ಮಂದಾಗ್ನಿ Mandagni a poem by Kumar B B Bagival
ಮಂದಾಗ್ನಿ ನಿನ್ನೊಳಗಿನ ಮಂದಾಗ್ನಿಯೊಮ್ಮೆ ಉರಿಯಲಿ ಬಿಡು ಸೊನ್ನೆಯೊಳಧಿಕ ಮೌಲ್ಯವ ಕಾಣುವ ಹಾಗಿರಲಿ ಬಿಡು ಮುನ್ನಿನೊಳು ಸಾಲು ಕರೆವ ಹಸುಗಳ ಕೆಚ್ಛಲ ಹಾಲು ಹೆತ್ತು ತೈಲವಾಗುವ ಹಾಲು ಅಗ್ನಿವರ್ಧಕವಾಗೊ ಓಲು. ತೇಲುವ ಕರಿಮೋಡವೊಂದು ಬರಸಿಡಿಲ ಸಿಡಿಸಲಿ ಬಿಡು ಕಾಡುವ ಮನವೊಂದು ಬಾಡುವ ಮುನ್ನ ಮುನ್ನಲೆಗೆ ಬರಲಿ ಬಿಡು ಬಾಡುವ ಹೂವೊಂದು ಬಾಡುವ ಮುನ್ನ ಸುಗಂದವ ಸೂಸಲಿ ಬಿಡು ನೋಡುವ ನೋಟವದು ಮುಂದಿನ ದಾರಿಗೆ ರಹದಾರಿಯಾಗಲಿ ಬಿಡು. ಚಕ್ರದೊಳು ಗಾಳಿಯಾಗಲಿ ಬಿಡು ಸರಾಗ ಸಾಗಲು ಎದೆಯೊಳಗಿನ ಉಸಿರಾಗಲಿ ಬಿಡು ದೇಹ ಸಾಗಲು ಮೌನದೊಳಗಿನ ಮಾತಾಗಲಿ ಬಿಡು ಮನ ಮಾಗಲು ಬಂದಿಯಾಗಲಿ ಬಿಡು ಕೋಳವಿಲ್ಲದೆ ಮನಸ ಲೂಟಿಮಾಡಲು ರಚನೆ : ಕುಮಾರ್ ಬಿ ಬಾಗೀವಾಳ್.