುವಲ್ಲಿ ನಿಲ್ಲದ ಅವಿರತ ಪ್ರಯತ್ನಗಳ ಸರಮಾಲೆ ಈ ವಿಜ್ಞಾನ. ನೆಲದ ಮೇಲಿನ ಯಾವುದೇ ದೇಶ ತನ್ನ ಅಸ್ತಿತ್ವದ ಇರುವಿಕೆಯನ್ನು,ತನ್ನ ಪ್ರಬಲತೆಯನ್ನು ದೃಢೀಕೃತವಾಗಿ ಸಾರಲು ಇಂದಿನ ದಿನಮಾನಗಳಲ್ಲಿ ಆ ದೇಶ ವೈಜ್ಞಾನಿಕವಾಗಿ ಪ್ರಬಲವಾಗಿರಬೇಕಾದ ಅನಿವಾರ್ಯತೆ ಇದೆ. ಪ್ರಖರ ವೈಜ್ಞಾನಿಕ ನೆಲೆಗಟ್ಟನ್ನ ಹೊಂದಿರುವ ದೇಶ
ವಿಶ್ವದ ಪ್ರಮುಖ ದೇಶ ಎನಿಸಿಕೊಳ್ಳುತ್ತದೆ ಎಂದಾದರೆ ಆ ದೇಶದ ವಿಸ್ತೀರ್ಣವಾಗಲಿ ಭೌಗೋಳಿಕ ಅಂಶಗಳಿಂದಾಗಲಿ ಅಲ್ಲ ಅದು ಕೇವಲ ವೈಜ್ಞಾನಿಕ ಬೆಳವಣಿಗೆಯಿಂದಾಗಿ ಮಾತ್ರ ಸಾಧ್ಯ ಎಂಬುದನ್ನು ಒಪ್ಪಲೇಬೇಕು. ಹಾಗಾಗಿ ವಿಜ್ಞಾನದ ಕಲಿಕೆ ಬೆಳವಣಿಗೆ ಒಂದು ದೇಶಕ್ಕೆ ಅನಿವಾರ್ಯ. ದೇಶದ ಮಾನವ ಸಂಪನ್ಮೂಲವನ್ನು ವೈಜ್ಞಾನಿಕವಾಗಿ ಸದೃಢವಾಗಿಸುವುದು ಬಹುಮುಖ್ಯ ಕಾರ್ಯಗಳಲ್ಲಿ ಅತೀ ಪ್ರಮುಖವಾದದ್ದು. ದೇಶದ ಪ್ರಗತಿ ಪರ ಯೋಚನೆಗಳು ಯೋಜನೆಗಳಾಗಿ ಬದಲಾಗಬೇಕಾದ ಸಂದರ್ಭದಲ್ಲಿ ವೈಜ್ಞಾನಿಕ ಶೋದನೆ, ವೈಜ್ಞಾನಿಕ ಮನೋಗುಣಗಳನ್ನು ಮೈಗೂಡಿಸಿಕೊಂಡು ಸಾಗಬೇಕಾದುದು ಅನಿವಾರ್ಯ. ಆ ನಿಟ್ಟಿನಿಂದಲೆ ಭಾರತ ಸರ್ಕಾರ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತಾ ಬಂದಿದೆ. ಆಚರಣೆ ಅನುಕರಣೆಯಾಗಬೇಕು ಎಂಬ ಉದ್ದೇಶ ಮಾತ್ರವಲ್ಲದೆ ಬೆಳೆಯಬೇಕು, ಬಳಕೆಯಾಗಬೇಕು ಎಂಬುದೂ ನಿಶ್ಚಿತವಾಗಬೇಕು. ಭಾರತೀಯರಾಗಿ ನಾವು ವಿಶ್ವದ ವೈಜ್ಞಾನಿಕ ಕ್ಷೇತ್ರದಲ್ಲಿ ಮುನ್ನಡೆಯಲ್ಲಿರುವ ರಾಷ್ಟ್ರ ನಮ್ಮದು ಎಂಬ ಹೆಮ್ಮೆ ಹೊಂದಬೇಕಿದೆ. ವಿಜ್ಞಾನದ ಪ್ರಾಮುಖ್ಯತೆಯನ್ನು ದೇಶದ ಯುವಜನತೆಗೆ ತಿಳಿಸಬೇಕಿದೆ. ಆದ್ದರಿಂದ ಘನ ಭಾರತ ಸರ್ಕಾರ ಫೆಬ್ರವರಿ 28ನ್ನು ಪ್ರತೀ ವರ್ಷ ಒಂದು ಹೊಸ ಪರಿಕಲ್ಪನೆಯೊಂದಿಗೆ ಆಚರಿಸುತ್ತಾ ಬಂದಿದೆ. ಮೊತ್ತಮೊದಲ ಭಾರಿ 1987 ಫೆಬ್ರವರಿ 28 ರಂದು ಆಚರಿಸಲಾಯಿತು. ತದನಂತರ ಪ್ರತೀ ವರ್ಷ ಒಂದೊಂದು ಥೀಮ್ ನೊಂದಿಗೆ ಆಚರಿಸುತ್ತಾ ಬರಲಾಗುತ್ತಿದೆ. ಆ ಥೀಮ್ ನೊಂದಿಗೆ ವಿಜ್ಞಾನವನ್ನು ವಿಕಾಸವಾಗಿಸುವ ವಿಷಯಾಧಾರಿತ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ಸಂಕಲ್ಪ ಸರ್ಕಾರದ್ದು. ಸರ್ಕಾರದ ಮಟ್ಟದ ಕಾರ್ಯಕ್ರಮ ಮಾತ್ರವಾಗದೆ ವೈಜ್ಞಾನಿಕ ಸಂವಹನ ಜನಸಾಮಾನ್ಯರಿಗೂ ತಲುಪಿಸುವ ಕಾರ್ಯಕ್ರಮವನ್ನಗಿಸುವ ಸದುದ್ದೇಶ ವೈಜ್ಞಾನಿಕ ಸಂಸ್ಥೆಗಳದ್ದು. ಆ ನಿಟ್ಟಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ದೇಶದಾದ್ಯಂತ ಭಾರತ ದೇಶ ಭೂಪಟದಲ್ಲಿ ಇರುವವರೆಗೂ ಅದರೊಟ್ಟಿಗೆ ಇರುವ ಹೆಸರು ಶ್ರೀ ಸಿ ವಿ ರಾಮನ್ ಅವರ ಸಾಧನೆ ನೆನಪಾಗಿ ಫೆಬ್ರವರಿ 28 ರಂದು ಆಚರಿಸಲಾಗುತ್ತಿದೆ.
ಫೆಬ್ರವರಿ 28 ರಂದೇ ಆಚರಿಸುವುದು ಯಾಕಾಗಿ ಎಂಬದರ ಹಿಂದೆ ಭಾರತದ ವೈಜ್ಞಾನಿಕ ಕ್ಷೇತ್ರದ ಪ್ರಖರ ಬೆಳಕು ವಿಶ್ವಕ್ಕೆ ಬೆಳಗಿದ ಸತ್ಯ ಇದೆ ಎಂಬದೇ ಭಾರತೀಯರೆಲ್ಲರ ಹೆಮ್ಮೆ. ಫೆಬ್ರವರಿ 28 ವಿಶ್ವಕ್ಕೆ ಸಿ ವಿ ರಾಮನ್ ಅವರ "ರಾಮನ್ ಪರಿಣಾಮ " ಪರಿಚಯವಾದ ದಿನ .
<script data-ad-client="ca-pub-1254641642343099" async src="https://pagead2.googlesyndication.com/pagead/js/adsbygoogle.js"></script>
ರಾಮನ್ ಅವರ ಪರಿಚಯ: ಮತ್ತು ಕೊಡುಗೆ
ಭಾರತದ ಹೆಮ್ಮೆಯ ಪುತ್ರನೊಬ್ಬನ ಜನನ 1888 ರ ನವೆಂಬರ್7 ರಂದು ತಮಿಳುನಾಡಿನ ತಿರುಚಿರಾಪಳ್ಳಿಯ ಹಿಂದೂ ತಮಿಳ್ ಬ್ರಾಹ್ಮಣ ಕುಟುಂಬದ ಚಂದ್ರಶೇಖರ ರಾಮನಾಥನ್ ಅಯ್ಯರ್ ಹಾಗೂ ಪಾರ್ವತಿ ಅಮ್ಮಾಳ್ ಅವರ ಎಂಟು ಮಕ್ಕಳಲ್ಲಿ ಎರಡನೇ ಪುತ್ರರಾಗಿ ಜನಿಸಿದರು. ಸೆಕಂಡರಿ ಶಿಕ್ಷಣವನ್ನು ಸೇಂಟ್ ಅಲೋಶಿಯಸ್ ಆಂಗ್ಲೋ ಇಂಡಿಯನ್ ಹೈಸ್ಕೂಲ್ ನಲ್ಲಿ ಮುಗಿಸಿದ ರಾಮನ್ ಅವರು, ಪದವಿಯನ್ನು ಮದ್ರಾಸ್ ಯೂನಿವರ್ಸಿಟಿಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಯೂನಿವರ್ಸಿಟಿಗೇ ಪ್ರಥಮರಾಗಿ ಪಡೆದರು. ಅವರ ಪ್ರಥಮ ಸಂಶೋಧನಾ ಪೇಪರ್ 1906 ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗಲೇ ಪ್ರಕಟವಾಯಿತು. ತಮ್ಮ ಸ್ನಾತಕ ಪದವಿ ನಂತರ ಕೋಲ್ಕತ್ತಾದಲ್ಲಿ ಭಾರತೀಯ ಆರ್ಥಿಕ ಸೇವೆ ಸೇರಿ ಸಹಾಯಕ ಅಕೌಂಟ್ ಜನರಲ್ ಆಗಿ ವೃತ್ತಿ ಆರಂಭಿಸಿದ ರಾಮನ್ ಅವರು ತದನಂತರ ಭಾರತದ ಪ್ರಥಮ ಸಂಶೋಧನಾ ಸಂಸ್ಥೆ ಐ.ಎ.ಎಸ್ ಸಿ ಸೇರುವುದರ ಮೂಲಕ ಅಕೌಸ್ಟಿಕ್ ಹಾಗು ಆಪ್ಟಿಕ್ಸ್ ನಲ್ಲಿ ಸಂಶೋಧನೆ ನಡೆಸಿ ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಅಭೂತಪೂರ್ವ ಕೊಡುಗೆ ನೀಡಿದರು. 1917ರಲ್ಲಿ ಕೋಲ್ಕತಾ ಯೂನಿವರ್ಸಿಟಿ ಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆಗೆ ಸೇರುತ್ತಾರೆ. ಒಮ್ಮೆ ಯೂರೋಪಿನ ಪ್ರವಾಸದಲ್ಲಿ ಅವರ ಗಮನ ಸೆಳೆದ ಅಂಶ ಮೆಡಿಟರೇನಿಯನ್ ಸಮುದ್ರದ ನೀರಿನ ಬಣ್ಣ. ಮನದ ತುಂಬ ಕುತೂಹಲಭರಿತ ಅಂಶಗಳ ಗೊಂಚಲನ್ನೇ ತುಂಬಿಕೊಂಡ ರಾಮನ್ ಅವರು ಬೆಳಕಿನ ಬಗ್ಗೆ ತಮ್ಮ ಸಂಶೋಧನೆ ನಡೆಸು ಸಜ್ಜಾಗುತ್ತಾರೆ. ಪ್ರವಾಸವೊಂದು ರಾಮನ್ ಅವರ ಹೆಸರನ್ನ ವಿಶ್ವಕ್ಕೆ ಪರಿಚಯಿಸುವ ಆಕಸ್ಮಿಕ ಘಟನೆಯಾಗಿ ಅಡಿಗಲ್ಲಾಗುತ್ತದೆ, ಅಂದಿಗೆ ಭಾರತದ ಮಟ್ಟಿಗೆ ನೊಬೆಲ್ ಪುರಸ್ಕಾರವೆಂಬ ಗಗನ ಕುಸುಮವೊಂದು ಭಾರತಾಂಬೆಯ ಮುಡಿಗೇರಲು ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಸಾಕಷ್ಟು ಧಾತುಗಳು, ಸಂಯುಕ್ತಗಳ ರಚನಾ ವಿನ್ಯಾಸಗಳು ತೆರೆದುಕೊಳ್ಳವ ಬಾಗಿಲಾಗುತ್ತದೆ. ಅಂದಿಗೆ ಸಮುದ್ರದ ಬಣ್ಣ ನೀಲಿಯಾಗಲು ಕಾರಣವೇನಂಬದರ ಬಗೆಗಿನ ವಿಶ್ವದ ಅರಿವನ್ನು ಅದರ ಬದಲಾಗಿ ಬೇರೆ ಕಾರಣವಿದೆ ಎಂದು ತೋರಿಸಿದ ಘಳಿಗೆಗೆ ನಾಂದಿಯಾಗುತ್ತದೆ.
ಆಕಾಶದ ಬಣ್ಣ ನೀಲಿ ಏಕೆ? ಎಂದು ಪ್ರಶ್ನಿಸಿದ ಪ್ರಶ್ನೆಗೆ ಖ್ಯಾತ ವಿಜ್ಞಾನಿ ಲಾರ್ಡ್ ರ್ಯಾಲೆ ಆಕಾಶದ ಬಣ್ಣಕ್ಕೆ ಬೆಳಕಿನ ಚದುರುವಿಕೆ ಎಂದು ಉತ್ತರಿಸುತ್ತಾರೆ. ಸೂರ್ಯನಿಂದ ಬರುವ ಏಳೂ ಬಣ್ಣಗಳ ತರಂಗದೂರಗಳನ್ನು ಅಭ್ಯಸಿಸಿದ ಲಾರ್ಡ್ ರ್ಯಾಲೆ ಅವರು" ಬೆಳಕಿನ ಚದುರುವಿಕೆಯ ತೀವ್ರತೆಯು ಬೆಳಕಿ ಕಿರಣಗಳ ತರಂಗದೂರದ ನಾಲ್ಕರ ಘಾತಕ್ಕೆ ವಿಲೋಮಾನುಪಾತದಲ್ಲಿರುತ್ತದೆ " ಎಂದು ವಿವರಿಸುತ್ತಾರೆ . ಅಂತೆಯೇ ನೀಲಿಬಣ್ಣದ ತರಂಗದೂರ ಕಡಿಮೆ ಇರುವುದರಿಂದ ಹೆಚ್ಚಿಗೆ ಚದುರಿಕೊಂಡು ಆಕಾಶ ನೀಲಿಯಾಗಿದೆ ಎಂದು ತಿಳಿಸುತ್ತಾರೆ. ಅಂತೆಯೇ ಹೆಚ್ಚು ತರಂಗದೂರವುಳ್ಳ ಕೆಂಪುಬಣ್ಣ ಹೆಚ್ಚು ಚದುರುವಿಕೆಯನ್ನು ಪಡೆದುಕೊಳ್ಳದು ಅದು ನೇರ ಭೂಮಿಗೆ ತಲುಪಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಮುಗಿಲು ಕೆಂಪಗಿರುತ್ತದೆ.
ಅದಿರಲಿ ಸಮುದ್ರದ ಬಣ್ಣ ನೀಲಿಯಾಗಿರಲು ಕಾರಣ ಲಾರ್ಡ್ ರ್ಯಲೆ ಅವರ ಆಕಾಶದ ನೀಲಿಬಣ್ಣದ ಚದುರುವಿಕೆಯ ಪ್ರತಿಫಲನ ಎಂದೇ ನಂಬಿದ್ದಸತ್ಯವನ್ನು ಅಲ್ಲಗಳೆಯುತ್ತಾರೆ ಸಿ ವಿ ರಾಮನ್ನರು. ಯೂರೋಪ್ ಪ್ರವಾಸಕ್ಕೆಂದು ಸಮುದ್ರ ಮಾರ್ಗದ ಮೂಲಕ ಪ್ರಯಾಣಿಸುತ್ತಿದ್ದ ಅವರು ತಮ್ಮ ಬಳಿಯಿದ್ದ ಪಾಕೇಟ್ ಸೈಜ್ ಸ್ಪೆಕ್ಟ್ರೋಸ್ಕೋಪ್ ಹಾಗು ನಿಕಲ್ ಪ್ರಿಸಮ್ ಮೂಲಕ ಸಮುದ್ರದ ನೀರಿನಮೇಲ್ಮೈ ಯನ್ನು ವೀಕ್ಷಿಸಲು ಸೂರ್ಯನ ಬೆಳಕು ಪ್ರತಿಫಲಿಸದೆ ಸಮುದ್ರದ ನೀರಿನ ಮೇಲ್ಮೈ ನಿಂದ ಒಳಕ್ಕೆ ಕೇಂದ್ರೀಕರಿಸುತ್ತಿರುವುದನ್ನು ವೀಕ್ಷಿಸುತ್ತಾರೆ ಅದಕ್ಕೆ ಕಾರಣವನ್ನೂ ವಿಶ್ವಕ್ಕೆ ತಿಳಿಸುತ್ತಾರೆ. ಸೂರ್ಯನಿಂದ ಸಮುದ್ರದ ಮೇಲ್ಮೈ ಮೂಲಕ ಕೇಂದ್ರೀಕರಸಿದ ಬೆಳಕಿನ ಕಿರಣಗಳಲ್ಲಿ ಹೆಚ್ಚಿನ ತರಂಗದೂರವುಳ್ಳ ಕೆಂಪು,ಕಿತ್ತಳೆ ಬಣ್ಣಗಳು ಹೀರಲ್ಪಟ್ಟು ಕಡಿಮೆ ತರಂಗದೂರಗಳುಳ್ಳ ನೀಲಿ ಬಣ್ಣ ಹೆಚ್ಚು ಚದುರುವುದರಿಂದ ಸಮುದ್ರದ ಬಣ್ಣ ನೀಲಿಯಾಗಿದೆ ಎಂದು ಪ್ರಾಯೋಗಿಕವಾಗಿ ವಿವರಿಸುತ್ತಾರೆ.
1923ರಲ್ಲಿ ಮತ್ತೊಂದು ಬೆಳಕಿನ ಚದುರುವಿಕೆಗೆ ಸಂಬಂಧಿಸಿದಂತೆ ಪ್ರಯೋಗ ಕೈಗೊಳ್ಳುವ ರಾಮನ್ ಅವರು ಫೆಬ್ರವರಿ 28,1928 ರಂದು ಬೆಳಕಿನ ಕಿರಣಗಳು ಕೆಲವು ದ್ರಾವಣ ಹಾಗು ಘನಗಳ ಮೇಲೆ ಪತನವಾದಾಗ ಪತನ ಬೆಳಕಿನ ಘಟಕ ಕಿರಣಗಳಿಗಿಂತ ಭಿನ್ನ ತರಂಗೂರವುಳ್ಳ ಹೋಸ ಕಿರಣಗಳನ್ನು ಗಮನಿಸುತ್ತಾರೆ. ಅಂದರೆ ಏಕವರ್ಣೀಯ ಬೆಳಕೂ ಕೆಲವು ದ್ರಾವಣಗಳಲ್ಲಿ (ಬೆಂಜೀನ್) ಚದುರುವಿಕೆಯನ್ನ ಪ್ರದರ್ಶಿಸಬಲ್ಲವು ಎಂಬುದು. ಅದರಲ್ಲಿನ ಅಣುಗಳಿಂದ ಚದುರುತ್ತದೆ ಎಂಬ ಅಂಶವನ್ನು ತೋರಿಸುವುದಕ್ಕಾಗಿಯೇ ವಿದ್ಯುತ್ ಕಾಂತೀಯ ತರಂಗಗಳ ಅದ್ಯಯನಕ್ಕಾಗಿ ಸ್ಪೆಕ್ಟ್ರೋಗ್ರಾಫ್ ಎಂಬ ಉಪಕರಣವನ್ನು ಕಂಡುಹಿಡಿಯುತ್ತಾರೆ. ಪಾದರಸದ ಛಾಪಾದೀಪದಿಂದ ಪಡೆದ ಏಕವರ್ಣೀಯ ಬೆಳಕನ್ನ ಸ್ಪೆಕ್ಟ್ರೋಗ್ರಾಫ್ ಮೇಲೆ ಬೀಳುವಂತೆ ಮಾಡಿ ಬೆಳಕಿನ ರೋಹಿತವನ್ನು ಪಡೆಯುವ ಈ ಉಪಕರಣ ಆ ಅಣು,ಧಾತುವಿನ ರಚನೆಯ ವಿನ್ಯಾಸವನ್ನು ತಿಳಿಸುತ್ತದೆ. ಈ ಮಹತ್ವದ ದಿನವನ್ನು ಭಾರತದಾದ್ಯಂತ "ರಾಷ್ಟ್ರೀಯ ವಿಜ್ಞಾನ ದಿನ"ವಾಗಿ ಆಚರಿಸಲಾಗುತ್ತಿದೆ.
<script data-ad-client="ca-pub-1254641642343099" async src="https://pagead2.googlesyndication.com/pagead/js/adsbygoogle.js"></script>
ಮನ್ ಸ್ಪೆಕ್ಟ್ರೋಗ್ರಾಫ್, ರಾಮನ್ ಪರಿಣಾಮದ ಫಲಿತ ಇದರ ಸಂಶೋಧನೆಯಿಂದಾಗಿ ಕೆಲವೇ ಕೆಲವು ದಿನಗಳಲ್ಲಿ ಪರಿಹಾರ ಕಾಣದಿದ್ದ ಅಪಾರ ಪ್ರಮಾಣದಲ್ಲಿ ಅಣು,ಧಾತು,ಸಂಯುಕ್ತಗಳ ರಚನಾ ವಿನ್ಯಾಸವನ್ನು ತಿಳಿಯಲಾಗುತ್ತದೆ. ಇದರ ಮಹತ್ವವನ್ನರಿತು ವಿಜ್ಞಾನ ಕ್ಷೇತ್ರದಲ್ಲಿ 1928ರಲ್ಲೇ ಬರಬೇಕಿದ್ದ ಭಾರತದ ಪ್ರಥಮ ನೊಬೆಲ್ ಪ್ರಶಸ್ತಿ ಜೂನ್ 1930ರಲ್ಲಿ ಘೋಷಣೆಯಾಗುತ್ತದೆ, ನವೆಂಬರ್ ನಲ್ಲಿ ಪಡೆದುಕೊಳ್ಳುತ್ತಾರೆ.
ಭಾರತ ಸರ್ಕಾರ 1954ರಲ್ಲಿ ಪ್ರಥಮ ಭಾರತ ರತ್ನ ಪುರಸ್ಕಾರವನ್ನು ನೀಡಿ ಗೌರವಿಸಿದೆ. ತಮ್ಮ ಅಂತಿಮ ದಿನಗಳನ್ನು ತಮ್ಮ ಮೆಚ್ಚಿನ ಬೆಂಗಳೂರಿನಲ್ಲಿ ಕಳೆದ ಸಿ.ವಿ.ರಾಮನ್ ಅವರು 21ನವೆಂಬರ್ 1970ರಲ್ಲಿ ತಮ್ಮ 82ನೇ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು.
ಬೆಂಗಳೂರಿನ ಐಐಎಸ್ಸಿ ,ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಇವರ ಕೊಡುಗೆಗಳಾಗಿವೆ.
ಲೇಖಕರು : ಕುಮಾರ್ ಬಿ ಬಾಗೀವಾಳ್.<script data-ad-client="ca-pub-1254641642343099" async src="https://pagead2.googlesyndication.com/pagead/js/adsbygoogle.js"></script>
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಮೇಟಗಳ್ಳಿ
ಮೈಸೂರು
Thank you madam
ReplyDeleteNice sir 👌👌
ReplyDeleteSuperb
ReplyDelete