ವಚನಾನುಕರಣೆ vachananukarane By: Kumar B Bagival
ಅನುಕರಣೆ ೩: ದಿನಾಂಕ ೨೨/೧೦/೨೦೨೦ ಶಿವಶರಣ ಅಂಬಿಗರ ಚೌಡಯ್ಯ ರಚಿತ ಅರಿಯದ ಗುರು ಅರಿಯದ ಶಿಷ್ಯಂಗೆ ಅಂಧಕನ ಕೈಯನಂಧಕ ಹಿಡಿದಡೆ ಮುಂದನಾರು ಕಾಬರು ಹೇಳಲೆ ಮರುಳೆ. ತೊರೆಯಲದ್ದವನನೀಸಲರಿಯದವ ತೆಗೆವ ತೆರನಂತೆಂದನಂಬಿಗ ಚೌಡಯ್ಯ. ವಿವರ: ಹನ್ನೆರಡನೆಯ ಶತಮಾನ ಭರತಖಂಡ ಕಂಡ ಅದ್ಭುತ ಸಾಮಾಜಿಕ ಬದಲಾಾವಣೆಗಳನ್ನು ಕಂಡ ಕಾಲ. ಅಣ್ಣ ಬಸವಣ್ಣನವರ ಮಾರ್್ಗ್ಗದರ್ಶನ ದೊರೆತ ಸಂದರ್ಭದಲ್ಲಿ , ಪ್ರತೀ ವಚನಕಾರರು ಸಮಾಜ ತಿದ್ದುವ ಕೆಲಸ ಮಾಡಿದರು. ಅವರು ನಡೆದಂತೆ ನುಡಿದವರು. ಅದರಲ್ಲೂ ಅಂಬಿಗರ ಚೌಡಯ್ಯ ನವರು ಇದ್ದದ್ದನ್ನು ಇದ್ದಹಾಗೆ ನುಡಿದವರು. ಈ ವಚನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ಹೇಗಿರಬೇಕು ಎಂಬುದನ್ನು ನಿದರ್ಶನ ಸಹಿತ ಹೇಳಿದ್ದಾರೆ. ಶಿಕ್ಷಣ ನಿಂತ ನೀರಲ್ಲ ಸದಾ ಹರಿಯುತ್ತಿರುವುದು ಅದರ ಲಕ್ಷಣ. ಶಿಕ್ಷಣವೆಂಬ ಜ್ಯೋತಿ ಸಂಜೀವಿನಿ ಸದಾ ದೀಪದಿಂದ ದೀಪವ ಹಚ್ಚುವ, ಹೆಚ್ಚುವ ನಂದದ ದೀಪ. ಗುರು ನಿರಂತರ ಅಭ್ಯಾಸ ಮಾಡುತ್ತಿರಬೇಕು, ಅಭ್ಯಾಸ ಮಾಡುತ್ತಾ ನಿರಂತರ ಅರಿವನ್ನು ಪಡೆಯುತ್ತಿರಬೇಕು.ಸದಾ ಜ್ಞಾನವನ್ನು ಪಡೆಯುವ ಪ್ರನಯತ್ನದಲ್ಲಿ ನಿರತನಾಗಿರಬೇಕು. ಪಡೆದ ಜ್ಞಾನದ ಸದ್ಬಳಕೆಯಾಗಬೇಕು. ತಾನು ತನ್ನ ಶಿಷ್ಯರಿಗೆ ಮಾದರಿಯಾಗಿ ಇರಬೇಕು. ತಾನು ಉತ್ತಮನಾಗಿದ್ದರೆ ಮಾತ್ರ ತನ್ನ ಶಿಷ್ಯರಿಗೆ ಉತ್ತಮವಾದದನ್ನು ಕೊಡಲು ಸಾದ್ಯ ಎಂಬುದರ ಅರಿವು ಗುರುವಿಗೆ ಸದಾ ಜಾಗೃತವಾಗಿರಬೇಕು. ಸಮಾಜದ ಪ್ರತೀ ಕ್ಷೇತ್ರದ ಉತ್ತಮತೆ ಗುರುವಿ...