ಪ್ರತೀಕ್ಷೆ….. a poem by KUMAR B Bagival
ಪ್ರತೀಕ್ಷೆ….. ಕಾಣದ ಚಡಪಡಿಕೆ ಒಮ್ಮೆಲೇ .. ಬಾಣದ ತೀಕ್ಷ್ಣತೆ ಈ ಕಣ್ಣಲೇ ಬಂದುಬಿಡು ಕಣ್ಣ ಮುಂದೆ ಹಾಗೇ ಮರುಕಳಿಸಿ. ನಿನಗೊಪ್ಪಿದ ದೇಹ ನಿನಗಾಗಿಯೇ ಈ ಗೇಹ ಒಪ್ಪಿಸಿಕೊಂಡುಬಿಡು ಒಮ್ಮೆಲೆ ಸುಮ್ಮನೆ ಅಪ್ಪಿಕೊಳುವ ಬಯಕೆ ನನಗೆ ಬಿಮ್ಮನೆ ಬಿಡಲೊಲ್ಲೆ ಹಿಡಿದ ಕೈಬೆರಳ ಬೇಡಿಕೆಯೊಂದೆ ನನದು ಸುಳಿ ಸನಿಹ ಮರಳಿ ನಡೆದು ಸಾಗಬೇಕಿದೆ ನಿನ್ನೊಟ್ಟಿಗೆ ಒರಳಿ ಹರಳುರಿವ ನಿನ್ನ ಮಾತಿಗೆ ಸೋತು ಬೆರಳಿಡಿವ ಮನಸಾಗಿದೆ ನನಗೆ ಕೊರಳೊಡ್ಡು ನೀ ಸ್ವಂತವಾಗುವೆ ಈಗಲೆ. ಚೆಂದ ಹೆಚ್ಚಿಸ ಬೇಕಿದೆ ಜಗದ ನಿಂದ ಕ್ಷಣದಲೇ ನಿನ್ನಿಂದಲೆ ಬೆಂದ ಗರಿಕೆ ಚಿಗುರಿ ನಿಂತಿದೆ ಹಸಿರ ಚೆಲ್ಲಿ ಇಲ್ಲಿ. ಭಾನಿಗೂ ಈ ಬಾಳಿಗೂ ಏನೊ ಸಂಬಂಧವು ತಂಬೆಲರಿಗೂ ನಿನ್ನ ಮೋಹಕೂ ಏನೋ ಸಂಬಂಧವು ಬಂದು ಬಿಡು ಒಮ್ಮೆಗೆ ಪ್ರತೀಕ್ಷಿಸೋ ನನ್ನೊಂದಿಗೆ ಮನಕೆ. ರಚನೆ : ಕುಮಾರ್ ಬಿ ಬಾಗೀವಾಳ್